ಗುರುವಾರ, ಮಾರ್ಚ್ 6, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಇನ್ಸ್ಟಾಗ್ರಾಮ್ ನಲ್ಲಿ ಪರಿಚಯ ; ತನ್ನ ಆರು ವರ್ಷದ ಮಗಳೊಂದಿಗೆ ಪ್ರಿಯಕರನಿಗಾಗಿ ಭಾರತಕ್ಕೆ ಬಂದ ಪೋಲೆಂಡ್ ಮಹಿಳೆ

Twitter
Facebook
LinkedIn
WhatsApp
death iStock 1 4 2

ರಾಂಚಿ: ಪ್ರಿಯಕರನಿಗಾಗಿ ಅಕ್ರಮವಾಗಿ ಭಾರತಕ್ಕೆ ಬಂದ ನಾಲ್ಕು ಮಕ್ಕಳ ತಾಯಿ, ಪಾಕ್‌ ಮಹಿಳೆ ಸೀಮಾ ಹೈದರ್‌ ಅವರ ವಿಚಾರ ಸುದ್ದಿಯಲ್ಲಿರುವಾಗಲೇ ಇದೀಗ ಅಂಥದ್ದೇ ಘಟನೆಯೊಂದು ಜಾರ್ಖಂಡ್‌ ನ ಹಜಾರಿಬಾಗ್‌ನ ಖುತ್ರಾ ಗ್ರಾಮದಲ್ಲಿ ನಡೆದಿದೆ.
ಪೋಲೆಂಡ್ ದೇಶದ ಬಾರ್ಬರಾ ಪೋಲಾಕ್ ತನ್ನ 6 ವರ್ಷದ ಮಗಳೊಂದಿಗೆ ಇನ್ಸ್ಟಾಗ್ರಾಮ್‌ ಮೂಲಕ ಪರಿಚಯವಾದ ಜಾರ್ಖಂಡ್‌ ನ ಹಜಾರಿಬಾಗ್‌ನ ಖುತ್ರಾ ಗ್ರಾಮದ 35 ವರ್ಷದ ಶಾದಾಬ್ ಮಲ್ಲಿಕ್ ಅವರಿಗಾಗಿ ಭಾರತಕ್ಕೆ ಬಂದಿದ್ದಾರೆ.

2021 ರಲ್ಲಿ ಇನ್‌ಸ್ಟಾಗ್ರಾಮ್ ನಲ್ಲಿ 47 ವರ್ಷದ ಬಾರ್ಬರಾ ಪೋಲಾಕ್ ಹಾಗೂ ಶಾದಾಬ್ ಮಲ್ಲಿಕ್ ಅವರು ಸ್ನೇಹಿತರಾಗಿದ್ದಾರೆ. ಸ್ನೇಹಿತರಾಗಿ ಪರಸ್ಪರ ಚಾಟಿಂಗ್‌ ಮಾಡುತ್ತಿದ್ದವರು ಆತ್ಮೀಯರಾಗಿದ್ದಾರೆ. ಈ ಆತ್ಮೀಯತೆ ಇಬ್ಬರ ನಡುವೆ ಪ್ರೇಮ ಹುಟ್ಟುವಂತೆ ಮಾಡಿದೆ. ತನ್ನ ಪ್ರಿಯಕರ ಮಲ್ಲಿಕ್‌ ನನ್ನು ನೋಡಲು ಪೋಲೆಂಡ್‌ ನಿಂದ ಪ್ರವಾಸಿ ವೀಸಾದಿಂದ ತನ್ನ 6 ವರ್ಷದ ಮಗಳೊಂದಿಗೆ ಬಾರ್ಬರಾ ಪೋಲಾಕ್ ಜಾರ್ಖಂಡ್‌ ನ ಹಜಾರಿಬಾಗ್‌ನ ಖುತ್ರಾ ಗ್ರಾಮಕ್ಕೆ ಬಂದಿದ್ದಾರೆ.

ಈ ಹಿಂದೆಯೇ ಬಾರ್ಬರಾ ಪೋಲಾಕ್ ಅವರು ತನ್ನ ಪತಿಯಿಂದ ವಿಚ್ಛೇದನವನ್ನು ಪಡೆದಿದ್ದು, ಮಲ್ಲಿಕ್‌ ಅವರೊಂದಿಗೆ ಪ್ರೇಮವಾದ ಬಳಿಕ, ಇದೀಗ ಇಬ್ಬರು ಮದುವೆಯಾಗಲು ಸಿದ್ದರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹಜಾರಿಬಾಗ್ ಎಸ್‌ ಡಿಎಂ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ.

ಪೋಲೆಂಡ್‌ ನಿಂದ ಭಾರತಕ್ಕೆ ಬಂದಾಗ ಬಾರ್ಬರಾ ಮೊದಲು ಹೊಟೇಲ್‌ ನಲ್ಲಿದ್ದರು. ಆ ಬಳಿಕ ನಮ್ಮ ಗ್ರಾಮಕ್ಕೆ ಬಂದಿದ್ದಾರೆ. ಇಲ್ಲಿ ಅವರಿಗೆ ಅತಿಯಾದ ಸೆಕೆಯಾದ ಪರಿಣಾಮ ನಾವು ಎಸಿ ಹಾಗೂ ಅವರ ಕೋಣೆಗೆ ಹೊಸ ಕಾಲರ್ ಟಿವಿಯನ್ನು ಅಳವಡಿಸಿದ್ದೇವೆ ಎಂದು ಪ್ರಿಯಕರ ಮಲ್ಲಿಕ್‌ ಹೇಳುತ್ತಾರೆ.

ಇನ್ನೊಂದೆಡೆ ಬಾರ್ಬರಾ ಮಲ್ಲಿಕ್‌ ಅವರಿಗೆ ಮನೆ ಕೆಲಸದಲ್ಲೂ ಸಹಾಯ ಮಾಡುತ್ತಿದ್ದಾರೆ. ಹಸುವಿನ ಸಗಣಿ ಸ್ವಚ್ಛಗೊಳಿಸುವ ಕೆಲಸ, ಅಂಗಳ ಗುಡಿಸುವ ಮುಂತಾದ ಕೆಲಸವನ್ನು‌ ಅವರು ಗ್ಲೋಸ್ ಹಾಕಿಕೊಂಡು ಮಾಡುತ್ತಿದ್ದಾರೆ. ಮಲ್ಲಿಕ್‌ ಅವರು ಒಬ್ಬ ಉತ್ತಮ ಗುಣದ ವ್ಯಕ್ತಿತ್ವವುಳ್ಳವರೆಂದು ಬಾರ್ಬರಾ ಹೇಳುತ್ತಾರೆ.

ಇತ್ತ ವಿದೇಶಿ ಮಹಿಳೆ ಗ್ರಾಮಕ್ಕೆ ಬಂದ ಸುದ್ದಿ ತಿಳಿಯುತ್ತಿದ್ದಂತೆ ಹಜಾರಿಬಾಗ್ ಪ್ರಧಾನ ಕಚೇರಿಯ ಡಿಎಸ್‌ಪಿ ರಾಜೀವ್ ಕುಮಾರ್ ಮತ್ತು ಇನ್ಸ್‌ಪೆಕ್ಟರ್ ಅಭಿಷೇಕ್ ಕುಮಾರ್ ಗ್ರಾಮಕ್ಕೆ ಭೇಟಿ ನೀಡಿ ಪೋಲಾಕ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಅವರು ತನ್ನ ವೀಸಾವನ್ನು ಪೊಲೀಸ್ ಅಧಿಕಾರಿಗಳಿಗೆ ತೋರಿಸಿ, ಮುಂದಿನ ದಿನಗಳಲ್ಲಿ ತನ್ನ ದೇಶಕ್ಕೆ ಹಿಂತಿರುಗುವುದಾಗಿ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.

ಏಸು ಭೇಟಿಗಾಗಿ ಉಪವಾಸ – 400ಕ್ಕೂ ಹೆಚ್ಚು ಮಂದಿ ಸಾವು, 610 ಜನ ನಾಪತ್ತೆ

ನೈರೋಬಿ: ಉಪವಾಸ ಮಾಡಿದರೆ ಏಸು ಕ್ರಿಸ್ತನನ್ನು (Jesus) ಭೇಟಿಯಾಗಬಹುದು ಎಂಬ ನಕಲಿ ಧಾರ್ಮಿಕ ಬೋಧಕನ ಮಾತನ್ನು ಕೇಳಿ ಉಪವಾಸ (Fasting) ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 403ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, 12 ಜನರ ಶವ ಕೀನ್ಯಾದ (Kenya) ಶಕಹೊಲ (Shakahola) ಅರಣ್ಯದಲ್ಲಿ ಪತ್ತೆಯಾಗಿದೆ.

ಮೃತಪಟ್ಟವರಲ್ಲಿ ಹೆಚ್ಚಿನವರು ಗುಡ್ ನ್ಯೂಸ್ ಇಂಟರ್‌ನ್ಯಾಷನಲ್ ಚರ್ಚ್‌ನ ಸಂಸ್ಥಾಪಕ, ಬೋಧಕ ಪೌಲ್ ಮೆಕೆಂಜಿ ಅನುಯಾಯಿಗಳಾಗಿದ್ದರು. ಉಪವಾಸ ಮಾಡಿದರೆ ಏಸುಕ್ರಿಸ್ತನನ್ನು ಸೇರಬಹುದು ಎಂಬ ಆತನ ಮಾತನ್ನು ನಂಬಿದ ಅನುಯಾಯಿಗಳು ಉಪವಾಸ ಮಾಡಿದ್ದು, 403ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ 610ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. 

ಸದ್ಯ ಉಪವಾಸ ಮಾಡಲು ಸಲಹೆ ನೀಡಿದ ಆರೋಪಿ ಪೌಲ್ ಮೆಕೆಂಜಿ ಮತ್ತು ಇನ್ನಿತರ 36 ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಪತ್ತೆಯಾದ 610ಕ್ಕೂ ಹೆಚ್ಚು ಜನರು ಅರಣ್ಯದ ಸುತ್ತಲಿನ ಗ್ರಾಮದವರಾಗಿದ್ದಾರೆ. ಇದುವರೆಗೆ ಹೊರತೆಗೆದ 403 ಮೃತದೇಹಗಳ ಪೈಕಿ 253 ದೇಹಗಳಲ್ಲಿ ಡಿಎನ್‌ಎ ಹೊಂದಾಣಿಕೆಯನ್ನು ನಡೆಸಲಾಗಿದೆ. 

ಆರೋಪಿ ಪಾದ್ರಿ 2017ರಲ್ಲಿ ಮಕ್ಕಳಿಗೆ ಶಾಲೆಗೆ ಹೋಗಬೇಡಿ, ಬೈಬಲ್ ಶಿಕ್ಷಣವನ್ನು ಮಾನ್ಯ ಮಾಡುವುದಿಲ್ಲ ಎಂದು ಪ್ರಚಾರ ಮಾಡಿದ್ದ. ಅಲ್ಲದೇ ಜನರಿಗೆ ಏಸುಕ್ರಿಸ್ತನ ಭೇಟಿ ಮಾಡಲು ಅವಕಾಶ ಕಲ್ಪಿಸುವುದಾಗಿ ಹೇಳಿ ಜನರನ್ನು ಅರಣ್ಯಕ್ಕೆ ಕರೆಸಿ ಅಲ್ಲಿ ಉಪವಾಸ ಮಾಡಿಸುತ್ತಿದ್ದ. 

ಮೃತಪಟ್ಟವರ ಶವಗಳನ್ನು ಅಧಿಕೃತವಾಗಿ ಪರೀಕ್ಷೆ ನಡೆಸಿದಾಗ ಹೆಚ್ಚಿನವರು, ಅಪೌಷ್ಟಿಕತೆ, ಉಸಿರುಗಟ್ಟುವಿಕೆ ಮುಂತಾದ ತೊಂದರೆಯಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಶೋಧನೆಗಳನ್ನು ಮುಖ್ಯ ಸರ್ಕಾರಿ ರೋಗಶಾಸ್ತ್ರಜ್ಞ ಜೋಹಾನ್ಸೆನ್ ಓಡುರ್ ದೃಢಪಡಿಸಿದ್ದಾರೆ. ಇದರಲ್ಲಿ ಹೆಚ್ಚಿನವರು ಹಸಿವಿನಿಂದ ಸಾವನ್ನಪ್ಪಿದ್ದಾರೆ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist