ಶುಕ್ರವಾರ, ನವೆಂಬರ್ 22, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಅರುಣಾಚಲ ಪ್ರದೇಶದ ಕುಮಿ ನದಿಯಲ್ಲಿ ಮುಳುಗಿ 19 ಕಾರ್ಮಿಕರ ಸಾವು?

Twitter
Facebook
LinkedIn
WhatsApp
ಅರುಣಾಚಲ ಪ್ರದೇಶದ ಕುಮಿ ನದಿಯಲ್ಲಿ ಮುಳುಗಿ 19 ಕಾರ್ಮಿಕರ ಸಾವು?

ನವದೆಹಲಿ (ಜುಲೈ 18): ಅರುಣಾಚಲ ಪ್ರದೇಶದ ಕುಮಿ ನದಿಯಲ್ಲಿ ಮುಳುಗಿ 19 ಕಾರ್ಮಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಈ ಕಾರ್ಮಿಕರು ಚೀನಾ ಗಡಿ ಬಳಿ ರಸ್ತೆ ನಿರ್ಮಾಣ ಕೆಲಸ ಮಾಡುತ್ತಿದ್ದರು. ಈದ್ ಸಂದರ್ಭದಲ್ಲಿ ಅಸ್ಸಾಂಗೆ ಹೋಗಬೇಕೆಂದು ಬಯಸಿ, ಗುತ್ತಿಗೆದಾರನಿಗೆ ಮನವಿಯನ್ನೂ ಮಾಡಿದ್ದರು. ಆದರೆ ಬೇಡಿಕೆ ಒಪ್ಪದಿದ್ದಾಗ ಎಲ್ಲರೂ ಕಾಲ್ನಡಿಗೆಯಲ್ಲೇ ಅಸ್ಸಾಂಗೆ ತೆರಳಿದ್ದರು. ಈ ವೇಳೆ ಅರುಣಾಚಲ ಪ್ರದೇಶದಲ್ಲಿ ಕುಮಿ ನದಿ ದಾಟುವಾಗ ಪ್ರವಾಹದಲ್ಲಿ ಎಲ್ಲಾ 19 ಮಂದಿ ಕಾರ್ಮಿಕರು ಕೊಚ್ಚಿಕೊಂಡು ಹೋಗಿದ್ದಾರೆ ಎಂದು ವರದಿಯಾಗಿದೆ. ಇವೆಲ್ಲವನ್ನೂ ಬಾರ್ಡರ್‌ ರೋಡ್‌ ಆರ್ಗನೈಜೇಷನ್‌ (ಬಿಆರ್‌ಓ) ಅರುಣಾಚಲ ಪ್ರದೇಶದಲ್ಲಿ ಚೀನಾ ಗಡಿಯ ಸಮೀಪ ರಸ್ತೆ ನಿರ್ಮಾಣಕ್ಕಾಗಿ ತಂದಿದ್ದರು ಎಂದು ತಿಳಿದು ಬಂದಿದೆ. ಈದ್ ಸಂದರ್ಭದಲ್ಲಿ ಅವರು ಅಸ್ಸಾಂನಲ್ಲಿರುವ ತಮ್ಮ ಮನೆಗೆ ಹೋಗಬೇಕಿತ್ತು. ಕಾರ್ಮಿಕರಿಗೆ ಹಬ್ಬ ಆಚರಿಸಲು ಬಿಡಬೇಕು ಎಂದು ಗುತ್ತಿಗೆದಾರರಿಗೆ ಹಲವು ಬಾರಿ ತಿಳಿಸಲಾಗಿತ್ತು. ಆದರೆ ಗುತ್ತಿಗೆದಾರ ಒಪ್ಪದಿದ್ದಾಗ ಈ ಕಾರ್ಮಿಕರೆಲ್ಲರೂ ಕಾಲ್ನಡಿಗೆಯಲ್ಲಿ ಅಸ್ಸಾಂಗೆ ತೆರಳಿದರು. ಬಂದಿರುವ ಸುದ್ದಿಯ ಪ್ರಕಾರ, ಈ ಕಾರ್ಮಿಕರು ಅರುಣಾಚಲದ ಕುರುಂಗ್ ಕುಮೇ ಜಿಲ್ಲೆಯ ಕಾಡುಗಳಲ್ಲಿ ನಾಪತ್ತೆಯಾಗಿದ್ದು, ಕುಮಿ ನದಿಯ ಪ್ರವಾಹದಲ್ಲಿ ಸಾವಿಗೀಡಾಗಿರಬಹುದು ಎನ್ನಲಾಗಿದೆ.

ಸದ್ಯ, ಜಿಲ್ಲಾಧಿಕಾರಿ ಸ್ಥಳದಿಂದ ಕೇವಲ ಒಂದು ದೇಹವನ್ನು ಮಾತ್ರ ಹೊರತೆಗೆದಿದ್ದಾರೆ, ಆದರೆ ಸ್ಥಳೀಯರ ಪ್ರಕಾರ, ಎಲ್ಲಾ ಕಾರ್ಮಿಕರು ಸಾವನ್ನಪ್ಪಿದ್ದಾರೆ. ನಾಳೆ ಮತ್ತೊಂದು ತಂಡವನ್ನು ಸ್ಥಳಕ್ಕೆ ಕಳುಹಿಸಿ ಉಳಿದ ಕಾರ್ಮಿಕರ ಪತ್ತೆಗೆ ಪ್ರಯತ್ನಿಸಲಾಗುವುದು ಎಂದಿದ್ದಾರೆ.

ಘಟನೆ ನಡೆದು ಹಲವು ದಿನ: ಅಂದಹಾಗೆ, ಕುಮಿ ನದಿಯಲ್ಲಿ (Kumi River) ಕಾರ್ಮಿಕರು ಯಾವಾಗ ಮತ್ತು ಹೇಗೆ ಮುಳುಗಿದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅವರು ನದಿ ದಾಟಲು ಪ್ರಯತ್ನಿಸುತ್ತಿದ್ದರೇ? ನದಿ ದಾಟುವ ವೇಳೆ ನದಿಯು ವೇಗವಾಗಿ ಹರಿಯುತ್ತಿತ್ತೇ? ಎನ್ನುವ ಹಲವು ಪ್ರಶ್ನೆಗಳಿದ್ದು, ಅದಕ್ಕೆ ಉತ್ತರಗಳು ಇನ್ನೂ ಸಿಕ್ಕಿಲ್ಲ, ಈ ಕಾರಣದಿಂದಾಗಿ ಪೊಲೀಸರು ಕೂಡ ಈ ಅಪಘಾತದ ಬಗ್ಗೆ ಈವರೆಗೂ ಯಾವ ಮಾಹಿತಿಯನ್ನೂ ನೀಡಿಲ್ಲ. ಕಳೆದ ಒಂದು ವಾರದಿಂದ ಈ ಎಲ್ಲ ಕೂಲಿಕಾರರು ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಮಾತ್ರ ಲಭಿಸಿದೆ. ಈದ್ (Eid) ಆಚರಿಸಲು ಕಾಲ್ನಡಿಗೆಯಲ್ಲಿ ಅಸ್ಸಾಂಗೆ ತೆರಳಿದ್ದರು. ದಾರಿ ಮಧ್ಯೆ ಅವರಿಗೆ ಈ ದೊಡ್ಡ ಅಪಘಾತ ಸಂಭವಿಸಿದೆ ಎನ್ನುವುದಂತೂ ಸ್ಪಷ್ಟವಾಗಿದೆ.

ಅರುಣಾಚಲದಲ್ಲಿ ಭಾರೀ ಮಳೆ: ಅರುಣಾಚಲ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಮುಂದಿನ ದಿನಗಳಲ್ಲೂ ಇನ್ನಷ್ಟು ಪ್ರಮಾಣದಲ್ಲಿ ಮಳೆಯಾಗುವ ಮುನ್ಸೂಚನೆ ಕೂಡ ಇದೆ. ಈ ಕಾರಣಕ್ಕಾಗಿ, ಈಗಾಗಲೇ ನದಿಗಳ ನೀರಿನ ಮಟ್ಟವು ಹೆಚ್ಚುತ್ತಿದೆ ಮತ್ತು ಯಾರಾದರೂ ಮುಳುಗಿದರೆ, ಅವರನ್ನು ಉಳಿಸುವುದು ದೊಡ್ಡ ಸವಾಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

Adhvithi Shetty ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!

ರೂಪೇಶ್ ಶೆಟ್ಟಿಯ ‘ಜೈ’ ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!

ರೂಪೇಶ್ ಶೆಟ್ಟಿಯ ‘ಜೈ’ ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ! Twitter Facebook LinkedIn WhatsApp ಮಂಗಳೂರು: ರಾಕ್ ಸ್ಟಾರ್ (Rock Star)  ರೂಪೇಶ್ ಶೆಟ್ಟಿ (Rupesh Shetty) ಅಭಿನಯ ಮತ್ತು ನಿರ್ದೇಶನದ

Prathima ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!

ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!

ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು! Twitter Facebook LinkedIn WhatsApp ಉಡುಪಿ: ದಿಲೀಪ್ ಕಾರ್ಕಳದ ಪ್ರತಿಷ್ಠಿತ ಉದ್ಯಮಿ. ಕಾರ್ಕಳ ಪೇಟೆಯಲ್ಲಿರುವ ಬಾಲಾಜಿ ಎಂಬ ಲಾಡ್ಜ್ ಕಮ್

ಅಂಕಣ