ಆಸ್ಟ್ರೇಲಿಯಾ ವಿರುದ್ಧ 100 ವಿಕೆಟ್ ಪಡೆದು ದಾಖಲೆ ನಿರ್ಮಿಸಿದ ಅಶ್ವಿನ್; ಬೌಲರ್ ಗಳ ಮಾರಕ ದಾಳಿಗೆ ನಲುಗಿದ ಆಸೀಸ್ 263ಕ್ಕೆ ಆಲೌಟ್
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ದೆಹಲಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 263 ರನ್ ಗಳಿಸಿದೆ.
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ಭಾರತೀಯ ಬೌಲರ್ ಗಳ ಮಾರಕ ದಾಳಿಗೆ ತತ್ತರಿಸಿದರು.
ಪಂದ್ಯದ ಮೊದಲ ದಿನದಮೂರನೇ ಸೆಷನ್ ನಲ್ಲಿ ಕಾಂಗರೂ ತಂಡ ಮೊದಲ ಇನಿಂಗ್ಸ್ನಲ್ಲಿ 263 ರನ್ಗಳಿಗೆ ಕುಸಿದಿದೆ. ಪೀಟರ್ ಹ್ಯಾಂಡ್ಸ್ಕಾಂಬ್ 72 ರನ್ ಗಳಿಸಿ ಅಜೇಯರಾಗಿ ಉಳಿದಿದ್ದು 5ನೇ ಅರ್ಧಶತಕ ಪೂರೈಸಿದ್ದಾರೆ. ಉಸ್ಮಾನ್ ಖವಾಜಾ ಇನ್ನಿಂಗ್ಸ್ನಲ್ಲಿ 81 ರನ್ ಗಳಿಸಿದರು. ನಾಯಕ ಪ್ಯಾಟ್ ಕಮ್ಮಿಂಗ್ 33 ರನ್ ಬಾರಿಸಿದ್ದಾರೆ.
ಭಾರತದ ಪರ ಮೊಹಮ್ಮದ್ ಶಮಿ 4, ಅಶ್ವಿನ್ ಮತ್ತು ಜಡೇಜಾ ತಲಾ 3 ವಿಕೆಟ್ ಪಡೆದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ 100 ವಿಕೆಟ್ ಪಡೆದು ದಾಖಲೆ ನಿರ್ಮಿಸಿದ ಅಶ್ವಿನ್:
ಅಲೆಕ್ಸ್ ಕ್ಯಾರಿ ವಿಕೆಟ್ ಪಡೆದ ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ ಒಂದೇ ತಂಡದ ವಿರುದ್ಧ 100 ಹೆಚ್ಚು ವಿಕೆಟ್ಗಳನ್ನು ಪಡೆದ ಸಾಧನೆ ಮಾಡಿದರು. ಮೊದಲ ಟೆಸ್ಟ್ನಲ್ಲಿ ಆಸೀಸ್ ಪಡೆಯನ್ನು ಇನ್ನಿಲ್ಲದಂತೆ ಕಾಡಿದ ರವಿಚಂದ್ರನ್ ಅಶ್ವಿನ್, ಎರಡನೇ ಟೆಸ್ಟ್ನಲ್ಲೂ ವಿಕೆಟ್ಗಳ ಭೇಟೆಯಾಡಿದ್ದಾರೆ. ಒಂದೇ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆದ ಅಶ್ವಿನ್, ಮೊದಲು ಮಾರ್ನಸ್ ಲಬುಶೇನ್ಗೆ ಪೆವಲಿಯನ್ ಹಾದಿ ತೋರಿಸಿದರೆ, ನಂತರದ ಎಸೆತದಲ್ಲೇ ಸ್ಟೀವ್ ಸ್ಮಿತ್ ಅವರನ್ನು ಹೊರಹಾಕಿದರು. ಬಳಿಕ ಅಲೆಕ್ಸ್ ಕ್ಯಾರಿ ವಿಕೆಟ್ ಪಡೆದ ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ ಒಂದೇ ತಂಡದ ವಿರುದ್ಧ 100 ಹೆಚ್ಚು ವಿಕೆಟ್ಗಳನ್ನು ಪಡೆದ ಸಾಧನೆ ಮಾಡಿದರು.ಅಷ್ಟೇ ಅಲ್ಲ, ಅಶ್ವಿನ್ ಈಗ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 700 ವಿಕೆಟ್ಗಳನ್ನು ಕೂಡ ಪೂರೈಸಿದ್ದಾರೆ.