ಅಹ್ಮದಾಬಾದ್‌ನಿಂದ ಮಂಗಳೂರು ಜಂಕ್ಷನ್‌ಗೆ ಜ. 6ರಂದು ವಿಶೇಷ ರೈಲು
Twitter
Facebook
LinkedIn
WhatsApp
ಮಂಗಳೂರು, ಜ 04 : ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಸಮಸ್ಯೆ ಪರಿಹರಿಸಲು ಅಹ್ಮದಾಬಾದ್‌ನಿಂದ ಮಂಗಳೂರು ಜಂಕ್ಷನ್‌ಗೆ ಜ. 6ರಂದು ಏಕಮುಖ ವಿಶೇಷ ಸಂಚರಿಸಲಿದೆ ಎಂದು ದಕ್ಷಿಣ ವಲಯ ಪಾಲಕ್ಕಾಡ ವಿಭಾಗದ ಪ್ರಕಟಣೆ ತಿಳಿಸಿದೆ.
ನಂ. 06072ರ ಈ ರೈಲು ಅಹ್ಮದಾಬಾದ್ ಜಂಕ್ಷನ್ ನಿಂದ ಜ. 6ರಂದು ಶುಕ್ರವಾರ ಸಂಜೆ 4ಕ್ಕೆ ಹೊರಟು ಜ.೭ ರಂದು ಮರುದಿನ ಸಂಜೆ 6.30ಕ್ಕೆ ಮಂಗಳೂರು ಜಂಕ್ಷನ್ ತಲಪುವುದು.
ವಡೋದರ, ಸೂರತ್, ವಾಪಿ, ವಸಾೖರೋಡ್, ಪನ್ವೇಲ್, ರೋಹ, ಖೇಡ್, ಚಿಪ್ಳೂಣ್, ಸಂಗಮೇಶ್ವರ ರೋಡ್, ರತ್ನಾಗಿರಿ, ಕಂಕಾವಿ, ಸಿಂಧುದುರ್ಗ, ಕುಡಾಳ್, ಸಾವಂತವಾಡಿ ರೋಡ್, ತಿವಿಂ, ಕರ್ಮಾಲಿ, ಮಡಗಾಂವ್, ಕಾಣಕೋಣ, ಕಾರವಾರ, ಅಂಕೋಲಾ, ಗೋಕರ್ಣ ರೋಡ್, ಕುಮಟಾ, ಮುರುಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್ ಬೈಂದೂರು, ಕುಂದಾಪುರ, ಉಡುಪಿ, ಮೂಲ್ಕಿ, ಸುರತ್ಕಲ್‌ಗಳಲ್ಲಿ ನಿಲುಗಡೆ ಇದೆ.