ಭಾನುವಾರ, ಮೇ 19, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

‘ಇನ್ ಕಾರ್’ ಸಿನಿಮಾದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ರಿತಿಕಾ ಸಿಂಗ್

Twitter
Facebook
LinkedIn
WhatsApp
rani abbakka 96225570 3

ರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ ರಿತಿಕಾ ಸಿಂಗ್ (Ritika Singh) ನಟಿಸಿರುವ ’ಇನ್ ಕಾರ್’ (In Car) ಪ್ಯಾನ್ ಇಂಡಿಯಾ ಚಿತ್ರವು ಹರಿಯಾಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಂತ ನೈಜ ಅಂಶಗಳನ್ನು ಆರಿಸಿಕೊಂಡು ಅದನ್ನು ಚಿತ್ರರೂಪಕ್ಕೆ ತರಲಾಗಿದೆ. ರಚನೆ, ಚಿತ್ರಕಥೆ ಮತ್ತು ನಿರ್ದೇಶನ ಹರ್ಷವರ್ಧನ್ (Harsh Vardhan) ಅವರದ್ದು. ಅಂಜುಮ್‌ ಖುರೇಶಿ ಹಾಗೂ ಸಾಜಿದ್‌ ಖುರೇಶಿ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

May be a closeup of one or more people, jewelry and text that says 'VS Vasanth Saravanan'

ಸಸ್ಪೆನ್ಸ್, ಥ್ರಿಲ್ಲರ್ ಕಥೆಯು ಒಂದು ದಿನದಲ್ಲಿ ನಡೆಯುತ್ತದೆ. ಕಥಾನಾಯಕಿ ಮುಗ್ದೆ 23 ವಯಸ್ಸಿನ ಸಾಕ್ಷಿ ಗುಲಾಟಿ ಕಾಲೇಜಿಗೆ ಹೋಗಲು ಬಸ್‌ಗಾಗಿ ಕಾಯುತ್ತಿರುವಾಗ, ಸೋದರರಾದ ರಿಚ್ಚಿ, ಯಶ್ ಹಾಗೂ ಈತನ ಮಾಮ ಕಾರೊಂದರಲ್ಲಿ ಈಕೆಯನ್ನು ಅಪಹರಿಸುತ್ತಾರೆ. ಈಗಾಗಲೇ ಮುತ್ಸದ್ದಿ ಬ್ರಿಜೇಶ್ ಚಲಾಯಿಸುತ್ತಿದ್ದ ಆ ಕಾರನ್ನು ಹೈಜಾಕ್ ಮಾಡಿದ್ದು, ಕೊಲೆ ಕೇಸ್‌ನಲ್ಲಿ ಅಪರಾಧಿಯಾಗಿರುವ ರಿಚ್ಚಿಯನ್ನು ಪೋಲೀಸರಿಂದ ಮರೆಮಾಚಲು ವಾಹನವನ್ನು ಬಳಸಿಕೊಂಡಿರುತ್ತಾರೆ.

May be an image of one or more people

ಆಕೆ ದುರಳರಿಂದ ರಕ್ಷಿಸಿಕೊಳ್ಳಲು ಎರಡು ಗಂಟೆ ಸಮಯವಿರುತ್ತದೆ. ಇಲ್ಲದಿದ್ದಲ್ಲಿ ಪಾಣಿಪತ್ ಬಳಿ ಇರುವ ಸುಟ್ಟುಹೋದ ಕಾರ್ಖಾನೆಯಲ್ಲಿ ಅತ್ಯಾಚಾರವೆಸಗಿ ನಂತರ ಸಾಯಿಸಲು ಸಂಚು ರೂಪಿಸಿರುತ್ತಾರೆ. ಎಲ್ಲರೂ ಸುರಕ್ಷಿತ ಸ್ಥಳ ತಲುಪಿದಾಗ ಇವಳನ್ನು ಏನು ಮಾಡುವುದೆಂದು ಚರ್ಚೆ ನಡೆಸುತ್ತಾರೆ. ಹಾಗೆಯೇ ಚಿತ್ರದಲ್ಲಿ ಮಹಿಳೆಯನ್ನು ಒಂದು ವಸ್ತುವಾಗಿ ತೋರಿಸಲಾಗಿದೆ. ರಿಚ್ಚಿ ತನ್ನ ಸಹೋದರಿಯೊಂದಿಗೆ ಸಂಬಂಧ ಹೊಂದಿದ್ದರಿಂದ ವ್ಯಕ್ತಿಯನ್ನು ಕೊಲೆ ಮಾಡಲು ಪರಾರಿಯಾಗಿರುತ್ತಾನೆ.

May be an image of 1 person and standing

ಪುರುಷರು ಮಹಿಳೆಯೊಂದಿಗಿನ ಅವರ ಸಂಬಂಧವನ್ನು ಅವಲಂಬಿಸಿದಾಗ ಹೇಗೆ ಕುರುಡರಾಗುತ್ತಾರೆ. ಇದೇ ಸಮಯದಲ್ಲಿ ಅವಳು ಇವರಿಂದ ತಪ್ಪಿಸಿಕೊಳ್ಳಲು ತನ್ನದೆ ಮಾರ್ಗಗಳನ್ನು ಕಂಡುಕೊಳ್ಳುತ್ತಾಳೆ. ಸಾಕ್ಷಿ ನರಕದಿಂದ ಬದುಕಿ ಬರುತ್ತಾಳಾ ಎನ್ನುವ ಕುತೂಹಲಕಾರಿ ಅಂಶಗಳು ಇದರಲ್ಲಿದೆ ಎನ್ನುತ್ತಾರೆ ನಿರ್ದೇಶಕರು.  ಈ ಸಿನಿಮಾವು ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಸಿದ್ದಗೊಂಡಿದೆ.

No photo description available.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ