ಸೋಮವಾರ, ಜೂನ್ 24, 2024
Sports for change Kho Kho ಪಂದ್ಯಾಟ: ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ನಯನಾಡು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು-T20 ವಿಶ್ವಕಪ್‌: ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ ಅಫ್ಘಾನಿಸ್ತಾನ-ವಿಧಾನ ಪರಿಷತ್ ಸದಸ್ಯ ಡಾ.ಸೂರಜ್‌ ರೇವಣ್ಣ ಬಂಧನ-ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಗುಡ್ ನ್ಯೂಸ್; ಜಾಮೀನು ಮಂಜೂರು..!-ದರ್ಶನ್ ಸೇರಿದಂತೆ 17 ಆರೋಪಿಗಳ ಕಸ್ಟಡಿ ಅಂತ್ಯ; ಇಂದು ನ್ಯಾಯಾಲಯಕ್ಕೆ ಹಾಜರು.!-ರಾಜ್ಯದಲ್ಲಿ ಮುಂಗಾರು ಚುರುಕು; ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ.!-ಅಶ್ಲೀಲ ವಿಡಿಯೋ ಪ್ರಕರಣ; ಪ್ರಜ್ವಲ್ ರೇವಣ್ಣಗೆ ಮತ್ತೆ ನ್ಯಾಯಾಂಗ ಬಂಧನ.!-4 ಓವರ್ ಗಳಲ್ಲಿ ಒಂದೇ ಒಂದು ರನ್ ನೀಡದೆ 3 ವಿಕೆಟ್ ಕಬಳಿಸಿ ದಾಖಲೆ ಬರೆದ ಲಾಕಿ ಫರ್ಗುಸನ್..!-ದರ್ಶನ್ ಫಾರಂ ಹೌಸ್ ಮ್ಯಾನೇಜರ್ ನಿಗೂಢ ಸಾವು; ಅನುಮಾನಾಸ್ಪದ ಸಾವು ಪ್ರಕರಣ ದಾಖಲು.!-ಶತಕದತ್ತ ಟೊಮೆಟೊ ದರ; ಮತ್ತಷ್ಟು ಏರಿಕೆಯಾಗಲಿದೆಯೇ ಟೊಮೆಟೊ ಬೆಲೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಇಂದು ಯುಎಸ್ಎ ಮತ್ತು ಭಾರತ ತಂಡ ಮುಖಾಮುಖಿ; ಯಾರಿಗೆ ಗೆಲುವು..!

Twitter
Facebook
LinkedIn
WhatsApp
ಇಂದು ಯುಎಸ್ಎ ಮತ್ತು ಭಾರತ ತಂಡ ಮುಖಾಮುಖಿ; ಯಾರಿಗೆ ಗೆಲುವು..!

T20 World Cup 2024:ಟಿ20 ವಿಶ್ವಕಪ್ನ 25ನೇ ಪಂದ್ಯದಲ್ಲಿ ಭಾರತ ಮತ್ತು ಯುಎಸ್​ಎ ತಂಡಗಳು ಕಣಕ್ಕಿಳಿಯಲಿದೆ. ನ್ಯೂಯಾರ್ಕ್​ನ ನಸ್ಸೌ ಕೌಂಟಿ ಇಂಟರ್​ನ್ಯಾಷನಲ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ (ಜೂ.12) ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ತಂಡ ಸೂಪರ್-8 ಹಂತಕ್ಕೇರಲಿದೆ. ಉಭಯ ತಂಡಗಳು ಆಡಿರುವ ಎರಡು ಪಂದ್ಯಗಳಲ್ಲೂ ಜಯ ಸಾಧಿಸಿದ್ದು, ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಮುಂದಿನ ಹಂತಕ್ಕೇರಬಹುದು.

ವಿಶೇಷ ಎಂದರೆ ಭಾರತ ಮತ್ತು ಯುಎಸ್​ಎ ತಂಡಗಳು ಇದೇ ಮೊದಲ ಬಾರಿಗೆ ಟಿ20 ಕ್ರಿಕೆಟ್​ನಲ್ಲಿ ಮುಖಾಮುಖಿಯಾಗುತ್ತಿದೆ. ಇಲ್ಲಿ ಭಾರತ ತಂಡ ಬಲಿಷ್ಠವಾಗಿ ಕಂಡು ಬಂದರೂ ಯುಎಸ್​ಎ ಕಡೆಯಿಂದ ಪೈಪೋಟಿಯನ್ನು ನಿರೀಕ್ಷಿಸಬಹುದು.

ಏಕೆಂದರೆ ಕಳೆದ ಪಂದ್ಯದಲ್ಲಿ ಯುಎಸ್​ಎ ತಂಡ ಪಾಕಿಸ್ತಾನ್ ತಂಡಕ್ಕೆ ಸೋಲುಣಿಸಿ ಇತಿಹಾಸ ಬರೆದಿತ್ತು. ಹೀಗಾಗಿ ಭಾರತದ ವಿರುದ್ಧ ಕೂಡ ಅದೇ ಹುಮ್ಮಸ್ಸಿನಲ್ಲಿ ಕಣಕ್ಕಿಳಿಯಲಿದೆ. ಹೀಗಾಗಿ ಈ ಪಂದ್ಯದಲ್ಲೂ ಕೆಚ್ಚೆದೆಯ ಹೋರಾಟವನ್ನು ಎದುರು ನೋಡಬಹುದು.

ಎಷ್ಟು ಗಂಟೆಗೆ ಮ್ಯಾಚ್ ಶುರು?

ಭಾರತ ಮತ್ತು ಯುಎಸ್​ಎ ನಡುವಣ ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ಶುರುವಾಗಲಿದೆ. ಇದಕ್ಕೂ  ಮುನ್ನ 7.30 ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.

ಸ್ಟಾರ್ ಸ್ಪೋರ್ಟ್ಸ್ ಕನ್ನಡ ಸೇರಿದಂತೆ ಸ್ಟಾರ್​ ನೆಟ್​ವರ್ಕ್​ನ ಸ್ಪೋರ್ಟ್ಸ್​ ಚಾನೆಲ್​ಗಳಲ್ಲಿ ಈ ಪಂದ್ಯದ ನೇರ ಪ್ರಸಾರ ಇರಲಿದೆ. ಹಾಗೆಯೇ ಡಿಸ್ನಿ ಹಾಟ್​ಸ್ಟಾರ್ ಆ್ಯಫ್​ನಲ್ಲಿ ಉಚಿತವಾಗಿ ವೀಕ್ಷಿಸಬಹುದು.

ಉಭಯ ತಂಡಗಳು:

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಜಸ್​ಪ್ರೀತ್ ಬುಮ್ರಾ.

ಯುಎಸ್​ಎ ತಂಡ: ಮೊನಾಂಕ್ ಪಟೇಲ್ (ನಾಯಕ), ಆರೋನ್ ಜೋನ್ಸ್, ಆಂಡ್ರೀಸ್ ಗೌಸ್, ಕೋರಿ ಆಂಡರ್ಸನ್, ಅಲಿ ಖಾನ್, ಹರ್ಮೀತ್ ಸಿಂಗ್, ಜೆಸ್ಸಿ ಸಿಂಗ್, ಮಿಲಿಂದ್ ಕುಮಾರ್, ನಿಸರ್ಗ್ ಪಟೇಲ್, ನಿತೀಶ್ ಕುಮಾರ್, ನೋಷ್ತುಶ್ ಕೆಂಜಿಗೆ, ಸೌರಭ್ ನೇತ್ರಲ್ವಾಕರ್, ಶಾಡ್ಲಿ ವ್ಯಾನ್ ಸ್ಚಾಲ್ಕ್‌ವಿಕ್, ಸ್ಟೀವನ್ ಟೇಲರ್, ಶಯಾನ್ ಜಹಾಂಗೀರ್. ಮೀಸಲು ಆಟಗಾರರು: ಗಜಾನಂದ್ ಸಿಂಗ್, ಜುವಾನೊಯ್ ಡ್ರೈಸ್‌ಡೇಲ್, ಯಾಸಿರ್ ಮೊಹಮ್ಮದ್.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ