ಬುಧವಾರ, ಫೆಬ್ರವರಿ 5, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಅತ್ಯಧಿಕ ಮೈಲೇಜ್ ನೀಡುವ ಮಾರುತಿ SUV ಗ್ರ್ಯಾಂಡ್ ವಿಟಾರಾ ಕಾರ್‌ ಲಾಂಚ್

Twitter
Facebook
LinkedIn
WhatsApp
ಅತ್ಯಧಿಕ ಮೈಲೇಜ್ ನೀಡುವ ಮಾರುತಿ SUV ಗ್ರ್ಯಾಂಡ್ ವಿಟಾರಾ ಕಾರ್‌ ಲಾಂಚ್

ಹಬ್ಬದ ಸೀಸನ್’ನಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಕಾರು ಪ್ರಿಯರಿಗೆ ಸಿಹಿ ಸುದ್ದಿ ಕೊಟ್ಟಿದೆ. ದಸರಾ, ದೀಪಾವಳಿ ಸೇರಿದಂತೆ ಸಾಲು ಸಾಲು ಹಬ್ಬಗಳ ಸಂಭ್ರಮದಲ್ಲಿ ಕಾರ್ ಕೊಳ್ಳಲು ಯೋಜಿಸುತ್ತಿರುವವರಿಗಾಗಿಯೇ ಅತ್ಯಧಿಕ ಮೈಲೇಜ್ ನೀಡುವ ಹೊಸ ಕಾರು ಬಿಡುಗಡೆ ಮಾಡಿದೆ. ವೇರಿಯೆಂಟ್‌ ಆಧಾರದ ಮೇಲೆ 10-19 ಲಕ್ಷ ಬೆಲೆಗೆ ಸಿಗುವ ಈ ಕಾರು ನೋಡಲು ಆಕರ್ಷಕವಾಗಿದ್ದು, ಹಲವು ಕಾರಣಗಳಿಗೆ ವಿಶೇಷವೆನಿಸಿದೆ.

ಅತ್ಯಧಿಕ ಮೈಲೇಜ್ ನೀಡುವ ಮಾರುತಿ SUV ಗ್ರ್ಯಾಂಡ್ ವಿಟಾರಾ ಕಾರ್‌ ಲಾಂಚ್

ಮಾರುತಿ ಸುಜುಕಿ ಸಂಸ್ಥೆಯು ತನ್ನ ಮಧ್ಯಮ ಗಾತ್ರದ ಅತ್ಯಾಕರ್ಷಕ SUV ಗ್ರ್ಯಾಂಡ್ ವಿಟಾರಾ ಕಾರ್‌ಅನ್ನು ಇಂದು ಭಾರತದಲ್ಲಿ ಲಾಂಚ್‌ ಮಾಡಿದೆ. ಇದರಲ್ಲಿ SUV ಮೈಲ್ಡ್‌ ಹೈಬ್ರಿಡ್ ಮತ್ತು ಸ್ಟ್ರಾಂಗ್‌ ಹೈಬ್ರಿಡ್ ಪವರ್‌ಟ್ರೇನ್ ಎಂಬ ಆಯ್ಕೆಯನ್ನೂ ನವೀಕರಿಸಲಾಗಿದೆ.

ಮೈಲೇಜ್‌ ವಿಚಾರದಲ್ಲಿ ಮುಂದಿರುವ ವಿಟಾರಾ ಕಾರು ಪ್ರತಿ ಲೀಟರ್‌ಗೆ 27.97 kmpl ಮೈಲೇಜ್ ನೀಡಲಿದೆ. ಟೊಯೊಟಾ ಮತ್ತು ಸುಜುಕಿ ಕಂಪನಿ ಜಂಟಿಯಾಗಿ ಕರ್ನಾಟಕದ ಟೊಯೊಟಾ ಕಾರ್ಖಾನೆಯಲ್ಲಿ ಈ ಕಾರ್‌ಗಳನ್ನು ತಯಾರಿಸುತ್ತಿವೆ ಅಂತ ಸುಜುಕಿ ಸಂಸ್ಥೆ ಹೇಳಿದೆ.

ಅತ್ಯಧಿಕ ಮೈಲೇಜ್ ನೀಡುವ ಮಾರುತಿ SUV ಗ್ರ್ಯಾಂಡ್ ವಿಟಾರಾ ಕಾರ್‌ ಲಾಂಚ್

ಅಂದಹಾಗೆ ಮಾರುತಿ ಸುಜುಕಿ ಸಂಸ್ಥೆ ಇಂದು ಬಿಡುಗಡೆ ಮಾಡಿದ SUV ಗ್ರ್ಯಾಂಡ್ ವಿಟಾರಾ ಕಾರು ಕೊಳ್ಳಲು ಬಯಸುವವರು ಮುಂಗಡವಾಗಿ 11 ಸಾವಿರ ರೂ. ಟೋಕನ್ ಅಡ್ವಾನ್ಸ್‌ ನೀಡಿ ಬುಕಿಂಗ್‌ ಮಾಡಬಹುದು. ಈಗ ಬುಕಿಂಗ್‌ ಮಾಡಿದರೆ, ಅಕ್ಟೋಬರ್‌ನಿಂದ ಕಾರ್‌ ವಿತರಣೆ ಆರಂಭವಾಗಲಿದೆ.

ಈ ಕಾರ್‌ನ ಅಧಿಕೃತ ಬೆಲೆಯ ಮಾಹಿತಿಯು ಹೊರಬಿದ್ದಿದ್ದು, ವೇರಿಯೆಂಟ್‌ ಆಧಾರದ ಮೇಲೆ ಆರಂಭಿಕ 10.45 ಲಕ್ಷ ರೂ. ದಿಂದ 19.65 ಲಕ್ಷದ ವರೆಗೆ ಈ ಕಾರ್‌ ಸಿಗಲಿದೆ. ಪ್ರತಿ ಲೀಟರ್‌ಗೆ 27.97 kmpl ಮೈಲೇಜ್ ನೀಡಲಿರುವ ವಿಟಾರಾ ಕಾರು ಬಿಡುಗಡೆ ಹಿನ್ನೆಲೆ ಆಟೋ ಮಾರುಕಟ್ಟೆಯಲ್ಲಿ ಮತ್ತಷ್ಟು ಸ್ಪರ್ಧೆ ಏರ್ಪಡಲಿದೆ. ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಫೋಕ್ಸ್‌ವ್ಯಾಗನ್ ಟೈಗುನ್ ಮತ್ತು ಟೊಯೋಟಾ ಹೈ ರೈಡರ್‌ಗಳೊಂದಿಗೆ ಈ ಕಾರು ಸ್ಪರ್ಧೆ ಒಡ್ಡಲಿದೆ.

ಅಂದಹಾಗೆ SUV ಗ್ರ್ಯಾಂಡ್ ವಿಟಾರಾ ಕಾರು ಮೈಲೇಜ್ ವಿಚಾರಕ್ಕೆ ಮಾತ್ರವಲ್ಲದೆ ಹಲವು ಕಾರಣಕ್ಕೆ ವಿಶೇಷ ಎಣಿಸಿದೆ. ಗ್ರಾಂಡ್ ವಿಟಾರಾವು ಪನೋರಮಿಕ್ ಸನ್‌ರೂಫ್, ಹೆಡ್ಸ್-ಅಪ್ ಡಿಸ್ಪ್ಲೇ, 360-ಡಿಗ್ರಿ ಪಾರ್ಕಿಂಗ್ ಕ್ಯಾಮೆರಾ, ಆಂಬಿಯೆಂಟ್ ಲೈಟಿಂಗ್, ಫ್ರಂಟ್ ವೆಂಟಿಲೇಟೆಡ್ ಸೀಟ್‌ಗಳು, ಕೀ ಲೆಸ್ ಎಂಟ್ರಿ, ವೈರ್‌ಲೆಸ್ ಚಾರ್ಜರ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ರಿಯರ್ ಎಸಿ ವೆಂಟ್‌ಗಳು, ಒನ್ ಪುಶ್ ಟು ಸ್ಟಾರ್ಟ್/ಸ್ಟಾಪ್ ಎಂಜಿನ್ ವೈಶಿಷ್ಟ್ಯಗಳು ಈ ಕಾರಿನಲ್ಲಿವೆ.

ಇನ್ನು ಟೊಯೋಟಾ ಹೈ ರೈಡರ್‌ನಂತೆ, ಗ್ರ್ಯಾಂಡ್ ವಿಟಾರಾ ಕಾರು ಮೈಲ್ಡ್-ಹೈಬ್ರಿಡ್ ಪವರ್‌ಟ್ರೇನ್ ಅನ್ನು ಹೊಂದಿದೆ. ಈ ಕಾರು 1462cc K15 ಎಂಜಿನ್ ಹೊಂದಿದ್ದು 6,000 RPM ನಲ್ಲಿ ಸುಮಾರು 103 bhp ಪವರ್ ಮತ್ತು 4400 RPM ನಲ್ಲಿ 137 Nm ಟಾರ್ಕ್ ಉತ್ಪಾದಿಸುತ್ತದೆ.

ಅಲ್ಲದೆ ಈ ಕಾರಿನಲ್ಲಿ USB ಪೋರ್ಟ್, 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಸಪೋರ್ಟ್ ಒದಗಿಸಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಮುರುಡೇಶ್ವರ

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ

ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್‌ ಚಂಡಮಾರುತದ ಪರಿಣಾಮ

ಅಂಕಣ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist