ಅಮೆರಿಕ: ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಪತಿಗೆ ಮುತ್ತಿಟ್ಟ ಅಧ್ಯಕ್ಷ ಜೋ ಬೈಡನ್ ಪತ್ನಿ; ವಿಡಿಯೋ ವೈರಲ್
ವಾಷಿಂಗ್ಟನ್: ಅಮೆರಿಕಾದ ಅಧ್ಯಕ್ಷ ಜೋ ಬೈಡನ್ (Joe Biden) ಅವರ ಪತ್ನಿ ಹಾಗೂ ಯುಎಸ್ ಪ್ರಥಮ ಮಹಿಳೆ ಜಿಲ್ ಬೈಡನ್ (Jill biden) ಮಂಗಳವಾರ ಕ್ಯಾಪಿಟಲ್ ಹಿಲ್‌ನಲ್ಲಿ ಸ್ಟೇಟ್ ಆಫ್ ಯೂನಿಯನ್ ಸಭೆಗೂ ಮುನ್ನ ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ( Kamala Harris) ಅವರ ಪತಿ ಡೌಗ್ ಎಂಹಾಫ್ ಅವರ ತುಟಿಗೆ ಮುತ್ತಿಟ್ಟಿದ್ದಾರೆ. ಇದೀಗ ಈ ಬಗ್ಗೆ ವಿಡಿಯೋ ವೈರಲ್ ಆಗಿದೆ. ಮಂಗಳವಾರ ರಾತ್ರಿ ರಾಷ್ಟ್ರೀಯ ಕ್ಯಾಪಿಟಲ್‌ನಲ್ಲಿ, ಅಧ್ಯಕ್ಷ ಬಿಡೆನ್ ತಮ್ಮ ಎರಡನೇ ಸ್ಟೇಟ್ ಆಫ್ ಯೂನಿಯನ್ ಭಾಷಣ ಮಾಡಿದ್ದಾರೆ. ಇದಾದ ನಂತರ ಅಧ್ಯಕ್ಷ ಬಿಡೆನ್ ಪತ್ನಿ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಪತಿ ಇಬ್ಬರೂ ಕಿಸ್ ಮಾಡಿರುವ ಬಗ್ಗೆ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ, ಇದೀಗ ಈ ವಿಡಿಯೊ ವೈಲ್ ಆಗಿದೆ. ಜಿಲ್ ಬಿಡೆನ್ ಕಮಲಾ ಹ್ಯಾರಿಸ್ ಅವರ ಪತಿಗೆ ತುಟಿಗಳಿಗೆ ಮುತ್ತಿಟ್ಟಿದ್ದಾರೆ.
ಈ ಬಗ್ಗೆ ಟ್ವಿಟರ್ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು ಟ್ವಿಟರ್ ಬಳಕೆದಾರರೂ ಅವರು ಬರುವುದನ್ನು ನೋಡಲಿಲ್ಲ” ಮತ್ತು “ಜಿಲ್ ಬಿಡೆನ್ ಕಮಲಾ ಅವರ ಪತಿಗೆ ಲಿಪ್ಸ್‌ನಲ್ಲಿ ಮುತ್ತಿಟ್ಟಿದ್ದೀರಾ?! ಎಂದು ಪ್ರಶ್ನೆ ಮಾಡಿದ್ದಾರೆ. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಹಿಡಿತವನ್ನು ರಿಪಬ್ಲಿಕನ್ನರು ವಶಪಡಿಸಿಕೊಂಡ ನಂತರ, ವಿಭಜಿತ ಕಾಂಗ್ರೆಸ್‌ನ ಮುಂದೆ ಬಿಡೆನ್ ತನ್ನ ಮೊದಲ ಮಹತ್ವದ ಭಾಷಣವನ್ನು ಮಾಡಿದ್ದಾರೆ.
ಜೋ ಬಿಡೆನ್ ಮಂಗಳವಾರ (ಸ್ಥಳೀಯ ಸಮಯ) ತಮ್ಮ ಸ್ಟೇಟ್ ಆಫ್ ಯೂನಿಯನ್ ಭಾಷಣದಲ್ಲಿ ಕೋವಿಡ್ -19 ಮತ್ತು ರಷ್ಯಾ ಮತ್ತು ಉಕ್ರೇನ್ ಯುದ್ಧ ಬಗ್ಗೆ ಮಾತನಾಡಿದ್ದಾರೆ ಹೊಸದಾಗಿ ಚುನಾಯಿತವಾದ ಹೌಸ್ ಸ್ಪೀಕರ್ ಕೆವಿನ್ ಮೆಕಾರ್ಥಿಯನ್ನು ಅಭಿನಂದಿಸುವ ಮೂಲಕ ಬಿಡೆನ್ ಟೀಕೆ ಮಾಡಿದ್ದಾರೆ.
Did Jill Biden just kiss Kamala's husband on the LIPS?! pic.twitter.com/KvrUxSI8Lu
— Benny Johnson (@bennyjohnson) February 8, 2023