ಭಾನುವಾರ, ಮೇ 19, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಅಂಡರ್ ವೇರ್ ಇಲಾಸ್ಟಿಕ್, ಬೆಡ್ ಸ್ಪ್ರೆಡ್ ಬಳಸಿ ಮೊಬೈಲ್ ಫೋನ್ ಕಳ್ಳಸಾಗಣೆ ಮಾಡಿಕೊಂಡ ಕೈದಿಗಳು!

Twitter
Facebook
LinkedIn
WhatsApp
ಅಂಡರ್ ವೇರ್ ಇಲಾಸ್ಟಿಕ್, ಬೆಡ್ ಸ್ಪ್ರೆಡ್ ಬಳಸಿ ಮೊಬೈಲ್ ಫೋನ್ ಕಳ್ಳಸಾಗಣೆ ಮಾಡಿಕೊಂಡ ಕೈದಿಗಳು!

ಬೆಂಗಳೂರು: ಈ ಕೈದಿಗಳು ಕಳ್ಳಸಾಗಣೆ ಮಾಡಲು ಮಾಡುವ ಐಡಿಯಾಗಳು, ಹೂಡುವ ಹೊಸ ಆಲೋಚನೆಗಳು ಖಂಡಿತ ಬೆಚ್ಚಿಬೀಳಿಸದೆ ಇರದು. ಡ್ರಗ್ಸ್, ಮೊಬೈಲ್ ಫೋನ್ ಮತ್ತು ಇತರ ವಸ್ತುಗಳನ್ನು ಕಳ್ಳಸಾಗಣೆ ಮಾಡಲು ಹೊಸ ಹೊಸ ಆಲೋಚನೆಗಳನ್ನು ಹುಡುಕುತ್ತಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿರುವ ಜಿಲ್ಲಾ ಕಾರಾಗೃಹದ ಕೈದಿಗಳು ಕವೆಗೋಲು ಅಥವಾ ಕವಣೆಯಂತ್ರ ಮಾಡಲು ಖಾಲಿ ಟೂತ್‌ಪೇಸ್ಟ್ ಟ್ಯೂಬ್‌ಗಳು ಮತ್ತು ತಮ್ಮ ಒಳ ಉಡುಪುಗಳ ಇಲ್ಯಾಸ್ಟಿಕ್ ಸ್ಟ್ರಾಪ್ ಗಳನ್ನು ಬಳಸಿರುವ ಘಟನೆ ನಡೆದಿದೆ.

ಬೆಡ್‌ಸ್ಪ್ರೆಡ್‌ಗಳನ್ನು ಜೋಡಿಸಿ ಅವರು ಹಗ್ಗ ತಯಾರಿಸಿದ್ದಾರೆ. ಸ್ಲಿಂಗ್‌ಶಾಟ್ ನ್ನು ಬಳಸಿ, ಅವರು ಹಾಸಿಗೆಯ ಹೊದಿಕೆಯಿಂದ ಮಾಡಿದ ಹಗ್ಗದ ಒಂದು ತುದಿಯನ್ನು ಜೈಲಿನ ಆವರಣದ ಗೋಡೆಯ ಹೊರಗೆ ಎಸೆದಿದ್ದಾರೆ.

ಗೋಡೆಯ ಹೊರಗೆ ಕಾಯುತ್ತಿದ್ದ ಅವರ ಸಹಚರರು ಹಗ್ಗವನ್ನು ಎತ್ತಿಕೊಂಡು 12 ಮೊಬೈಲ್ ಫೋನ್‌ಗಳನ್ನು ಅದಕ್ಕೆ ಕಟ್ಟಿದ್ದಾರೆ. ನಂತರ ಕೈದಿಗಳು ಹಗ್ಗವನ್ನು ಹಿಂದಕ್ಕೆ ಎಳೆದುಕೊಂಡಿದ್ದಾರೆ. ಈ ಸೃಜನಾತ್ಮಕ ಐಡಿಯಾ ತಕ್ಷಣವೇ ಜೈಲು ಸಿಬ್ಬಂದಿಯ ಗಮನಕ್ಕೆ ಬಂದಿದ್ದು, ಮೂವರು ಕೈದಿಗಳಾದ ವಿ ಅಪ್ಪು ನಾಯ್ಕ, ಎ ನವೀದ್ ಖಾನ್ ಮತ್ತು ಇ ಗಿರೀಶ್ ವಿರುದ್ಧ ದೂರು ದಾಖಲಿಸಲಾಗಿದೆ.

ಎಲ್ಲಿ ನಡೆದಿದ್ದು?: ರಾಮನಗರ ಸಮೀಪದ ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಈ ಘಟನೆ ನಡೆದಿದೆ. ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವೆಯ ಅಧೀಕ್ಷಕ ಅಂಬರೀಷ್ ಎಸ್ ಪೂಜಾರಿ ಮೊನ್ನೆ ಗುರುವಾರ ದೂರು ದಾಖಲಿಸಿದ್ದಾರೆ. ಜೈಲು ಸಿಬ್ಬಂದಿ 12 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಕೈದಿಗಳು ಮಧ್ಯರಾತ್ರಿ 1.45 ರಿಂದ 2 ರ ನಡುವೆ ತಾವು ಇರುವ ಕಾರಾಗೃಹಕ್ಕೆ ಫೋನ್‌ಗಳನ್ನು ಕಳ್ಳಸಾಗಣೆ ಮಾಡಿದ್ದಾರೆ. ಜೈಲಿನ ಸಿಬ್ಬಂದಿಗಳಾದ ದೀಪಕ್, ಪುಷ್ಪಾ ಮತ್ತು ಶ್ವೇತಾ ಅವರು ಸಹಾಯಕ ಸಿಬ್ಬಂದಿ ಪ್ರವೀಣ್ ಕುಮಾರ್ ಅವರಿಗೆ ವಿಷಯ ತಿಳಿಸಿ ಅವರು ಅಧೀಕ್ಷಕರಿಗೆ ಸುದ್ದಿ ಮುಟ್ಟಿಸಿದರು.

ಸಿಬ್ಬಂದಿ ಜೈಲಿನ ಗೋಡೆಯ ಹಿಂಬದಿ ಮೂಲಕ ಹೋಗಿ ನೋಡಿದಾಗ ಜನರು ಅಲ್ಲಿಂದ ಓಡಿಹೋಗುವುದನ್ನು ನೋಡಿದರು. ಕಾರಾಗೃಹದಲ್ಲಿ ಹುಡುಕಾಟ ನಡೆಸಲಾಯಿತು. 12 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು ಅವುಗಳಲ್ಲಿ ಹೆಚ್ಚಿನವು ಬೇಸಿಕ್ ಹ್ಯಾಂಡ್ ಸೆಟ್ ಗಳಾಗಿವೆ. ಮೂವರ ವಿರುದ್ಧ ಕಾರಾಗೃಹ ಕಾಯ್ದೆ 1894ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್? Twitter Facebook LinkedIn WhatsApp ಮಂಗಳೂರು: ಕೆಪಿಸಿಸಿಯ ಆಂತರಿಕ ಸರ್ವೆಯ ವರದಿ ಬಹಿರಂಗವಾಗಿದ್ದು,

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಅಂಕಣ