ಭಾನುವಾರ, ಏಪ್ರಿಲ್ 28, 2024
ಮಂಗಳೂರು ಲೋಕಸಭೆ 2024: ಎಲ್ಲರ ಚಿತ್ತ ಬೆಳ್ತಂಗಡಿ-ಮೂಡಬಿದ್ರಿ ಬಿಲ್ಲವ ಮತಗಳ ಕಡೆಗೆ . ಚುನಾವಣಾ ದಿಕ್ಕನ್ನು ನಿರ್ಧರಿಸಲಿದೆ ಬೆಳ್ತಂಗಡಿ -ಮೂಡಬಿದ್ರಿ !.-ಎಸ್.ಐ.ಟಿ ತನಿಖೆ ನಡೆಸುವಂತೆ ಮಹಿಳಾ ಆಯೋಗದಿಂದ ಸರ್ಕಾರಕ್ಕೆ ಪತ್ರ; ಜರ್ಮನಿಗೆ ಹಾರಿದ ಪ್ರಜ್ವಲ್‌ ರೇವಣ್ಣ!-ಮದುವೆ ಆಮಂತ್ರಣದಲ್ಲಿ ಚುನಾವಣಾ ಪ್ರಚಾರ : ನೀತಿ ಸಂಹಿತೆಯಡಿ ಪ್ರಕರಣ ದಾಖಲು-ನೋಟಾ, ಅತಿ ಹೆಚ್ಚು ಅಲ್ಪಸಂಖ್ಯಾತರ ಮತದಾನ, ಮೂಡಬಿದ್ರೆ- ಬೆಳ್ತಂಗಡಿಯಲ್ಲಿ ಬಿಲ್ಲವರ ಅತಿ ಹೆಚ್ಚು ಮತದ ಬಗ್ಗೆ ಕಾಂಗ್ರೆಸ್ ನಿರೀಕ್ಷೆ.ಆ ಮೂಲಕ ಗೆಲುವಿನ ಭರವಸೆ!-ಬಿಜೆಪಿಯ ಬಣ ರಾಜಕೀಯ, ನೋಟಾ, ಸತ್ಯಜಿತ್ , ಗ್ಯಾರೆಂಟಿ, ಬಿಲ್ಲವ ಟ್ರಂಪ್ ಕಾರ್ಡ್ , ಅಲ್ಪಸಂಖ್ಯಾತರ ಬೂತುಗಳ ಹೆಚ್ಚಿನ ಮತದಾನ ಸಹಾಯ ಪಡೆದು ಮಂಗಳೂರು ಲೋಕಸಭೆಯಲ್ಲಿ ಪದ್ಮರಾಜ್ ವಿಜಯ ಪತಾಕೆ ಹಾರಿಸಬಹುದೇ?-ಲೋಕಸಭೆ ಚುನಾವಣೆ; ರಾಜ್ಯದಲ್ಲಿ ಇಂದು 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ-ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!-ಬಂಟ್ವಾಳ: ಅನಾರೋಗ್ಯದ ನಡುವೆಯೂ ಮತದಾನ ಮುಗಿಸಿ ಇಹಲೋಕ ತ್ಯಜಿಸಿದ ಮಾಜಿ ಸೈನಿಕ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಆದಾಯ ತೆರಿಗೆ ವಿನಾಯಿತಿ 7 ಲಕ್ಷಕ್ಕೆ ಹೆಚ್ಚಳ ; ಚಿನ್ನ ಬೆಳ್ಳಿ ದುಬಾರಿ!

Twitter
Facebook
LinkedIn
WhatsApp
collage maker 01 feb 2023 11.31 am sixteen nine

ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಬುಧವಾರ (ಫೆ 1) ಲೋಕಸಭೆಯಲ್ಲಿ ಬಜೆಟ್ ಮಂಡಿಸಿದರು. ವಿಧಾನಸಭೆ ಚುನಾವಣೆಯ ಹೊಸಿಲಿನಲ್ಲಿರುವ ಕರ್ನಾಟಕಕ್ಕೆ ವಿಶೇಷ ಯೋಜನೆ ಘೋಷಿಸಬಹುದು ಎಂಬ ನಿರೀಕ್ಷೆಗಳಿದ್ದವು. ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಘೋಷಣೆ ಹೊರತುಪಡಿಸಿದರೆ ಕರ್ನಾಟಕಕ್ಕೆ ನಿರ್ದಿಷ್ಟವಾಗಿ ಯಾವುದೇ ಹೊಸ ಯೋಜನೆ ಘೋಷಿಸಲಿಲ್ಲ. ಹೊಸ ತೆರಿಗೆ ಪದ್ಧತಿಯಲ್ಲಿ ವಾರ್ಷಿಕ ₹ 7 ಲಕ್ಷದವರೆಗೆ ತೆರಿಗೆ ವಿನಾಯ್ತಿ ಘೋಷಿಸಿದ್ದು ಮಧ್ಯಮ ವರ್ಗದಲ್ಲಿ ಹರ್ಷ ತಂದಿದೆ. ಈ ಬಾರಿ ಕೇಂದ್ರ ಸಚಿವರ ಬಜೆಟ್ ಭಾಷಣದ ಅವಧಿ 1 ಗಂಟೆ 25. ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಒಮ್ಮೆ ಮಾತ್ರ (ಹಳೇ ವಾಹನ ನೀತಿ) ತಡವರಿಸಿ, ತಪ್ಪು ಪದಗಳನ್ನು ಉಚ್ಚರಿಸಿದರು. ಆದರೆ ತಕ್ಷಣ ಸಾವರಿಸಿಕೊಂಡು ಅದನ್ನು ಪ್ರತಿಪಕ್ಷಗಳಿಗೆ ಹೋಲಿಸುವ ಮೂಲಕ ರಾಜಕೀಯ ಪ್ರಬುದ್ಧತೆ ಮೆರೆದರು. ಬಜೆಟ್ ಭಾಷಣದ ಅತಿಮುಖ್ಯ ಅಂಶಗಳು ಇಲ್ಲಿದೆ.

  • ವೈಯಕ್ತಿಕ ಆದಾಯ ತೆರಿಗೆಯಲ್ಲಿ, ಎಫ್‌ಎಂ “ರೂ. 0-3 ಲಕ್ಷ ಆದಾಯಕ್ಕೆ ತೆರಿಗೆ ಶೂನ್ಯ, 3 ಲಕ್ಷ ರೂ. ಮತ್ತು ರೂ. 5 ಲಕ್ಷದವರೆಗಿನ ಆದಾಯಕ್ಕೆ ಶೇ. 5, 6 ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ ಶೇ. 5 ತೆರಿಗೆ ವಿಧಿಸಲಾಗುವುದು ಮತ್ತು 9 ಲಕ್ಷದವರೆಗೆ ಶೇಕಡ 10 ತೆರಿಗೆ ವಿಧಿಸಲಾಗುತ್ತದೆ ಮತ್ತು ರೂ 12 ಲಕ್ಷ ಮತ್ತು ರೂ 15 ಲಕ್ಷದವರೆಗಿನ ಆದಾಯಕ್ಕೆ ಶೇಕಡ 20 ಮತ್ತು 15 ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ ಶೇಕಡ 30 ತೆರಿಗೆ ವಿಧಿಸಲಾಗುತ್ತದೆ.
  • ಹೊಸ ತೆರಿಗೆ ಪದ್ಧತಿ (New Tax Regime) ಆದಾಯ ತೆರಿಗೆ ವಿನಾಯ್ತಿ ಮೊತ್ತವನ್ನು ₹ 5 ಲಕ್ಷದಿಂದ ₹ 7 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು. ತೆರಿಗೆ ವಿವರಗಳನ್ನು ನೀಡಿದರು. ವಾರ್ಷಿಕ ₹ 9 ಲಕ್ಷ ವೇತನ ಪಡೆಯುವವರು ₹ 45,000 ತೆರಿಗೆ ಕಟ್ಟುತ್ತಾರೆ ಎಂದು ಸಚಿವರು ಹೇಳಿದರು.

    ಹೊಸ ತೆರಿಗೆ ದರಗಳು ಹೀಗಿವೆ…

    ₹ 3 ಲಕ್ಷದವರೆಗೆ – ಇಲ್ಲ

    ₹ 3ರಿಂದ 6 ಲಕ್ಷ – ಶೇ 5

    ₹ 6ರಿಂದ 9 ಲಕ್ಷ – ಶೇ 10

    ₹ 9ರಿಂದ 12 ಲಕ್ಷ – ಶೇ 15

    ₹ 12ರಿಂದ 15 ಲಕ್ಷ – ಶೇ 20

    ₹ 15 ಲಕ್ಷಕ್ಕೂ ಹೆಚ್ಚು – ಶೇ 30

 

ಇಂದಿನ ಬಜೆಟ್ ನಲ್ಲಿ ಬಂಗಾರ, ಬೆಳ್ಳಿ, ವಜ್ರ, ಪ್ಲಾಟಿನಮ್ ದರ ಏರಿಕೆ ಮಾಡಿ ಮಹಿಳೆಯರಿಗೆ ಶಾಕ್ ನೀಡಿದ್ದಾರೆ. ಇತ್ತ ಬಟ್ಟೆ ಹಾಗೂ ಸಿಗರೇಟ್ ಮೇಲಿನ ತೆರಿಗೆಯನ್ನು ಏರಿಕೆ ಮಾಡುವ ಮೂಲಕ ಧೂಮಪಾನ ಮಾಡುವವರಿಗೂ ಕೂಡ ಶಾಕ್ ನೀಡಿದ್ದಾರೆ.

ಮೊಬೈಲ್ ಫೋನ್, ಕ್ಯಾಮರಾ ಲೆನ್ಸ್ ಆಮದು ಸುಂಕ ರದ್ದುಗೊಳಿಸಿದ್ದಾರೆ. ಜೊತೆಗೆ ಟಿವಿ ಬೆಲೆ ಇಳಿಕೆ ಮಾಡಿದ್ದಾರೆ. ಅಲ್ಲದೇ ಬ್ಯಾಟರಿ ಮೇಲಿನ ಕಸ್ಟಮ್ಸ್ ಡ್ಯೂಟಿ ಶೇ.13ಕ್ಕೆ ಇಳಿಕೆ ಮಾಡಿದ್ದಾರೆ. 2070ರ ವೇಳೆಗೆ ಹೊಗೆ ಮುಕ್ತ ಭಾರತ ನಿರ್ಮಾಣ ಗುರಿ ಹೊಂದುವ ನಿರೀಕ್ಷೆ ಇದೆ ಎಂದು ನಿರ್ಮಲಾ ಸೀತರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.

ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ 5G ಸೇವೆಗಳನ್ನು ಬಳಸಿಕೊಂಡು ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಲು 100 ಲ್ಯಾಬ್‌ಗಳನ್ನು ಸ್ಥಾಪಿಸಲಾಗುವುದು. ಹೊಸ ಶ್ರೇಣಿಯ ಅವಕಾಶಗಳು, ವ್ಯಾಪಾರ ಮಾದರಿಗಳು ಮತ್ತು ಉದ್ಯೋಗದ ಸಾಮರ್ಥ್ಯವನ್ನು ಅರಿತುಕೊಳ್ಳಲು, ಲ್ಯಾಬ್‌ಗಳು ಸ್ಮಾರ್ಟ್ ತರಗತಿಗಳು, ನಿಖರವಾದ ಕೃಷಿ, ಬುದ್ಧಿವಂತ ಸಾರಿಗೆ ವ್ಯವಸ್ಥೆಗಳು ಮತ್ತು ಆರೋಗ್ಯ ರಕ್ಷಣೆಯಂತಹ ಅಪ್ಲಿಕೇಶನ್‌ಗಳನ್ನು ಒಳಗೊಂಡಿರುತ್ತವೆ.

 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ