ಇಂದು ರಾಜ್ಯಕ್ಕೆ ಕೇಂದ್ರ ಸಚಿವ ಅಮಿತ್ ಶಾ ಭೇಟಿ; ಅಸೆಂಬ್ಲಿ ಎಲೆಕ್ಷನ್ ಮೇಲೆ ಬಿಜೆಪಿ ಚಾಣಾಕ್ಯನ ಕಣ್ಣು..!
ಮಂಡ್ಯ: ನಾಳೆ ಮಂಡ್ಯಕ್ಕೆ ಕೇಂದ್ರ ಸಚಿವ ಅಮಿತ್ ಶಾ ಭೇಟಿ ಹಿನ್ನೆಲೆ ಇಂದು ಮತ್ತು ನಾಳೆ ಮಂಡ್ಯ ವಿಶ್ವವಿದ್ಯಾಲಯಕ್ಕೆ ರಜೆ ಘೋಷಣೆ ಮಾಡಿ ಡಿಸಿ ಡಾ.ಗೋಪಾಲಕೃಷ್ಣ ಆದೇಶ ನೀಡಿದ್ದಾರೆ. ನಾಳೆ ಮಂಡ್ಯ ವಿವಿ ಮೈದಾನದಲ್ಲಿ ಬಿಜೆಪಿ ಸಮಾವೇಶ ಆಯೋಜನೆ ಮಾಡಲಾಗಿದ್ದು ಸಮಾವೇಶದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಭಾಗಿಯಾಗಲಿದ್ದಾರೆ. ಅಮಿತ್ ಶಾಗೆ Z+ ಭದ್ರತೆ ಇರುವ ಹಿನ್ನೆಲೆ ಮಂಡ್ಯ ವಿವಿಗೆ ರಜೆ ಘೋಷಿಸಲಾಗಿದೆ.
ಇಂದಿನಿಂದ ಕೇಂದ್ರ ಗೃಹಸಚಿವ ಅಮಿತ್ ಶಾ) 3 ದಿನಗಳ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಹಳೇ ಮೈಸೂರು ಭಾಗದ ಮೇಲೆ ಕಣ್ಣಿಟ್ಟಿರುವ ರಾಜ್ಯ ಬಿಜೆಪಿ (BJP) ಶಾ ಪ್ರವಾಸದಿಂದಲೇ ಚುನಾವಣಾ ರಣತಂತ್ರವನ್ನು ಆರಂಭಿಸಿದೆ. ಮಂಡ್ಯದಿಂದಲೇ ಅಮಿತ್ ಶಾ ಚುನಾವಣೆಗೆ ರಣಕಹಳೆ ಊದಲಿದ್ದಾರೆ.
ಹಳೇ ಮೈಸೂರು ಭಾಗದ ಮೇಲೆ ಕಣ್ಣಿಟ್ಟಿರುವ ಅಮಿತ್ ಶಾ ಅವರು, ಇಲ್ಲಿ ಕಮಲ ಅರಳಿಸಲೇಬೇಕು ಅಂತ ಪಣತೊಟ್ಟಂತಿದೆ. ಯಾಕಂದ್ರೆ ಈ ಹಿಂದೆ ಆಗಸ್ಟ್ನಲ್ಲಿ ರಾಜ್ಯಕ್ಕೆ ಬಂದಿದ್ದ ಅಮಿತ್ ಶಾ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಸಂಘಟನೆಗಾಗಿ ನಾಯಕರಿಗೆ ಟಾಸ್ಕ್ ಕೊಟ್ಟಿದ್ರು. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಗೆಲುವಿಗೆ ರೂಟ್ ಮ್ಯಾಪ್ ಸಿದ್ಧ ಮಾಡಬೇಕು. ನೀವೂ ಬಿಟ್ರೂ ನಾನು ಹಳೇ ಮೈಸೂರು ಭಾಗವನ್ನ ಬಿಡೋದಿಲ್ಲ ಅಂತ ಖಡಕ್ ಸಂದೇಶ ಕೊಟ್ಟಿದ್ರಂತೆ. ಇದೇ ಕಾರಣಕ್ಕೆ ಅಲರ್ಟ್ ಆಗಿರುವ ರಾಜ್ಯ ಕೇಸರಿ ದಕ್ಷಿಣದಲ್ಲಿ ದಂಡಯಾತ್ರೆಗೆ ಸನ್ನದ್ಧವಾಗಿದೆ.
ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಿಸಲು ಸ್ಕೆಚ್ ಹಾಕಿರುವ ಅಮಿತ್ ಶಾ, ಡಿಸೆಂಬರ್ 30 ರಂದು ಮಂಡ್ಯದಲ್ಲಿ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಮಂಡ್ಯದಲ್ಲಿ ಸಮಾವೇಶ ಮಾಡುವಂತೆ ಅಮಿತ್ ಶಾ ಸೂಚನೆ ಕೊಟ್ಟಿದ್ದಾರಂತೆ. ಸಮಾವೇಶಕ್ಕೂ ಮುನ್ನ ಮೆಗಾ ಡೇರಿ ಉದ್ಘಾಟನೆ ಮಾಡೋ ಮೂಲಕ, ಈ ಭಾಗದ ರೈತ ಸಮುದಾಯಕ್ಕೆ ಗಾಳ ಹಾಕುವ ಪ್ಲ್ಯಾನ್ ಇದ್ಯಂತೆ. ಪ್ರಮುಖವಾಗಿ ಅಮಿತ್ ಶಾ ಹಳೇ ಮೈಸೂರು ಭಾಗವನ್ನ ಯಾಕೆ ಟಾರ್ಗೆಟ್ ಮಾಡಿದ್ದು ಅಂದ್ರೆ, ಉತ್ತರ ಕರ್ನಾಟಕ ಭಾಗದ ನಷ್ಟವನ್ನ ಹಳೇ ಮೈಸೂರಲ್ಲಿ ತುಂಬುವುದಕ್ಕಾಗಿಯೇ ಹಳೇ ಮೈಸೂರು ಭಾಗವನ್ನ ಟಾರ್ಗೆಟ್ ಮಾಡಲಾಗಿದೆ. ಯಾಕಂದ್ರೆ ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಕೆಲ ಸ್ಥಾನಗಳನ್ನ ಕಳೆದುಕೊಳ್ಳುವ ಭೀತಿ ಶುರುವಾಗಿದ್ಯಂತೆ. ಆ ಸ್ಥಾನಗಳನ್ನ ಹಳೇ ಮೈಸೂರು ಭಾಗದಲ್ಲಿ ತುಂಬುವ ತಂತ್ರ ಅಮಿತ್ ಶಾ ಮಾಡಿದ್ದಾರಂತೆ. ಈ ಮೂಲಕ ಹಳೇ ಮೈಸೂರು ಭಾಗದಲ್ಲಿ 25 ಕ್ಷೇತ್ರಗಳಲ್ಲಿ ಗೆದ್ದು, ಬೇರೂರುವ ಪ್ಲ್ಯಾನ್ ಇದೆಯಂತೆ. ಈಶಾನ್ಯ ಭಾರತದಲ್ಲಿ ಯಾವ ರೀತಿ ಪಕ್ಷ ಸಂಘಟನೆ ಆಗಿದ್ಯೋ ಅದೇ ಮಾದರಿಯಲ್ಲಿ ಗಾಳ ಹಾಕೋಕೆ ಅಮಿತ್ ಶಾ ಪ್ಲ್ಯಾನ್ ಮಾಡಿದ್ದಾರೆ.