ಅನೈತಿಕ ಸಂಬಂಧ ಪ್ರಶ್ನಿಸಿದ್ದ ಪತಿಯನ್ನೇ ಹತ್ಯೆಗೈದ ಪತ್ನಿ
Twitter
Facebook
LinkedIn
WhatsApp
ಮೈಸೂರು: ಅನೈತಿಕ ಸಂಬಂಧ ಪ್ರಶ್ನಿಸಿದ್ದ ಪತಿಯನ್ನು ಪ್ರಿಯಕರನ ಜೊತೆ ಸೇರಿ ಪತ್ನಿಯೇ ಹತ್ಯೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಹೂಟಗಳ್ಳಿ ನಿವಾಸಿ ಮಂಜು ಕೊಲೆಯಾಗಿದ್ದು ಪತ್ನಿ ಲಿಖಿತ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ದಂಪತಿ 12 ವರ್ಷಗಳ ಹಿಂದೆ ಮದುವೆಯಾಗಿದ್ದು ಇಬ್ಬರು ಗಂಡು ಮಕ್ಕಳಿದ್ದಾರೆ.
ಮೋಜು ಮಸ್ತಿಯಲ್ಲಿ ತೊಡಗಿದ್ದ ಲಿಖಿತ ಬೇರೋಬ್ಬನ ಜೊತೆಯೂ ಅನೈತಿಕ ಸಂಬಂಧ ಬೆಳೆಸಿದ್ದಳು. ಅಲ್ಲದೆ ಆತನ ಜೊತೆ ಓಡಿ ಹೋಗಿದ್ದಳು. ಹೀಗಾಗಿ ಆಕೆಯನ್ನು ಪತ್ತೆ ಮಾಡಿ ಕರೆ ತಂದು ರಾಜಿ ಪಂಚಾಯ್ತಿ ಮಾಡಿ ನಂತರ ಮಂಜು ಮನೆಗೆ ಸೇರಿಸಿಕೊಂಡಿದ್ದರು.
ಆದರೆ ಲಿಖಿತ ಪ್ರಿಯಕರನೊಂದಿಗೆ ಸೇರಿಕೊಂಡು ಕಳೆದ ರಾತ್ರಿ ಗಂಡ ಮಂಜುನ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.