
ಹಾಸನ: ಮೀಟರ್ ಬಡ್ಡಿ ಸಾಲದ ಕಿರುಕುಳಕ್ಕೆ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿ ಸಾಯುವ ಮುನ್ನ ಮೃತ ವ್ಯಕ್ತಿ ಅಂಬರೀಶ್ ವಿಡಿಯೋ ಮಾಡಿದ್ದಾರೆ. ನನ್ನ ಸಾವಿಗೆ ಕಾರಣರಾದವರನ್ನು ಯಾವುದೇ ಕಾರಣಕ್ಕೂ ಬಿಡಬೇಡಿ. ತಿಂಗಳಿಗೆ ಶೇ.50, 30, 52 ಬಡ್ಡಿ ತೆಗೆದುಕೊಂಡಿದ್ದಾರೆ. ನರೇಂದ್ರ, ರಾಜಪ್ಪ, ಸತ್ಯಮಂಗಲದ ಜಗ ಎಂಬುವವರಿಗೆ ಚೆಕ್ಗಳಿಗೆ ನಾನು ಸಹಿ ಹಾಕಿ ಕೊಟ್ಟಿದ್ದೆ. ಕೊರೊನಾ (Coronavirus) ಬರುವ ಮುಂಚೆಯಿಂದ ವ್ಯವಹಾರ ಮಾಡಿದ್ದೆ. ಎಲ್ಲರಿಗೂ ಇದುವರೆಗೆ ಬಡ್ಡಿ ಕೊಟ್ಟಿದ್ದೇನೆ. ನನ್ನ ಇನ್ವಾಯ್ಸ್, ಬ್ಯುಸಿನೆಸ್ ನೋಡಿ ಅವರು ಸಾಲ ಕೊಟ್ಟಿದ್ದರು. ನನ್ನ ಹೆಂಡತಿ ಸಹಿ ಮಾಡಿ ಕೊಟ್ಟಿದ್ದೇನೆ. ಅದೊಂದು ಮೋಸ ಮಾಡಿದ್ದೇನೆ ಅಂತ ಹೇಳಿದ್ದಾರೆ. ಹದಿನೆಂಟರಿಂದ ಇಪ್ಪತ್ತು ಚೆಕ್ಗಳು, ದಾಖಲೆಗಳನ್ನು ಕೊಡುತ್ತಿಲ್ಲ. ಮೂರು ಲಕ್ಷ ಸಾಲಕ್ಕೆ ಬಡ್ಡಿ ಹದಿಮೂರು ಲಕ್ಷ ಆಗಿದೆ ಎಂದು ಎಲ್ಲರು ಕೇಸ್ಗಳನ್ನ ಹಾಕುತ್ತಿದ್ದಾರೆ ಅಂತ ವಿಷದ ಬಾಟಲ್ ಇಟ್ಟುಕೊಂಡು ಅಂಬರೀಶ್ ಕಣ್ಣೀರಿಟ್ಟು ವಿಡಿಯೋ ಮಾಡಿದ್ದಾರೆ. ಹಾಸನದ ಉದಯಗಿರಿಯ ನಿವಾಸಿ ಅಂಬರೀಶ್ ಭಾನುವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist