ಭಾನುವಾರ, ಫೆಬ್ರವರಿ 23, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಅಬ್ಬಬ್ಬಾ..14 ದಿನದ ಮಗು ಗರ್ಭಿಣಿ, ಹೊಟ್ಟೆಯೊಳಗಿತ್ತು ಮೂರು ಭ್ರೂಣ!

Twitter
Facebook
LinkedIn
WhatsApp
1554244010 1

ಉತ್ತರ ಪ್ರದೇಶ: 14 ದಿನಗಳ ಹೆಣ್ಣು ಮಗು ಗರ್ಭಿಣಿಯಾಗಿರುವ ಅಚ್ಚರಿಯ ಘಟನೆ ಉತ್ತರಪ್ರದೇಶ ವಾರಣಾಸಿಯಲ್ಲಿ ನಡೆದಿದೆ. ಕಾಶಿ ಹಿಂದೂ ವಿಶ್ವವಿದ್ಯಾಲಯದ ಸರ್ ಸುಂದರ್‌ಲಾಲ್ ಆಸ್ಪತ್ರೆಯಲ್ಲಿ 14 ದಿನಗಳ ಹೆಣ್ಣು ಮಗು ಗರ್ಭಿಣಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಹೆಣ್ಣು ಮಗುವಿನ ಹೊಟ್ಟೆಯಲ್ಲಿ ಮೂರು ಭ್ರೂಣಗಳು ಪತ್ತೆಯಾಗಿವೆ. ಇದನ್ನು ನೋಡಿದ ವೈದ್ಯರು ಸಹ ಆಶ್ಚರ್ಯಚಕಿತರಾಗಿದ್ದಾರೆ. 14 ದಿನದ ಮಗುವಿನ ಹೊಟ್ಟೆಯಿಂದ ಮೂರು ಭ್ರೂಣಗಳನ್ನು ಆಪರೇಷನ್ ಮಾಡುವ ಮೂಲಕ ವೈದ್ಯರು ಹೊರ ತೆಗೆದಿದ್ದಾರೆ. 7 ವೈದ್ಯರ ತಂಡವು 3 ಗಂಟೆಗಳ  ಆಪರೇಷನ್ ನಡೆಸಿ ನಂತರ ಈ ಯಶಸ್ಸನ್ನು ಸಾಧಿಸಿದೆ. 

ಬಿಎಚ್‌ಯುನ ಸರ್ ಸುಂದರ್ ಲಾಲ್ ಆಸ್ಪತ್ರೆ ತಲುಪಿದ ದಂಪತಿಯ (Couple) ಮಗುವನ್ನು ನೋಡಿದ ಡಾ.ಶೇಟ್ ಕಚಾಪ್ ಗೊಂದಲಕ್ಕೊಳಗಾದರು ಮತ್ತು ಮಗುವಿನ ಅಲ್ಟ್ರಾಸೌಂಡ್ ಮಾಡಿಸಿದರು. ಅಲ್ಟ್ರಾಸೌಂಡ್‌ನಲ್ಲಿ ಮಗುವಿನ ಹೊಟ್ಟೆಯಲ್ಲಿ(Stomach) ಕೆಲವು ವಿಷಯಗಳು ಗೋಚರಿಸಿದವು, ನಂತರ CT ಸ್ಕ್ಯಾನ್ ಮಾಡಲಾಯಿತು ಎಂದು ಡಾ.ಶೇಟ್ ಕಚಾಪ್ ಹೇಳಿದರು. ಈ ಸಂದರ್ಭದಲ್ಲಿ ಮಗುವಿನ ಹೊಟ್ಟೆಯಲ್ಲಿ ಬೇರೆ ಬೇರೆ ಹಂತದಲ್ಲಿರುವ ಮೂರು ಭ್ರೂಣಗಳು (Fetus) ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ತಾಯಿಯ ಹೊಟ್ಟೆಯಿಂದ ಮಗುವಿನ ಹೊಟ್ಟೆಗೆ ವರ್ಗಾವಣೆಯಾ ಭ್ರೂಣ
ಈ ಕುರಿತು ವೈದ್ಯರ ತನಿಖೆ ವೇಳೆ ಬಯಲಿಗೆ ಬಂದಿರುವ ವಿಷಯ ಇನ್ನಷ್ಟು ಅಚ್ಚರಿ ಮೂಡಿಸಿದೆ. ಮಗುವಿನ ಹೊಟ್ಟೆಯಿಂದ ಹೊರಬಂದ ಭ್ರೂಣಗಳು ಮಗುವಿನ ಇತರ ಒಡಹುಟ್ಟಿದವರಂತೆಯೇ ಇವೆ. ತಾಯಿಯ ಗರ್ಭದಲ್ಲೇ ಇದ್ದ ಈ ಭ್ರೂಣಗಳು ಈ ಮಗುವಿನ ಹೊಟ್ಟೆಗೆ ವರ್ಗಾವಣೆಯಾಗಿವೆ ಎಂದು ತಿಳಿದುಬಂದಿದೆ. ಮಗುವಿನ ಹೊಟ್ಟೆಯಲ್ಲಿ ಈ ರೀತಿಯ ಭ್ರೂಣ ಇದ್ದರೆ ಅದನ್ನು ಫೆಟಸ್ ಫಿಟು ಎಂಬ ರೋಗದ ಲಕ್ಷಣವಾಗಿದೆ ಎಂದು ವೈದ್ಯರು ಹೇಳುತ್ತಾರೆ. ಇದು 5 ಲಕ್ಷಗಳಲ್ಲಿ ಒಂದು ಮಗುವಿನಲ್ಲಿ ಕಂಡುಬರುತ್ತದೆ. ಮಗುವಿನ ತಾಯಿಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಇತರ ಭ್ರೂಣಗಳು ಸಂಪೂರ್ಣವಾಗಿ ಬೆಳೆಯಲು ಸಾಧ್ಯವಾಗದ ಕಾರಣ, ಬೆಳವಣಿಗೆ ಹೊಂದುತ್ತಿದ್ದ ಈ ಮಗುವಿನ ಹೊಟ್ಟೆಗೆ ವರ್ಗಾಯಿಸಲ್ಪಡುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ.

ವೈದ್ಯಕೀಯ ತಂಡವು 3 ದಿನಗಳ ಕಾಲ ಈ ಪರಿಸ್ಥಿತಿಯನ್ನು ಇನ್ನೂ ಅನೇಕ ತಜ್ಞರೊಂದಿಗೆ ಚರ್ಚಿಸಿ, ಕೇಸ್ ಹಿಸ್ಟರಿಯನ್ನು ಪರಿಶೀಲಿಸಿ ನಂತರ ಆಪರೇಷನ್ ಮಾಡಲು ನಿರ್ಧರಿಸಿತು ಎಂದು ಡಾ.ಶೇಟ್ ಕಚ್ಚಪ್ ಹೇಳಿದರು. ಡಾ.ರುಚಿರಾ ನೇತೃತ್ವದ ಏಳು ಜನರ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ ಎಂದು ತಿಳಿಸಿದರು. 

ಮಗು ಸಂಪೂರ್ಣವಾಗಿ ಆರೋಗ್ಯವಾಗಿದ್ದು, ವಿಶೇಷ ನಿಗಾ ಘಟಕದಲ್ಲಿ ಇರಿಸಲಾಗಿದೆ. ಪ್ರತಿ ಐದರಲ್ಲಿ ಒಂದು ಮಗುವಿಗೆ ಈ ಸಮಸ್ಯೆ ಉಂಟಾಗುತ್ತದೆ ಎಂದು ಡಾ.ರುಚಿರಾ ತಿಳಿಸಿದರು. ಇದೊಂದು ಅಪರೂಪದ ಕಾಯಿಲೆ. ತಾಯಿಯ ಗರ್ಭಾವಸ್ಥೆಯ ಸಮಯದಲ್ಲಿ ಭ್ರೂಣವು ಮಗುವಿನ ಹೊಟ್ಟೆಯನ್ನು ಪ್ರವೇಶಿಸುತ್ತದೆ. ಇದು ಬೆಳವಣಿಗೆ (Growth)ಯಾಗುವುದಿಲ್ಲ ಆದರೆ ಜನನದ ನಂತರ ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಮಾಹಿತಿ ನೀಡಿದರು..

ಮಗುವಿನ ಹೊಟ್ಟೆಯಲ್ಲಿ ಭ್ರೂಣ ಇರುವುದು ಹೇಗೆ ಗೊತ್ತಾಯಿತು? 
14 ದಿನದ ಹೆಣ್ಣು ಮಗು ಹೊಟ್ಟೆಯಲ್ಲಿ ಊತ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿತ್ತು. ಇದಾದ ಬಳಿಕ ಮಗುವನ್ನು ಬಿಎಚ್‌ಯು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅಲ್ಟ್ರಾಸೌಂಡ್ ಪರೀಕ್ಷೆ ನಡೆಸಿದಾಗ ಮಗುವಿನ ಹೊಟ್ಟೆಯಲ್ಲಿ ಮೂರು ಭ್ರೂಣಗಳಿರುವುದು ಪತ್ತೆಯಾಗಿತ್ತು. ನಂತರ ವೈದ್ಯರು ಸಿಟಿ ಸ್ಕ್ಯಾನ್ ಮಾಡಿ ಈ ವಿಷಯವನ್ನು ದೃಢಪಡಿಸಿದ್ದರು. ಬಾಲಕಿಯ ಗರ್ಭದಲ್ಲಿ ಭ್ರೂಣ ಇರುವುದು ದೃಢಪಟ್ಟ ನಂತರ ಡಾ.ರುಚಿರಾ ನೇತೃತ್ವದ ಆರು ಮಂದಿ ವೈದ್ಯರ ತಂಡ, ಸತತ ಮೂರು ಗಂಟೆ ಕಾಲ ಶಸ್ತ್ರಚಿಕಿತ್ಸೆ ನಡೆಸಿತು (Operation). 

ಮಗುವಿಗೆ ಚಿಕಿತ್ಸೆ ನೀಡಿದ ಡಾ.ರುಚಿರಾ ಮಾತನಾಡಿ, ಇದೊಂದು ಅತ್ಯಂತ ಸಂಕೀರ್ಣ ಕಾಯಿಲೆಯಾಗಿದೆ. ಐದು ಲಕ್ಷದಲ್ಲಿ ಒಂದು ಮಗುವಿನಲ್ಲಿ ಇಂತಹ ಸಮಸ್ಯೆ ಕಂಡುಬರುತ್ತದೆ. ಇದಕ್ಕೆ ಚಿಕಿತ್ಸೆಯ ವೆಚ್ಚ ಅತ್ಯಂತ ದುಬಾರಿಯಾಗಿರುತ್ತದೆ. ಆದರೆ, ಬಿಎಚ್‌ಯುನ ಸರ್ ಸುಂದರ್‌ಲಾಲ್ ಆಸ್ಪತ್ರೆಯಲ್ಲಿ ಮಗುವಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist