ಒನ್ ವೆಬ್ ಇಂಡಿಯಾ -2 (OneWeb India-2) ಮಿಷನ್‍ನ ಭಾಗವಾಗಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ವೆಹಿಕಲ್ ಮಾರ್ಕ್-3 ರಾಕೆಟ್ ಅನ್ನು ಕಕ್ಷೆಗೆ ಹಾರಿಸಿದೆ. ಬ್ರಿಟನ್ ಮೂಲದ ಒನ್‍ವೆಬ್ ಗ್ರೂಪ್‍ಗೆ ಸೇರಿದ 36 ಉಪಗ್ರಹಗಳನ್ನು ಹೊತ್ತ ಇಸ್ರೋದ ಅತ್ಯಂತ ಭಾರವಾದ ಲಾಂಚ್ ವೆಹಿಕಲ್ ಮಾರ್ಕ್ – 3 ಉಡಾವಣಾ ನೌಕೆ ನಭಕ್ಕೆ ಹಾರಿತು.
ಇಸ್ರೋ ಮತ್ತೊಂದು ಮೈಲಿಗಲ್ಲು; 36 ಉಪಗ್ರಹಗಳ ಯಶಸ್ವಿ ಉಡಾವಣೆ

ಉಪಗ್ರಹ ಉಡಾವಣೆ ಬೆನ್ನಲ್ಲೇ ಒನ್‍ವೆಬ್ ಟ್ವೀಟ್ ಮಾಡಿದೆ. ಯಶಸ್ವಿ ಉಡಾವಣೆಗಾಗಿ ಇಸ್ರೋ ಹಾಗೂ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್‌ನಲ್ಲಿರುವ ಎಲ್ಲಾ ಸಹೋದ್ಯೋಗಿಗಳಿಗೆ ಧನ್ಯವಾದಗಳನ್ನು ತಿಳಿಸಿದೆ. ಇದು ಸರ್ಕಾರಕ್ಕೆ ಹಾಗೂ ಕಂಪನಿಗಳಿಗೆ ಸಂಪರ್ಕವನ್ನು ಸಕ್ರಿಯಗೊಳಿಸುತ್ತದೆ ಎಂದು ಟ್ವೀಟ್‍ನಲ್ಲಿ ತಿಳಿಸಿದೆ.
We have lift off!
— OneWeb (@OneWeb) March 26, 2023
Thanks to our colleagues at @isro and @NSIL_India for a successful launch. If you don’t already, make sure to follow us for more updates throughout the rest of the mission.#OneWebLaunch18 ? pic.twitter.com/TsYbCZzAnP
ಈ ವರ್ಷ ಇಸ್ರೋ ನಡೆಸಿದ 2ನೇ ರಾಕೆಟ್ ಉಡಾವಣೆ ಇದಾಗಿದೆ. ಈ ಉಡಾವಣೆಯೊಂದಿಗೆ ಒನ್‍ವೆಬ್ ತನ್ನ 616 ಉಪಗ್ರಹಗಳನ್ನು ಕಕ್ಷೆಯಲ್ಲಿ ಹೊಂದಿದೆ. ಈ ಮಿಷನ್ ಭಾರತದಿಂದ ಉಡಾವಣೆ ಮಾಡುತ್ತಿರುವ ಒನ್‍ವೆಬ್‍ನ ಎರಡನೇ ಉಪಗ್ರಹವಾಗಿದೆ. ಬ್ರಿಟನ್ ಮತ್ತು ಭಾರತೀಯ ಬಾಹ್ಯಾಕಾಶ ಉದ್ಯಮಗಳ ನಡುವಿನ ಸಹಯೋಗಕ್ಕೆ ಇದು ಮಾದರಿಯಾಗಿದೆ ಎಂದು ಒನ್‍ವೆಬ್ ಈ ಹಿಂದೆ ಹೇಳಿತ್ತು.
ಮೊದಲ ಬಾರಿ 2022ರ ಅಕ್ಟೋಬರ್ 23ರಂದು ಇಸ್ರೋನ 36 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು.