ಗುರುವಾರ, ಮಾರ್ಚ್ 13, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಇಂದು ರಿಮೋಟ್ ವೋಟಿಂಗ್ ಮೆಷಿನ್ ಬಗ್ಗೆ ಚರ್ಚಿಸಲು ಸರ್ವ ಪಕ್ಷಗಳ ಸಭೆ

Twitter
Facebook
LinkedIn
WhatsApp
363938 1673805454

ಹೊಸದಿಲ್ಲಿ: ಭಾರತದ ಚುನಾವಣಾ ಆಯೋಗ ದೇಶೀಯ ವಲಸೆ ಮತದಾರರಿಗಾಗಿ ದೂರ ನಿಯಂತ್ರಿತ ವಿದ್ಯುನ್ಮಾನ ಮತಯಂತ್ರ(ಆರ್‌ವಿಎಂ)ದ ಮೂಲ ಮಾದರಿಯನ್ನು ಅಭಿವೃದ್ಧಿಪಡಿಸಿದೆ. ಬಹುಕ್ಷೇತ್ರದ ದೂರ ನಿಯಂತ್ರಿತ ವಿದ್ಯುನ್ಮಾನ ಮತ ಯಂತ್ರ ಇದಾಗಿದ್ದು, ಇದರ ಮೂಲಕ ಒಂದೇ ದೂರ ನಿಯಂತ್ರಿತ ಮತಗಟ್ಟೆಯಿಂದ 72 ಕ್ಷೇತ್ರಗಳ ಮತದಾನವನ್ನು ನಿರ್ವಹಿಸಬಹುದು. ಈ ವ್ಯವಸ್ಥೆಯಿಂದ ವಲಸೆ ಮತದಾರರು ಎಲ್ಲೇ ಇದ್ದರೂ ಮತ ಚಲಾಯಿಸಲು ಸಾಧ್ಯವಾಗಲಿದೆ.

ದೂರ ನಿಯಂತ್ರಿತ ವಿದ್ಯುನ್ಮಾನ ಮತ ಯಂತ್ರ (ರಿಮೋಟ್ ವೋಟಿಂಗ್ ಮೆಷಿನ್-ಆರ್‌ವಿಎಂ) ದ ಪ್ರಾತ್ಯಕ್ಷಿಕೆ ನೀಡಲು ಹಾಗೂ ಅದರ ಬಗ್ಗೆ ಚರ್ಚಿಸಲು ಚುನಾವಣಾ ಆಯೋಗ ಜನವರಿ 16ರಂದು ಎಲ್ಲ ರಾಷ್ಟ್ರೀಯ ಪಕ್ಷಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳ ಸಭೆ ಕರೆದಿದೆ.

ದೇಶೀಯ ವಲಸಿಗರು ಮತ ಚಲಾಯಿಸುವುದನ್ನು ಉತ್ತೇಜಿಸಲು ಮೂಲ ಮಾದರಿಯ ಬಹುಕ್ಷೇತ್ರದ ದೂರ ನಿಯಂತ್ರಿತ ವಿದ್ಯುನ್ಮಾನ ಮತ ಯಂತ್ರ (ಆರ್‌ವಿಎಂ) ವನ್ನು ಜಾರಿಗೆ ತರುವ ಬಗ್ಗೆ ಚುನಾವಣಾ ಆಯೋಗ ಡಿಸೆಂಬರ್ 29ರಂದು ಘೋಷಿಸಿತ್ತು.

ದೇಶೀಯ ವಲಸೆಯಿಂದಾಗಿ ಮತ ಚಲಾಯಿಸಲು ಸಾಧ್ಯವಾಗದೇ ಇರುವುದು ಕಡಿಮೆ ಮತ ಚಲಾವಣೆಯಾಗುವ ಹಿಂದಿನ ಪ್ರಮುಖ ಕಾರಣ ಎಂದು ಚುನಾವಣಾ ಆಯೋಗ ಹೇಳಿದೆ. ಇನ್ನು ಮುಂದೆ ದೇಶೀಯ ವಲಸೆ ಮತದಾರರು ತಮ್ಮ ಮತವನ್ನು ಚಲಾಯಿಸಲು ತಮ್ಮ ಊರಿಗೆ ತೆರಳುವ ಅಗತ್ಯ ಇರುವುದಿಲ್ಲ. ತಾವು ಇದ್ದಲ್ಲೇ ಮತ ಚಲಾಯಿಸಬಹುದು.

ಬಹುಕ್ಷೇತ್ರದ ಮೂಲ ಮಾದರಿಯ ದೂರ ನಿಯಂತ್ರಿತ ವಿದ್ಯುನ್ಮಾನ ಮತ ಯಂತ್ರ ಕಾರ್ಯಾಚರಣೆಯ ಪ್ರಾತ್ಯಕ್ಷಿಕೆಗೆ ಚುನಾವಣಾ ಆಯೋಗ ಮಾನ್ಯತೆ ಪಡೆದ ಎಲ್ಲ 8 ರಾಷ್ಟ್ರೀಯ ಹಾಗೂ 57 ಪ್ರಾದೇಶಿಕ ರಾಜಕೀಯ ಪಕ್ಷಗಳ ಸಭೆಯನ್ನು ಜನವರಿ 16ರಂದು ಕರೆದಿದೆ. ಈ ಪ್ರಾತ್ಯಕ್ಷಿಕೆ ಸಂದರ್ಭ ಚುನಾವಣಾ ಆಯೋಗದ ತಾಂತ್ರಿಕ ತಜ್ಞರ ಸಮಿತಿಯ ಸದಸ್ಯರು ಕೂಡ ಉಪಸ್ಥಿತರಿರಲಿದ್ದಾರೆ.

ದೇಶೀಯ ವಲಸಿಗರಿಗೆ ಕಾನೂನಿನಲ್ಲಿ ಅಗತ್ಯವಾಗಿರುವ ಬದಲಾವಣೆ, ಆಡಳಿತಾತ್ಮಕ ಕಾರ್ಯವಿಧಾನ, ಮತದಾನದ ವಿಧಾನ/ಆರ್‌ವಿಎಂ/ತಂತ್ರಜ್ಞಾನದಲ್ಲಿ ಬದಲಾವಣೆ ಹಾಗೂ ಇತರ ಏನಾದರೂ ಸೇರಿದಂತೆ ಸಂಬಂಧಿತ ವಿವಿಧ ವಿಷಯಗಳ ಕುರಿತು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಜನವರಿ 31ರ ಒಳಗೆ ಅಭಿಪ್ರಾಯ ತಿಳಿಸುವಂತೆ ಚುನಾವಣಾ ಆಯೋಗ ಸೂಚಿಸಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist