ಸೋಮವಾರ, ಮೇ 20, 2024
ಈ ಆಟಗಾರ ಕಣಕ್ಕಿಳಿದಾಗಿನಿಂದ RCB ಒಂದೇ ಒಂದು ಪಂದ್ಯವನ್ನು ಸೋತಿಲ್ಲ!-ಪಾಣೆಮಂಗಳೂರು: ಬೈಕ್ ಮತ್ತು ರಿಕ್ಷಾ ಅಪಘಾತ; ರಿಕ್ಷಾದಲ್ಲಿದ್ದ ಪ್ರಯಾಣಿಕ ಸಾವು-ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ ಘೋಷಣೆ..!-ಪಡೀಲ್: ರಸ್ತೆ ಬದಿ ಬೈಕ್ ನಿಲ್ಲಿಸಿ ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ; ಕೇಬಲ್ ಟೆಕ್ನಿಶಿಯನ್ ಸಾವು.!-ಪೋರ್ಷೆ ಕಾರು ಬೈಕ್‌ಗೆ ಡಿಕ್ಕಿ ಹೊಡೆದು 2 ಮಂದಿ ಸಾವು: ಅಪ್ರಾಪ್ತ ಚಾಲಕನಿಗೆ ಅಪಘಾತದ ಕುರಿತು ಪ್ರಬಂಧ ಬರೆಯಲು ಕೋರ್ಟ್‌ನಿಂದ ಸೂಚನೆ-ಲೈಂಗಿಕ ದೌರ್ಜನ್ಯ ಪ್ರಕರಣ; ಹೆಚ್​ಡಿ ರೇವಣ್ಣಗೆ ಜಾಮೀನು ಮಂಜೂರು..!-ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ; ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!-ನಾನು ರೇವ್ ಪಾರ್ಟಿಗೆ ಹೋಗಿಲ್ಲ; ನಟಿ ವಿಡಿಯೋ ಸಂದೇಶ : ಐವರ ಬಂಧನ.!-ವಾರಗಳ ಹಿಂದೆ ಅಪಾರ್ಟ್ಮೆಂಟ್ ನ ಮೇಲ್ಛಾವಣಿಯಿಂದ ಬೀಳುತ್ತಿದ್ದ ಮಗುವಿನ ರಕ್ಷಣೆ ಬಳಿಕ ತಾಯಿ ಶವವಾಗಿ ಪತ್ತೆ..!-ಬೆಂಗಳೂರು: ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರ ದಾಳಿ ; ಹಲವು ತೆಲುಗು ನಟ ನಟಿಯರು ಮತ್ತು ಮಾಡೆಲ್ ಗಳು ಭಾಗಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಅಕ್ರಮ ಸಂಬಂಧ ಶಂಕೆ, ಪತ್ನಿಯನ್ನ ಕೊಂದು ಅತ್ತೆಗೆ ಕರೆ ಮಾಡಿದ

Twitter
Facebook
LinkedIn
WhatsApp
ಅಕ್ರಮ ಸಂಬಂಧ ಶಂಕೆ, ಪತ್ನಿಯನ್ನ ಕೊಂದು ಅತ್ತೆಗೆ ಕರೆ ಮಾಡಿದ

ಬೆಂಗಳೂರು, ಜು.27: ಅಕ್ರಮ ಸಂಬಂಧ ಶಂಕೆ ಹಿನ್ನಲೆ ಪತಿಯೇ ಪತ್ನಿಯನ್ನ ಬರ್ಬರವಾಗಿ ಹತ್ಯೆಗೈದು ಅತ್ತೆಗೆ ಕರೆ ಮಾಡಿದ ಘಟನೆ ಮೂಡಲಪಾಳ್ಯ(Mudalapalya)ದ ಶಿವಾನಂದನಗರದಲ್ಲಿ ನಡೆದಿದೆ. ಗೀತಾ (33) ಕೊಲೆಯಾದ ಮಹಿಳೆ. ಆರೋಪಿ ಪತಿ ಶಂಕರ್​ ಹಾಗೂ ಮೃತ ಪತ್ನಿ ಗೀತಾ 13 ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳ ಕೂಡ ಇದ್ದಾರೆ. ಇನ್ನು ನಿನ್ನೆ(ಜು.26) ರಾತ್ರಿ ಮನೆಯಲ್ಲಿ ಪತ್ನಿಯನ್ನು ಕೊಲೆ ಮಾಡಿರುವ ಶಂಕರ್. ಬಳಿಕ ಗೀತಾ ತಾಯಿಗೆ ಕರೆ ಮಾಡಿ, ನಿಮ್ಮ ಮಗಳನ್ನ ಕೊಲೆ ಮಾಡಿರುವುದಾಗಿ ಹೇಳಿದ್ದ.

ವಿಚಾರ ತಿಳಿದು ಓಡೋಡಿ ಬಂದ ಗೀತಾ ತಾಯಿ

ಇನ್ನು ಹೊಸೂರಿನ ಮನೆಯಲ್ಲಿದ್ದ ಗೀತಾ ತಾಯಿ ವಿಚಾರ ತಿಳಿಯುತ್ತಿದ್ದಂತೆ ಮನೆಗೆ ಓಡೋಡಿ ಬಂದಿದ್ದಾರೆ. ಮನೆ ಬಾಗಿಲು ತಗೆದು ನೋಡಿದಾಗ ಮಗಳ ಶವ ಪತ್ತೆಯಾಗಿದೆ. ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದ ಪತ್ನಿಯನ್ನ ಹತ್ಯೆಗೈದು, ಸೋಫಾ ಸೆಟ್ ಮೇಲೆ ಶವವನ್ನ ತಂದಿಟ್ಟಿದ್ದಾನೆ. ಇದೀಗ ಕೊಲೆ ಆರೋಪಿ ಶಂಕರ್​ನನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೌಢ್ಯಕ್ಕೆ 1 ತಿಂಗಳ ಕೂಸು ಬಲಿ: ಕುಟುಂಬಸ್ಥರ ಮನವೊಲಿಸಿ ಬಾಣಂತಿಯನ್ನು ಮನೆಗೆ ಸೇರಿಸಿದ ಆರೋಗ್ಯ ಇಲಾಖೆ

ತುಮಕೂರು, ಜುಲೈ 27: ಜಗತ್ತು ಎಷ್ಟೇ ಮುಂದುವರೆಯುತ್ತಿದ್ದರೂ ಮೂಢನಂಬಿಕೆ ಮಾತ್ರ ಇನ್ನೂ ಜೀವಂತವಿದೆ ಎನ್ನುವುದಕ್ಕೆ ತುಮಕೂರು ಜಿಲ್ಲೆಯಲ್ಲಿ ನಡೆದ ಘಟನೆಯೇ ಸಾಕ್ಷಿ. ಗೊಲ್ಲ ಸಮುದಾಯದ ಸೂತಕ ಆಚರಣೆಗೆ 1 ತಿಂಗಳ ಮಗು ಬಲಿಯಾಗಿದೆ. ಇಂತಹ ಹೃದಯ ವಿದ್ರಾವಕ ಘಟನೆ ನಡೆದರೂ ಕುಟುಂಬಸ್ಥರು ಬಾಣಂತಿಯನ್ನು ಮನೆಯೊಳಗೆ ಬಿಟ್ಟಿಕೊಂಡಿಲ್ಲ. ಕರುಳ ಕುಡಿ ಕಳೆದುಕೊಂಡಿದ್ದರೂ ದೇವರಿಗೆ ಸೂತಕ ಎಂಬ ಕಾರಣಕ್ಕೆ ಬಾಣಂತಿಯನ್ನು ಮನೆಯೊಳಗೆ ಕರೆಸಿಕೊಂಡಿರಲಿಲ್ಲ. ಸದ್ಯ ಈಗ ಮನವೊಲಿಸುವಲ್ಲಿ ಆರೋಗ್ಯ ಇಲಾಖೆ ಯಶಸ್ವಿಯಾಗಿದ್ದು ಬಾಣಂತಿಯನ್ನು ಮನೆಯೊಳಗೆ ಸೇರಿಸಿಕೊಳ್ಳಲಾಗಿದೆ.

ತುಮಕೂರು ತಾಲೂಕಿನ ಮಲ್ಲೇನಹಳ್ಳಿಯ ಗೊಲ್ಲರಹಟ್ಟಿಯಲ್ಲಿ ಸಿದ್ದೇಶ್ ಕುಟುಂಬಸ್ಥರು ಶಾಸ್ತ್ರೋಕ್ತವಾಗಿ ವಸಂತಾಳನ್ನು ಬರಮಾಡಿಕೊಂಡಿದ್ದಾರೆ. ನಿನ್ನೆ ಆರೋಗ್ಯ ಅಧಿಕಾರಿಗಳು ಸಿದ್ದೇಶ್ ಕುಟುಂಬಸ್ಥರ ಮನವೊಲಿಸಿದ್ದರು. ಅದರಂತೆ ಈಗ ಶಾಸ್ತ್ರೋಕ್ತವಾಗಿ ಬಾಣಂತಿಯನ್ನು ಮನೆಗೆ ಸೇರಿಸಿಕೊಳ್ಳಲಾಗಿದೆ.

ಕಳೆದ ಜೂನ್ 19 ರಂದು ಹೆಣ್ಣಾಗಿದ್ದೆ ತಪ್ಪಾ ಶಿರ್ಷಿಕೆಯಡಿ ಟಿವಿ9 ಗೊಲ್ಲರಹಟ್ಟಿಯ ಮೂಡನಂಬಿಕೆ ಆಚರಣೆ ಬಗ್ಗೆ ವರದಿ ಮಾಡಿತ್ತು. ಆರೋಗ್ಯ ಇಲಾಖೆ ಅಧಿಕಾರಿಗಳು ತಾಲೂಕು ಆಡಳಿತ ಸೇರಿದಂತೆ ಸಂಬಂಧ ಪಟ್ಟ ಅಧಿಕಾರಿಗಳು ಭೇಟಿ ನೀಡಿ ಮನವೊಲಿಸಿದರೂ ಕೂಡ ತಾಯಿ ಮಗು ಮಾತ್ರ ಮನೆಗೆ ಹೋಗಿರಲಿಲ್ಲ. ತುಮಕೂರು ತಾಲೂಕಿನ ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಮೂಢನಂಬಿಕೆ ಆಚರಣೆಯಿಂದ ತಾಯಿ‌ಮಗುವನ್ನ ಊರಿಂದ ಆಚೆ ಬಿಡಾರ ನಿರ್ಮಿಸಿ ಇರಿಸಲಾಗಿತ್ತು. ಆದ್ರೆ ಶೀತ ಹೆಚ್ಚಾದ ಕಾರಣ ಮಗು ಸಾವನ್ನಪ್ಪಿದೆ. ಮಗು ಮೃತಪಟ್ಟರೂ ಕುಟುಂಬಸ್ಥರು ಬಾಣಂತಿ ಮಹಿಳೆಯನ್ನು ಮನೆಗೆ ಸೇರಿಸಿಕೊಂಡಿಲ್ಲ. ಸೂತಕ ಕಳೆದ ನಂತರ ಬರುವಂತೆ ಸೂಚಿಸಿದ್ದಾರೆ. ಹೀಗಾಗಿ ನಿನ್ನೆ ಮತ್ತೆ ಆರೋಗ್ಯ ಇಲಾಖೆ ಸಿಬ್ಬಂದಿ ಸಿದ್ದೇಶ್ ಕುಟುಂಬಸ್ಥರ ಬಳಿ ತೆರಳಿ ಮನವೊಲಿಸುವ ಯತ್ನ ಮಾಡಿದ್ದು ಇಂದು ಶಾಸ್ತ್ರೋಕ್ತವಾಗಿ ವಸಂತಾಳನ್ನ ಮನೆಯೊಳಗೆ ಬಿಟ್ಟುಕೊಂಡಿದ್ದಾರೆ.

ಕಳೆದ‌ ಜೂನ್ 22 ರಂದು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಸಿದ್ದೆಶ್ ವಸಂತ ದಂಪತಿಗೆ ಅವಳಿ ಮಕ್ಕಳಾಗಿದ್ದವು, ಆಸ್ಪತ್ರೆಯಲ್ಲಿಯೆ ಒಂದು ನವಜಾತ ಗಂಡು ಮಗು ಸಾವನ್ನಪ್ಪಿದ್ದರೇ, ಉಳಿದ ಹೆಣ್ಣು ಮಗು 23 ದಿನಗಳ ಕಾಲ ಚಿಕಿತ್ಸೆ ಪಡೆದು ಗ್ರಾಮಕ್ಕೆ ವಾಪಸ್ ಆಗಿತ್ತು. ಕಳೆದ ಜುಲೈ 14 ರಂದು ಗ್ರಾಮಕ್ಕೆ ಹೋಗಿದ್ದರು, ಆದರೆ ಗ್ರಾಮದಲ್ಲಿ ತಮ್ಮ ದೇವರು ಜುಂಜಪ್ಪ ಎತ್ತಪ್ಪರಿಗೆ ಸೂತಕ ಆಗಲ್ಲ ಅಂತಾ ಎರಡು ತಿಂಗಳ ಕಾಲ ಊರಾಚೆ ಬಿಡಾರದಲ್ಲಿ ಇರಿಸಲಾಗಿತ್ತು. ಮಳೆ ಗಾಳಿಯಿಂದ ಮಗುವಿಗೆ ಶೀತ ಹೆಚ್ಚಾಗಿ ಕಳೆದ ಗುರುವಾರ ಮತ್ತೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆ ಮಗು ಕೂಡ ಸಾವನ್ನಪ್ಪಿದ್ದು, ಗೊಲ್ಲ ಸಮುದಾಯದ ಮೌಢ್ಯಕ್ಕೆ ಮಗು ಬಲಿಯಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ