ಶುಕ್ರವಾರ, ನವೆಂಬರ್ 22, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಆಫೀಸ್‌ನಲ್ಲಿ ಸುಳ್ಳು ಹೇಳಿ ಆರ್ಸಿಬಿ ಪಂದ್ಯಕ್ಕೆ ಹೋದ ಯುವತಿ ; ಸಿಕ್ಕಿಬಿದ್ದಿದ್ದು ಹೇಗೆ?

Twitter
Facebook
LinkedIn
WhatsApp
ಆಫೀಸ್‌ನಲ್ಲಿ ಸುಳ್ಳು ಹೇಳಿ ಆರ್ಸಿಬಿ ಪಂದ್ಯಕ್ಕೆ ಹೋದ ಯುವತಿ ; ಸಿಕ್ಕಿಬಿದ್ದಿದ್ದು ಹೇಗೆ?

ಅನಾರೋಗ್ಯದ ಕಾರಣ ನೀಡಿ ಕಚೇರಿಗೆ ಚಕ್ಕರ್ ಹಾಕುವವರು ಅನೇಕರಿದ್ದಾರೆ. ಈ ರೀತಿಯ ಸಂದರ್ಭಗಳಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕು. ಅಪ್ಪಿ ತಪ್ಪಿ ಬಾಸ್​ ಕೈಗೆ ಸಿಕ್ಕರೆ ಕಥೆ ಮುಗಿದಂತೆ. ಅದೇ ರೀತಿ ಯುವತಿಯೊಬ್ಬರು ಕುಟುಂಬದಲ್ಲಿ ಎಮರ್ಜೆನ್ಸಿ ಆಗಿದೆ ಎಂದು ಹೇಳಿ ಕಚೇರಿಯಿಂದ ಮನೆಗೆ ಹೋಗಿದ್ದರು. ಅಸಲಿಗೆ ಮನೆಯಲ್ಲಿ ಯಾರಿಗೆ ಏನೂ ಆಗಿರಲಿಲ್ಲ. ಅವರು IPL ನೋಡೋಕೆ ಹೋಗಿದ್ದರು. ಅವರ ದುರಾದೃಷ್ಟ ಎಂದರೆ ಟಿವಿಯಲ್ಲಿ ಅವರು ಬಾಸ್ ಕಣ್ಣಿಗೆ ಬಿದ್ದಿದ್ದರು. ಹೀಗೋಂದು ಮಜವಾದ ಪ್ರಸಂಗ ಇತ್ತೀಚೆಗೆ ನಡೆದಿದೆ.

 

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖ್ನೋ ಸೂಪರ್ ಜೈಂಟ್ಸ್ ಪಂದ್ಯ ಇತ್ತೀಚೆಗೆ ನಡೆದಿತ್ತು. ಈ ಪಂದ್ಯ ನೋಡಲು ನೇಹಾ ದ್ವಿವೇದಿ ಎಂಬ ಯುವತಿ ಟಿಕೆಟ್ ಖರೀಸಿದಿದ್ದರು. ಬಾಸ್​ಗೆ ಸುಳ್ಳು ಕಾರಣ ಹೇಳಿ ಅವರು ಸ್ಟೇಡಿಯಂ ಹೋಗಿದ್ದರು. ಆದರೆ, ಬಾಸ್​ಗೆ ಅವರು ಟಿವಿ ಕ್ಯಾಮೆರಾದಲ್ಲಿ ಕಾಣಿಸಿದ್ದರು. ಇದರಿಂದ ಅವರ ರಜೆಗೆ ಅಸಲಿ ಕಾರಣ ಸಿಕ್ಕಿದೆ.

ಪಂದ್ಯ ಮುಗಿದ ಬಳಿಕ ಬಾಸ್ ಕಡೆಯಿಂದ ನೇಹಾಗೆ ಸಂದೇಶ ಬಂದಿದೆ. ‘ನೀವು ಆರ್​ಸಿಬಿ ಅಭಿಮಾನಿಯೇ’ ಎಂದು ಕೇಳಲಾಯಿತು. ಇದಕ್ಕೆ ನೇಹಾ ಹೌದು ಎಂದು ಉತ್ತರಿಸಿದ್ದು ಅಲ್ಲದೆ, ಏಕೆ ಎಂದು ಪ್ರಶ್ನಿಸಿದ್ದರು. ‘ನಾನು ನಿಮ್ಮನ್ನು ಟಿವಿಯಲ್ಲಿ ನೋಡಿದೆ. ಕ್ಯಾಚ್ ಬಿಟ್ಟಾಗ ನೀವು ಬೇಸರದಲ್ಲಿ ಕಾಣಿಸಿಕೊಂಡಿರಿ’ ಎಂದಿದ್ದಾರೆ ಬಾಸ್. ಇದನ್ನು ಕೇಳಿ ನೇಹಾಗೆ ಒಂದು ಕ್ಷಣ ಶಾಕ್ ಆಗಿದೆ. ಆದರೆ, ಬಾಸ್ ಇದನ್ನು ಹೆಚ್ಚು ಗಂಭೀರವಾಗಿ ಸ್ವೀಕರಿಸಿಲ್ಲ ಅನ್ನೋದು ಖುಷಿಯ ವಿಚಾರ.

ಸದ್ಯ ಈ ಪೋಸ್ಟ್​ಗೆ 8 ಸಾವಿರಕ್ಕೂ ಅಧಿಕ ಲೈಕ್ಸ್ ಸಿಕ್ಕಿದೆ. ನಾಲ್ಕು ಲಕ್ಷಕ್ಕೂ ಅಧಿಕ ಮಂದಿ ಈ ರೀಲ್ಸ್ ನೋಡಿದ್ದಾರೆ. ‘ಮ್ಯಾನೇಜರ್ ಸಾಹೇಬ್ರೇ ನೀವು ಕಚೇರಿಯಲ್ಲಿ ಮ್ಯಾಚ್ ನೋಡ್ತಿದ್ರಾ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ‘ದೊಡ್ಡ ಬ್ಯಾಡ್ ಲಕ್’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ಎಲ್ಲರಿಗೂ ಕ್ಯಾಮೆರಾಗೆ ಕಾಣಿಸಿಕೊಳ್ಳಬೇಕು ಎಂದಿರುತ್ತದೆ. ನಿಮಗೆ ಹಾಗೆ ಇರಲಿಲ್ಲ. ಆದರೂ ಕ್ಯಾಮೆರಾ ನಿಮ್ಮನ್ನು ಹುಡುಕಿ ಬಂದಿದೆ. ಎಂತಹ ದುರಾದೃಷ್ಟ’ ಎಂದು ಕೆಲವರು ಬರೆದುಕೊಂಡಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ