ಸೋಮವಾರ, ಜುಲೈ 1, 2024
ಮಾಜಿ ಸಿಎಂ ವೀರಪ್ಪ ಮೊಯ್ಲಿ ಪುತ್ರಿ ನಿಧನ.!-ವಿಶ್ವಕಪ್ ಕಿರೀಟ ಗೆದ್ದ ಬೆನ್ನಲ್ಲೇ ಕ್ರಿಕೆಟ್ ದಂತಕಥೆ ವಿರಾಟ್ ಕೊಹ್ಲಿ T20 ಕ್ರಿಕೆಟ್ ನಿಂದ ನಿವೃತ್ತಿ ಘೋಷಣೆ!-ಬುಮ್ರ, ಹಾರ್ದಿಕ್ ಮ್ಯಾಜಿಕ್ ಬೌಲಿಂಗ್; ಸೂರ್ಯಕುಮಾರ್ ಸಕತ್ ಕ್ಯಾಚ್ - ಭಾರತಕ್ಕೆ ವಿಶ್ವಕಪ್-ಬಹು ವರ್ಷಗಳ ಕನಸು ನನಸು; ಟಿ-20 ವಿಶ್ವಕಪ್ ಕಿರೀಟ ಗೆದ್ದ ಭಾರತ-ಪ್ರವಾಸಿಗರ ಗಮನಕ್ಕೆ; ಕೊಡಗಿನ ಗಾಜಿನ ಸೇತುವೆ ಬಂದ್.!-ಉಜಿರೆ: ಭೀಕರ ರಸ್ತೆ ಅಪಘಾತ ; ಬೆಳ್ತಂಗಡಿಯ ಪ್ರಜ್ವಲ್ ಕಾಂಪ್ಲೆಕ್ಸ್ ಮಾಲೀಕರ ಪುತ್ರ ಪ್ರಜ್ವಲ್ ನಾಯಕ್ ಮೃತ್ಯು..!-11-21% ಟಾರಿಪ್ ಹೆಚ್ಚಿಸಿದ ಏರ್ಟೆಲ್; ಜುಲೈ 3 ರಿಂದ ಯಾವ ಪ್ಲಾನ್ ಗೆ ಹೇಗಿದೆ ದರ.?-ಕಾರ್ಕಳ: ಬಸ್ ಚಲಾವಣೆ ವೇಳೆ ಅಸ್ವಸ್ಥಗೊಂಡ ಚಾಲಕ; ಹಿಮ್ಮುಖವಾಗಿ ಬಸ್ ಚಲಿಸಿ 40ಕ್ಕೂ ಹೆಚ್ಚು ಪ್ರಯಾಣಿಕರು ಪಾರು.!-ಸಂಸತ್ತಲ್ಲಿ ನೀಟ್‌ ಕುರಿತು ರಾಹುಲ್‌ ಗಾಂಧಿ ಮಾತಾಡುವಾಗ ಮೈಕ್‌ ಆಫ್; ಕಾಂಗ್ರೆಸ್ ಗಂಭೀರ ಆರೋಪ-ಭೀಕರ ರಸ್ತೆ ಅಪಘಾತ; ನಿಂತಿದ್ದ ಲಾರಿಗೆ ಟಿಟಿ ವಾಹನ ಡಿಕ್ಕಿ,13 ಮಂದಿ ದುರ್ಮರಣ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಉಜಿರೆ: ಭೀಕರ ರಸ್ತೆ ಅಪಘಾತ ; ಬೆಳ್ತಂಗಡಿಯ ಪ್ರಜ್ವಲ್ ಕಾಂಪ್ಲೆಕ್ಸ್ ಮಾಲೀಕರ ಪುತ್ರ ಪ್ರಜ್ವಲ್ ನಾಯಕ್ ಮೃತ್ಯು..!

Twitter
Facebook
LinkedIn
WhatsApp
ಉಜಿರೆ: ಭೀಕರ ರಸ್ತೆ ಅಪಘಾತ ; ಬೆಳ್ತಂಗಡಿಯ ಪ್ರಜ್ವಲ್ ಕಾಂಪ್ಲೆಕ್ಸ್ ಮಾಲೀಕರ ಪುತ್ರ ಪ್ರಜ್ವಲ್ ನಾಯಕ್ ಮೃತ್ಯು..!

ಉಜಿರೆ: ಬೆಳ್ಳಂಬೆಳಗ್ಗೆ ಭೀಕರ ಅಪಘಾತದಲ್ಲಿ ಬೆಳ್ತಂಗಡಿ ಪ್ರಜ್ವಲ್ ಕಾಂಪ್ಲೆಕ್ಸ್ ಮಾಲೀಕರ ಪುತ್ರ ಪ್ರಜ್ವಲ್ ನಾಯಕ್ (35) ಮೃತಪಟ್ಟಿದ್ದಾರೆ. ಉಜಿರೆ ಮುಖ್ಯದ್ವಾರದಿಂದ ಕಾಲೇಜು ರಸ್ತೆಯಲ್ಲಿ ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಕಾಲೇಜು ರಸ್ತೆಯಿಂದ ಬೆಳ್ತಂಗಡಿ ಸಾಗುವ ರಸ್ತೆಯಾಗಿ ಅಪಘಾತ ನಡೆದಿದೆ.

ವೇಗವಾಗಿ ಬಂದ ಕಾರು ಡಿವೈಡರ್ ಮೇಲಿನ ಬೀದಿದೀಪಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಪ್ರಜ್ವಲ್ ತಲೆಗೆ ಗಂಭೀರ ಗಾಯವಾಗಿದ್ದು, ಕೂಡಲೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಪ್ರಜ್ವಲ್ ಅವರು ಬೆಳ್ತಂಗಡಿ ಸಂತೆಕಟ್ಟೆ ನಿವಾಸಿ ಹೆಸರಾಂತ ಉದ್ಯಮಿ, ಪ್ರಜ್ವಲ್ ಕಾಂಪ್ಲೆಕ್ಸ್ ಮಾಲೀಕ ಪ್ರಮೋದ್ ಆರ್. ನಾಯಕ್ ಅವರ ಪುತ್ರ. ಪ್ರಜ್ವಲ್ ಉಜಿರೆಯ ಡಿ.ಎಂ. ಗೌಡ ಕಾಂಪ್ಲೆಕ್ಸ್ ನಲ್ಲಿ ಗೇಮಿಂಗ್ ಶಾಪ್ ಮಾಲೀಕ ಹಾಗೂ ಉದ್ಯಮಿಯಾಗಿದ್ದರು.

ಕಾರ್ಕಳದಲ್ಲಿ ಕಣ್ಣೆದುರೇ ಬಾವಿ ನುಂಗಿದ ಭೂಮಿ..!?

ಕಾರ್ಕಳ: ನೋಡು ನೋಡುತ್ತಿದ್ದಂತೆ ಮನೆಯೆದುರಿನ ಬಾವಿಯೊಂದು ಭೂಕುಸಿತಕ್ಕೊಳಗಾದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನೆಲ್ಲಿಕಟ್ಟೆಯ ಸರ್ವಿಸ್ ಸ್ಟೇಶನ್ ಸಮೀಪ ನಡೆದಿದೆ.

ಬಾವಿ ಕುಸಿಯುತ್ತಿರುವ ದೃಶ್ಯ ವೈರಲ್ ಆಗಿದೆ. ಮನೆಯಂಗಳದಲ್ಲೇ ಇದ್ದ ಬಾವಿ ಮನೆಯವರ ಕಣ್ಣೆದುರೇ ಕುಸಿತಕ್ಕೊಳಗಾಗಿ ಭೂಮಿಯಡಿ ಸೇರಿಕೊಂಡಿದೆ. ಇದೀಗ ಬಾವಿ ಪಕ್ಕದಲ್ಲೇ ಇರುವ ಮನೆ ಕೂಡ ಅಪಾಯವನ್ನು ಎದುರಿಸುತ್ತಿದ್ದು, ಮನೆಯವರು ಆಂತಕಕ್ಕೀಡಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಹಲವೆಡೆ ಭೂಕುಸಿತ ಉಂಟಾಗಿದೆ.

ಭೂಕುಸಿತದಿಂದ ಅಪಾಯದಲ್ಲಿರುವ ಮನೆಗಳು: ನಿವಾಸಿಗಳ ಸ್ಥಳಾಂತರಕ್ಕೆ ಡಿಸಿ ಸೂಚನೆ

ಮಂಗಳೂರು: ನಗರದ ಕಾವೂರು ಸೂಜಿಕಲ್ ಗುಡ್ಡೆ ಎಂಬಲ್ಲಿ ಭೂಕುಸಿತದಿಂದ ಕೆಲವು ಮನೆಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು, ತಕ್ಷಣವೇ ಅಲ್ಲಿನ ನಿವಾಸಿಗಳ ಸ್ಥಳಾಂತರಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಸೂಚಿಸಿದ್ದಾರೆ.

ಅವರು ಗುರುವಾರ  ಮಂಗಳೂರು ತಾಲೂಕಿನ ವಿವಿಧ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಕಾವೂರು ಸೂಜಿಕಲ್ ಗುಡ್ಡೆಯಲ್ಲಿ ಖಾಸಗಿ ಮನೆ ಕಟ್ಟಡ ನಿರ್ಮಿಸಲು ಅಗೆಯಲಾದ ಮಣ್ಣಿನಿಂದ ಎತ್ತರದ ಪ್ರದೇಶದಲ್ಲಿರುವ ಮನೆಗಳು ಕೆಳಗೆ ಬೀಳುವ ಸ್ಥಿತಿಯಲ್ಲಿವೆ. ಈ ನಿಟ್ಟಿನಲ್ಲಿ ಇಲ್ಲಿನ ನಿವಾಸಿಗಳನ್ನು ಬೇರೆಡೆ ಬಾಡಿಗೆ ಮನೆಗಳಿಗೆ ಸ್ಥಳಾಂತರಿಸಲು ಅವರು ಮಂಗಳೂರು ಮಹಾನಗರಪಾಲಿಕೆ ಆಯುಕ್ತ ರಿಗೆ ನಿರ್ದೇಶಿಸಿದರು. ಅಲ್ಲದೇ, ಘಟನೆಗೆ ಕಾರಣರಾದ ಖಾಸಗಿ ಮನೆಯ ನಿರ್ಮಾಣ ಕಾಮಗಾರಿಯನ್ನು ನಿಲ್ಲಿಸಲು ಸೂಚಿಸಿದರು.

ಬಳಿಕ ಕೆಂಜಾರು ಶ್ರೀ ದೇವಿ ಕಾಲೇಜು ಆವರಣದಲ್ಲಿ ಉಂಟಾದ ಭೂಕುಸಿತ, ಮರವೂರು ಅಂತೋನಿಕಟ್ಟೆ ಎಂಬಲ್ಲಿ ಕಾಂಕ್ರೀಟ್ ತಡೆಗೋಡೆ ಕುಸಿದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ನಂತರ ಸುರತ್ಕಲ್ ಬಾಳ ಸಮೀಪ ಐ.ಎಸ್.ಪಿ.ಆರ್.ಎಲ್. ಗೆ ಸೇರಿದ ಪೈಪ್ ಲೈನ್ ಹಾದುಹೋದ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ತುರ್ತು ಕ್ರಮ ಕೈಗೊಳ್ಳಲು ಐ.ಎಸ್.ಪಿ.ಆರ್.ಎಲ್. ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ ಪಕ್ಕದಲ್ಲಿ ಹಾದು ಹೋಗಿರುವ ಸಾರ್ವಜನಿಕ ರಸ್ತೆಯ ಸಮೀಪ ತಡೆ ಬೇಲಿ ಹಾಕಲು ತಿಳಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್, ಉಪವಿಭಾಗಾಧಿಕಾರಿ ಹರ್ಷವರ್ಧನ್,  ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ಮತ್ತಿತರರು ಇದ್ದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ