ನವದೆಹಲಿ(ಡಿ.06): ಭಾರತ ಹಿರಿಯ ತಂಡದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಚೊಚ್ಚಲ ಆವೃತ್ತಿಯ ಅಂಡರ್-19 ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಈಗಾಗಲೇ ಹಿರಿಯರ ತಂಡದಲ್ಲಿ ಆಡಿರುವ ಅನುಭವವಿರುವ ವಿಕೆಟ್ ಕೀಪರ್ ರೀಚಾ ಘೋಷ್ ಸಹ ವಿಶ್ವಕಪ್ ತಂಡದಲ್ಲಿದ್ದಾರೆ. ಈ ಕುರಿತಂತೆ ನೀತಾ ಡೇವಿಡ್ ನೇತೃತ್ವ ಭಾರತ ಅಂಡರ್ 19 ಮಹಿಳಾ ತಂಡದ ಆಯ್ಕೆ ಸಮಿತಿಯು, ಐಸಿಸಿ ಜತೆ ಚರ್ಚಿಸಿಯೇ ತಂಡವನ್ನು ಅಂತಿಮಗೊಳಿಸಿದ್ದು, ಈಗಾಗಲೇ ಭಾರತ ಹಿರಿಯರ ಮಹಿಳಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿರುವ ಶಫಾಲಿ ವರ್ಮಾ ಹಾಗೂ ರಿಚಾ ಘೋಷ್ ಅವರು ಅಂಡರ್ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಐಸಿಸಿಯಿಂದ ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದಾರೆ.
18 ವರ್ಷದ ಶಫಾಲಿ ವರ್ಮಾ, ಈಗಾಗಲೇ ಭಾರತ ಹಿರಿಯರ ಮಹಿಳಾ ತಂಡದ ಪರ 2 ಟೆಸ್ಟ್, 21 ಏಕದಿನ ಹಾಗೂ 46 ಟಿ20 ಸೇರಿದಂತೆ ಒಟ್ಟು 69 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಇನ್ನು ರಿಚಾ ಘೋಷ್ 17 ಏಕದಿನ, 25 ಟಿ20 ಪಂದ್ಯಗಳು ಸೇರಿದಂತೆ 42 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ರಿಚಾ ಘೋಷ್ ವಯಸ್ಸು 19 ವರ್ಷಗಳಾಗಿದ್ದರೂ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇಬ್ಬರ ವಯಸ್ಸು 19 ವರ್ಷದೊಳಗೆ ಇರುವುದರಿಂದಾಗಿ ಈ ಇಬ್ಬರು ಆಟಗಾರ್ತಿಯರು ಅಂಡರ್ 19 ಮಹಿಳಾ ವಿಶ್ವಕಪ್ ಆಡಲು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ಐಸಿಸಿ ಪ್ರಕಾರ, ಸೆಪ್ಟೆಂಬರ್ 01, 2003ರೊಳಗೆ ಜನಿಸಿದವರಿಗೆ ಈ ಬಾರಿಯ ಅಂಡರ್ 19 ಮಹಿಳಾ ವಿಶ್ವಕಪ್ ಆಡಲು ಅವಕಾಶವಿಲ್ಲವೆಂದು ಐಸಿಸಿ ಸ್ಪಷ್ಟವಾಗಿ ತಿಳಿಸಿದೆ. ಆದರೆ ರಿಚಾ ಘೋಷ್, ಸೆಪ್ಟೆಂಬರ್ 28, 2003ರಲ್ಲಿ ಜನಿಸಿದ್ದರಿಂದ ಕಿರಿಯರ ವಿಶ್ವಕಪ್ ಆಡಲು ಅವಕಾಶಗಿಟ್ಟಿಸಿಕೊಂಡಿದ್ದಾರೆ. ಇನ್ನುಳಿದಂತೆ ಶಫಾಲಿ ವರ್ಮಾ, ಜನವರಿ 28, 2004ರಲ್ಲಿ ಜನಿಸಿದ್ದರಿಂದ ಭಾರತ ತಂಡದೊಳಗೆ ಸ್ಥಾನ ಪಡೆದುಕೊಂಡಿದ್ದಾರೆ.
ಮುಂಬರುವ ಜನವರಿ 14ರಿಂದ 29ರ ವರೆಗೂ ದಕ್ಷಿಣ ಆಫ್ರಿಕಾದಲ್ಲಿ ಅಂಡರ್ 19 ಮಹಿಳಾ ವಿಶ್ವಕಪ್ ನಡೆಯಲಿದೆ. 16 ತಂಡಗಳು ಪಾಲ್ಗೊಳ್ಳಲಿದ್ದು ‘ಡಿ’ ಗುಂಪಿನಲ್ಲಿರುವ ಭಾರತಕ್ಕೆ ದಕ್ಷಿಣ ಆಫ್ರಿಕಾ, ಯುಎಇ, ಸ್ಕಾಟ್ಲೆಂಡ್ ಎದುರಾಗಲಿವೆ. ಗುಂಪು ಹಂತದ ಬಳಿಕ ಸೂಪರ್ ಸಿಕ್ಸರ್ ಹಂತ ನಡೆಯಲಿದೆ.
ಅಂಡರ್ 19 ಮಹಿಳಾ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಹೀಗಿದೆ ನೋಡಿ
ಶಫಾಲಿ ವರ್ಮಾ(ನಾಯಕಿ), ಶ್ವೇತಾ ಶೆರಾವತ್(ಉಪನಾಯಕಿ), ರಿಚಾ ಘೋಷ್(ವಿಕೆಟ್ ಕೀಪರ್), ಜಿ. ತ್ರಿಶಾ, ಸೌಮ್ಯ ತಿವಾರಿ, ಸೋನಿಯಾ ಮೆಂದಿಯಾ, ಹುರ್ಲೆ ಗಾಲಾ, ರಿಷಿತಾ ಬಸು(ವಿಕೆಟ್ ಕೀಪರ್), ಸೋನಂ ಯಾದವ್, ಮನ್ನತ್ ಕಶ್ಯಪ್, ಅರ್ಚನಾ ದೇವಿ, ಪ್ರಸವಿ ಚೋಪ್ರಾ, ತಿಥಾಸ್, ಫಲಕ್ ನಾಜ್, ಶಬ್ನನಂ ಎಂ ಡಿ.
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist