ಗುರುವಾರ, ಏಪ್ರಿಲ್ 25, 2024
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!-ಬಂಟ್ವಾಳ: ಅನಾರೋಗ್ಯದ ನಡುವೆಯೂ ಮತದಾನ ಮುಗಿಸಿ ಇಹಲೋಕ ತ್ಯಜಿಸಿದ ಮಾಜಿ ಸೈನಿಕ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ-ಚುನಾವಣೆ ಭಾಷಣ ಮಾಡುವಾಗ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ.!-EVM: ಇವಿಎಂ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್.!-ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ; ಹಾಸನದಲ್ಲಿ ಬಿಜೆಪಿಯ ಕೆಲವರ ಸಹಾಯವಿಲ್ಲ :ದೇವೇಗೌಡ-HSRP ನಂಬರ್ ಪ್ಲೇಟ್ ಅಳವಡಿಸಲು ಮೇ 31ರ ವರೆಗೆ ಗಡುವು; ಎಷ್ಟು ಬೀಳಲಿದೆ ದಂಡ.!-Gold Rate: ಬಹಳ ದಿನಗಳ ಬಳಿಕ ಕೊಂಚ ಇಳಿಕೆ ಕಂಡ ಚಿನ್ನದ ದರ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಅಭ್ಯಾಸದ ವೇಳೆ ಆಕಸ್ಮಿಕವಾಗಿ ಹಾರಿದ ಕ್ಷಿಪಣಿಗಳು-ಭಾರೀ ಸ್ಪೋಟ

Twitter
Facebook
LinkedIn
WhatsApp
amit shah 0116307512631660060556 9

ರಾಜಸ್ಥಾನ, ಮಾ 25 :ಯ ಸೇನೆಯ ಫೈರಿಂಗ್ ಅಭ್ಯಾಸದ ವೇಳೆ ಮೂರು ಕ್ಷಿಪಣಿಗಳು ಆಕಸ್ಮಿಕವಾಗಿ ಹಾರಿ ಭಾರೀ ಸ್ಪೋಟ ಸಂಭವಿಸಿದ ಘಟನೆ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ನಡೆದಿದೆ.

ಇಲ್ಲಿನ ಪೋಖ್ರಾನ್ ಬಯಲು ಪ್ರದೇಶದಲ್ಲಿ ಪ್ರತಿದಿನದಂತೆ ಪ್ರಯೋಗಾತ್ಮಕ ಫೈರಿಂಗ್‌ನಲ್ಲಿ ತೊಡಗಿದ್ದ ವೇಳೆ ಘಟನೆ ಸಂಭವಿಸಿದೆ. ಮೂರು ಕ್ಷಿಪಣಿಗಳನ್ನು ಹಾರಿಸುವಾಗ ಆದ ಎಡವಟ್ಟಿನಿಂದ ಸ್ಪೋಟ ಉಂಟಾಯಿತು. ನೆಲದಿಂದ ವಾಯುಪ್ರದೇಶಕ್ಕೆ ಸರಿಯಾದ ರೀತಿಯಲ್ಲಿ ಈ ಕ್ಷಿಪಣಿಗಳು ಚಿಮ್ಮದ ಕಾರಣ ಸೇನೆ ನಿಗದಿಪಡಿಸಿದ ಸ್ಥಳದ ಬದಲಾಗಿ ಬೇರೆ ಬೇರೆ ಮೂರು ಹಳ್ಳಿಗಳ ಹೊಲಗಳಲ್ಲಿ ಹೋಗಿ ಬಿದ್ದಿವೆ. ಬಿದ್ದ ಸ್ಥಳದಲ್ಲಿ ಭಾರೀ ಸ್ಪೋಟ ಉಂಟಾಗಿದೆ. ಆದರೆ ಯಾವುದೇ ಹಾನಿ ಸಂಭವಿಸಿಲ್ಲ. ಆದರೆ ಅಲ್ಲಿ ದೊಡ್ಡ ಹೊಂಡಗಳು ನಿರ್ಮಾಣವಾಗಿವೆ ಎಂದು ವರದಿಯಾಗಿದೆ.

ಇನ್ನು ಕ್ಷಿಪಣಿ ಉಡಾವಣೆ ವೇಳೆಯೇ ಸ್ಪೋಟದ ಸದ್ದು ಕೇಳಿದೆ ಎನ್ನಲಾಗಿದೆ. ಬಳಿಕ ಬಿದ್ದ ಕ್ಷಿಪಣಿಗಳಿಗಾಗಿ ಪೊಲೀಸರು ಮತ್ತು ಸೇನಾ ಸಿಬಂದಿ ಹುಡುಕಾಟ ನಡೆಸಿದ್ದು, ಈ ಪೈಕಿ ಎರಡು ಕ್ಷಿಪಣಿಗಳ ಅವಶೇಷಗಳು ಅಜಾಸರ್​ ಎಂಬ ಗ್ರಾಮದ ಕಚ್ಚಬ್​ ಸಿಂಗ್​ ಪ್ರದೇಶದಲ್ಲಿ ಮತ್ತು ತ್ಯಯ್ಯ ಗ್ರಾಮದ ಬಳಿ ಒಂದು ನಿರ್ಜನ ಪ್ರದೇಶದಲ್ಲಿ ಸಿಕ್ಕಿವೆ. ಇನ್ನೊಂದು ಕ್ಷಿಪಣಿಯ ಅವಶೇಷ ಸಿಗಲು ಬಾಕಿ ಇದೆ.

ಮೇಲ್ನೋಟಕ್ಕೆ ಇದೊಂದು ತಾಂತ್ರಿಕ ದೋಷದಿಂದಾಗಿ ಉಂಟಾದ ಘಟನೆ ಎಂದು ಕಂಡು ಬಂದಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಸೇನೆ ತಿಳಿಸಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ