ಇದು ಬೈಕಾ ಅಥವಾ ದೋಣಿಯೋ, ನದಿಯಲ್ಲಿ ಬೈಕ್ ರೈಡ್ ಮಾಡಿದ ವ್ಯಕ್ತಿ

ಬಜಾಜ್ ಪಲ್ಸರ್(Bajaj Pulsar) ಬೈಕ್ ಮೇಲೆ ಕುಳಿತು ಸವಾರನೊಬ್ಬ ನದಿ ದಾಡುತ್ತಿರುವ ವಿಡಿಯೋ ಇದೀಗಾ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಸಾಮಾಜಿಕ ಜಾಲತಾಣ(Social Media) ದಲ್ಲಿ ಪ್ರತೀ ದಿನ ಸಾಕಷ್ಟು ವಿಡಿಯೋಗಳು ಹರಿದಾಡುತ್ತಿರುತ್ತದೆ. ಅದರಲ್ಲಿ ಕೆಲವೊಂದು ಭಾರೀ ಸುದ್ದಿಯಲ್ಲಿರುತ್ತದೆ. ಇದೀಗಾ ಬೈಕ್ ಸವಾರನೊರ್ವ ನದಿಯಲ್ಲಿ ಬೈಕ್ ಓಡಿಸುತ್ತಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಈ ವಿಡಿಯೋ ಆನ್‌ಲೈನ್‌ನಲ್ಲಿ ಸಾಕಷ್ಟು ಗಮನ ಸೆಳೆದಿದ್ದು, ಅನೇಕ ಜನರು ವ್ಯಕ್ತಿಯ ಧೈರ್ಯಶಾಲಿ ಸಾಹಸಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ವಿಡಿಯೋದಲ್ಲಿ ವ್ಯಕ್ತಿಯು ತನ್ನ ಬಜಾಜ್ ಪಲ್ಸರ್ ಮೋಟಾರ್‌ಸೈಕಲ್‌ನಲ್ಲಿ ಸವಾರಿ ಮಾಡುವಾಗ ಇಳಿಜಾರು ಮತ್ತು ನದಿಗೆ ಇಳಿಯುವುದನ್ನು ಕಾಣಬಹುದು. ಈ ವಿಡಿಯೋ ನೋಡುಗರಲ್ಲಿ ಆಶ್ಚರ್ಯಚಕಿತರನ್ನಾಗಿ ಮಾಡಿಸಿದೆ. ಆನ್‌ಲೈನ್‌ನಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕ ಬಳಕೆದಾರರು ಬೈಕ್ ಸವಾರನ ದಿಟ್ಟತನಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸಾಕಷ್ಟು ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
The perfect example of "Where there is a will there's a way"
— MotorOctane (@MotorOctane) April 6, 2023
Thoughts about this? Very clever or just very risky? pic.twitter.com/FgYfaFlOtt
ಬೈಕ್ ಎಂಜಿನ್ ಒಳಗಡೆ ನೀರು ಹೋದರೆ ಹೇಗೆ? ಎಂದು ಟ್ವಿಟರ್ ಬಳಕೆದಾರರೊಬ್ಬರು ಪ್ರಶ್ನೆ ಮಾಡಿದ್ದಾರೆ. ಅಲ್ಲಿನ ಸ್ಥಳೀಯರು ಬಾಲ್ಯದಿಂದಲೂ ಅಲ್ಲಿ ವಾಸಿಸುತ್ತಿರುವುದರಿಂದ ನದಿಯ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.