ಸೋಮವಾರ, ಮೇ 20, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಅದ್ದೂರಿಯಿಂದ ನಡೆಯಲಿದೆ ತಾಯಿಫ್ ಪ್ರೀಮಿಯರ್ ಲೀಗ್ -TPL - 05 .

Twitter
Facebook
LinkedIn
WhatsApp
ಅದ್ದೂರಿಯಿಂದ ನಡೆಯಲಿದೆ ತಾಯಿಫ್ ಪ್ರೀಮಿಯರ್ ಲೀಗ್ -TPL – 05 .

ಇದೇ ನವೆಂಬರ್ 18 ರಂದು; ತಾಯಿಫ್ ಜೂರಿ ಮಾಲ್ ಕ್ರೀಡಾಂಗಣದಲ್ಲಿ!! ಜರಗಲಿದೆ. ಕೇರಳ , ಕರ್ನಾಟಕ ಹಾಗೂ ಇನ್ನಿತರ ಧಕ್ಷಿಣ ಭಾರತೀಯ ಅನಿವಾಸಿ ತಂಡಗಳ ಅಂಡರ್ ಆರ್ಮ್ ಕ್ರಿಕೆಟ್ ಲೀಗ್ ಪಂದ್ಯಾಟದ ರಸದೌತಣ !

2016 ರಲ್ಲಿ ಆರಂಭಗೊಂಡು ಪ್ರತಿವರ್ಷ ಪ್ರೇಕ್ಷಕರನ್ನು ಕುತೂಹಲ, ಸಂಭ್ರಮ, ಸಡಗರದಲ್ಲಿ ತೇಲಿಸುತ್ತಾ ಹಬ್ಬದ ವಾತಾವರಣ ನೀಡುತ್ತಾ ಬಂದ ಈ ಕ್ರೀಡಾಕೂಟ ಇದೀಗ ಐದನೆಯ ವರ್ಷದಲ್ಲಿ ಪೂರ್ವಾಧಿಕ ಸಿದ್ಧತೆಯೊಂದಿಗೆ ಸಜ್ಜಾಗಿದೆ.
ತಾಯ್ನಾಡಿನಲ್ಲಿ ಕುಟುಂಬ, ಬಂಧು ಬಳಗ, ಆಪ್ತೇಷ್ಟರನ್ನು ಅಗಲಿ ದೂರದ ಗಲ್ಫ್ ದೇಶದಲ್ಲಿ ಕುಟುಂಬದ, ನಾಡಿನ ಏಳಿಗಾಗಿ ದುಡಿಯುತ್ತಿರುವ ಅನಿವಾಸಿ ಭಾರತೀಯರ ವಿರಹದ ದುಖಕ್ಕೆ ಇಂತಹ ಕೂಟ ಕೂಡುವಿಕೆಗಳು ಅಮೃತ ಸಿಂಚನಗಳನ್ನೆರೆಯುತ್ತವೆ.
ಅನಿವಾಸಿಗಳಲ್ಲಿರುವ ಉತ್ತಮ ಕ್ರೀಡಾಪಟುಗಳ ಪ್ರತಿಭೆಗಳು, ಕಮರದೆ, ಕ್ರೀಡಾಪ್ರೇಮಿಗಳ ಉತ್ಸಾಹ ಮಂಕಾಗದೆ ಜೀವಂತವಾಗಿರಿಸುವ ಈ ಕ್ರೀಡಾಕೂಟವು ಅನಿವಾಸಿ ಭಾರತೀಯರ ಪಾಲಿಗೆ ನವಚೈತನ್ಯದ ಸಿಂಚನವಾಗಿದೆ.
2016 ರ ಪ್ರಥಮ ವರ್ಷ ನಡೆದ ಅಮೋಘ ಕ್ರೀಡಾ ಪ್ರದರ್ಶನದಲ್ಲಿ ನೈಟ್ ರೈಡರ್ಸ್ ತಂಡ ಚಾಂಪಿಯನ್ ಆಗಿ ಮೂಡಿಬಂದಿತ್ತು.

ಮುಂದಿನ ವರ್ಷ ರೈಸಿಂಗ್ ಸ್ಟಾರ್ ತಂಡವು ಅಮೋಘ ಕ್ರೀಡಾ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟ ಪಡೆದುಕೊಂಡಿತ್ತು.

ಮೂರನೆಯ ವರ್ಷ; ಪವರ್ ಜೆಂಟ್ಸ್ ತಂಡವು ಕೆಚ್ಚೆದೆಯ ಹೋರಾಟದಿಂದ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡಿತ್ತು.

ನಾಲ್ಕನೆಯ ವರ್ಷ ಪಂದ್ಯಾಟ ಆರಂಭ ಗೊಂಡಿತ್ತಾದರೂ ಕೊರೋನಾ ಕಾರಣದಿಂದ ಪ್ರಥಮ ಸುತ್ತಿನಲ್ಲೇ ಪಂದ್ಯ ರದ್ದಾಗಿತ್ತು.
ಇದೀಗ ಐದನೆಯ ವರ್ಷದ ಮಹತ್ವದ ಪಂದ್ಯಾಟದಲ್ಲಿ ಅತ್ಯುತ್ಸಾಹದಿಂದ ಭಾಗವಹಿಸುವ ತಂಡಗಳ ವಿವರಣೆ ಹೀಗಿದೆ;

1. Power Hitters. ( ನಾಯಕ: ಫವಾಝ್ ಬಾಯಾರ್ )
2: Brothers Taif ( ನಾಯಕ: ಹಬೀಬ್ ವಳಚ್ಚಿಲ್)
3: Game Changers ( ನಾಯಕ: ನಿಝಾಮ್ ಕೊಡಂಗಾಯಿ)
4: United Taif ( ನಾಯಕ: ಶರಫ್ ನೀರ್ ಮಾರ್ಗ)
5: Red Wings ( ನಾಯಕ: ಅಕೀಬ್ ವಳಚ್ಚಿಲ್ )
ಮಿಂಚಿನ ದಾಳಿಯಿಂದ ವಿಕೆಟ್ ಹಾರಿಸುವ ಮಾಂತ್ರಿಕ ದಾಳಿಗಾರರೂ ಚೆಂಡನ್ನು ರಾಕೆಟ್ ನಂತೆ ಉಡಾಯಿಸಿ ಸಿಕ್ಸರ್, ಬೌಂಡರಿಗೆ ಅಟ್ಟುವ ದಾಂಡಿಗರಿಂದಲೂ ಚುರುಚುರುಕಿನ ಕ್ಷೇತ್ರ ರಕ್ಷಕರಿಂದಲೂ ಕೂಡಿದ ಪ್ರಸ್ತುತ ತಂಡಗಳಿಂದ ನಡೆಯಲಿರುವ ಈ ಬಾರಿಯ ಮೈ ನವಿರೇಳಿಸುವ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಚಾಂಪಿಯನ್ ಕಿರೀಟವು ಯಾರ ಮುಡಿಗೇರಲಿದೆ ಎಂಬ ಕುತೂಹಲ ಗರಿಗೆದರಿದೆ. ಒಂದಕ್ಕೊಂದು ಮೀರಿಸುವ ಅದ್ಭುತ ಛಲ, ಛಾತಿಯಿಂದ ಕೂಡಿದ ಘಟಾನುಘಟಿ ತಂಡಗಳ ನಡುವೆ ನಡೆಯಲಿರುವ ಕ್ರೀಡಾಕದನದ ಅಮೋಘ ರಸಗಳಿಗೆಗಳನ್ನು ಮನದಣಿಯೆ ವೀಕ್ಷಿಸುವ ಕುತೂಹಲ ಎಲ್ಲೆಡೆ ಚಿಮ್ಮುತ್ತಲಿದೆ.
ವಿಜಯ ಶ್ರೀಮಾಲೆ ಯಾವ ತಂಡದ ಕೊರಳಿಗೆ ಬೀಳಲಿದೆ, ಏನೆಲ್ಲ ಅನಿರೀಕ್ಷಿತ ತಿರುವುಗಳು ಮೂಡಿ ಬರಲಿದೆ ಎಂಬ ಕಾತರ ನೆಲೆಸಿದೆ.

ತಂಡಗಳ ಮಾಲಕರು
ಜೀವನ ಅರಸಿಕೊಂಡು ತಾಯ್ನಾಡು ತೊರೆದು ಬಿಸಿಲ ನಾಡಲ್ಲಿ ಬಂದು ಕಷ್ಟ, ಸಮಸ್ಯೆಗಳಿಗೆ ಸಿಲುಕುವ ಜನರಿಗೆ ಸದಾ ಆಸರೆಯಾಗಿ, ಸಹಾಯಕರಾಗಿ, ಜಾತಿ ಮತ ನೋಡದೆ ತಾಯ್ನಾಡು ಭಾರತೀಯ ಎಂಬ ದೃಷ್ಟಿಯಿಂದ ಪರಿಹಾರ, ಆಸರೆ, ನೆರವು ನೀಡಿಕೆಯಲ್ಲಿ ಸದಾ ಮುಂಚೂಣಿಯಲ್ಲಿರುವ, ಹೃದಯ ವೈಶಾಲ್ಯದ ಪ್ರತಿರೂಪಗಳಾದ;

ಜನಾಬ್ ಮಜೀದ್ ಕನ್ನಂಗಾರ್,
ಜನಾಬ್ ಅನ್ಸಾರ್ ಅಡ್ಡೂರು ಉತೈಬಿ,
ಜನಾಬ್ ಮಜೀದ್ ಪರ್ತಿಪ್ಪಾಡಿ,
ಬ್ರದರ್ಸ್ ತಾಯಿಫ್ ಹಾಗೂ ಸಿದ್ದೀಖ್ ಪಲ್ಲಕುಡಲ್

ಆವೇಶ ಭರಿತ ಆಟ, ತಂಡಗಳ ಛಲದ ಛಾತಿ, ಆಟಗಾರರ ಪ್ರತಿಭೆಗಳ ಪ್ರದರ್ಶನ, ಪ್ರೇಕ್ಷಕರ ಸಂಭ್ರಮ, ಆಕರ್ಷಕ ವೀಕ್ಷಕ ವಿವರಣೆ, ಬಹುಮಾನ ವಿತರಣೆ, ಸ್ಟಾಂಡರ್ಡ್ ತಪ್ಪದ ಹಾಸ್ಯ, ವಿನೋದಗಳ ರಸ ನಿಮಿಷಗಳು ಎಲ್ಲವೂ ಸೇರಿ ಅನಿವಾಸಿ ಭಾರತೀಯರನ್ನು ಹಬ್ಬದ ಸಂಭ್ರಮದಲ್ಲಿ, ನವೋಲ್ಲಾಸದ ಸಡಗರದಲ್ಲಿ ತೇಲಿಸುವುದಲ್ಲದೆ ತಾಯ್ನಾಡಿನ ಸ್ನೇಹಿತರ ಪ್ರೀತಿ ಹಂಚಿಕೊಳ್ಳುವ ಅಸುಲಭ ಮುಹೂರ್ತವೂ ಕೂಡಾ ಆಗಿರುವ ಈ ಸಂಭ್ರಮೋಲ್ಲಾಸಕ್ಕೆ ಸರ್ವರಿಗೂ ಆದರದ, ಅಕ್ಕರೆಯ, ಸಗೌರವ ಆಮಂತ್ರಣ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್? Twitter Facebook LinkedIn WhatsApp ಮಂಗಳೂರು: ಕೆಪಿಸಿಸಿಯ ಆಂತರಿಕ ಸರ್ವೆಯ ವರದಿ ಬಹಿರಂಗವಾಗಿದ್ದು,

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಅಂಕಣ