ನಗರದ ಮೇಲೆ ಏಳು ಕ್ಷಿಪಣಿಗಳನ್ನು ಹಾರಿಸಲಾಗಿದ್ದು, S-300 ಕ್ಷಿಪಣಿಗಳು, 10 ಅಪಾರ್ಟ್ಮೆಂಟ್ ಕಟ್ಟಡಗಳು ಹಾಗೂ ಇತರೆ ಸೈಟ್‌ಗಳನ್ನು ಧ್ವಂಸ ಮಾಡಿವೆ. ಇದರಿಂದಾಗಿ ಕಟ್ಟಡಗಳ ಮಹಡಿಗಳು ಕುಸಿದಿದ್ದು, 8 ಮಂದಿ ಮೃತಪಟ್ಟಿದ್ದಾರೆ. ಬದುಕುಳಿದವರಿಗಾಗಿ ರಕ್ಷಣಾ ತಂಡವು ಶೋಧ ನಡೆಸುತ್ತಿದೆ.
ಉಕ್ರೇನ್ ವಸತಿ ಕಟ್ಟಡದ ಮೇಲೆ ರಷ್ಯಾ ಕ್ಷಿಪಣಿ ದಾಳಿ – 8 ಸಾವು, 21 ಮಂದಿಗೆ ಗಾಯ
Twitter
Facebook
LinkedIn
WhatsApp
ಕೈವ್: ಪೂರ್ವ ಉಕ್ರೇನ್ (East Ukrain) ನಗರದ ಸ್ಲೋವಿಯನ್ಸ್ಕ್‌ನಲ್ಲಿರುವ ವಸತಿ ಕಟ್ಟಡದ ಮೇಲೆ ರಷ್ಯಾದ ಕ್ಷಿಪಣಿ ದಾಳಿ (Attack) ನಡೆಸಿದ ಹಿನ್ನೆಲೆ 8 ಜನರು ಸಾವನ್ನಪ್ಪಿದ್ದು, 21 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಶುಕ್ರವಾರ ಸಂಜೆ ತುರ್ತು ಕಾರ್ಯಾಚರಣೆಗಳು ಆರಂಭಗೊಂಡಿದ್ದು, ಅವಶೇಷಗಳನ್ನು ಹೊರತೆಗೆಯುವ ವೇಳೆ 2 ವರ್ಷದ ಮಗುವೊಂದು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವುದು ಕಂಡುಬಂದಿದೆ. ತಕ್ಷಣವೇ ಮಗುವನ್ನು ಅವಶೇಷಗಳ ಮಧ್ಯದಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯೆ ಮಗು ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ನಾಗರಿಕರನ್ನು ಸೈನ್ಯಕ್ಕೆ ಸಜ್ಜುಗೊಳಿಸುವ ಸಲುವಾಗಿ ಮಸೂದೆಯೊಂದಕ್ಕೆ ಸಹಿ ಹಾಕಿದ್ದಾರೆ. ದೇಶದಿಂದ ಪಲಾಯನ ಮಾಡುವುದನ್ನು ನಿರ್ಬಂಧಿಸಿದ ನಂತರ ಈ ದಾಳಿ ನಡೆದಿದೆ ಎನ್ನಲಾಗಿದೆ.