ಶುಕ್ರವಾರ, ಮಾರ್ಚ್ 29, 2024
ಶಿವಸೇನೆ ಗೆ ಸೇರ್ಪಡೆಯಾದ ನಟ ಗೋವಿಂದ ; ಮುಂಬೈ ಕ್ಷೇತ್ರದಿಂದ ಸ್ಪರ್ಧೆ.?-ನಟಿ ಊರ್ಮಿಳಾ ಸಾಫ್ಟ್‌ ಪೋರ್ನ್‌ ಸ್ಟಾರ್ ಎಂಬ ಹೇಳಿಕೆ ಸಮರ್ಥಿಸಿಕೊಂಡ ಕಂಗನಾ ರಣಾವತ್..!-ಜಗತ್ತಿನ ಅತಿದೊಡ್ಡ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಅನಾ ಜುಲಿಯಾ ಹಾವು ಸಾವು.!-ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ; ಒಟ್ಟು ಆಸ್ತಿ ಮೌಲ್ಯ ಹೀಗಿದೆ.!-ಸ್ನೇಹಿತರ ಹುಚ್ಚಾಟಕ್ಕೆ ಕರುಳು ಬ್ಲ್ಯಾಸ್ಟ್ ಆಗಿ ಯುವಕ ಸಾವು..!-ಅರವಿಂದ್ ಕೇಜ್ರಿವಾಲ್ ಬಂಧನದ ಬಗ್ಗೆ ಮಹತ್ವದ ತೀರ್ಪು ನೀಡಿದ ದೆಹಲಿ ಹೈಕೋರ್ಟ್.!-ಬಿಜೆಪಿ - ಜೆಡಿಎಸ್ ನ 28 ಕ್ಷೇತ್ರಗಳ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ.!-ಸುಮಲತಾ ಅವರು ನನಗೆ ಶತ್ರುವಲ್ಲ; ಸಮಯ ಬಂದಾಗ ಮಾತನಾಡುತ್ತೇನೆ: ಹೆಚ್ ಡಿ ಕುಮಾರಸ್ವಾಮಿ-ಕೇರಳ: 10 ಕೋಟಿ ಲಾಟರಿ ಗೆದ್ದ ಆಟೋ ಚಾಲಕ ರಾತ್ರೋ ರಾತ್ರಿ ಕೋಟ್ಯಾಧಿಪತಿ..!-ಮಂಗಳೂರು: ಬೈಕಂಪಾಡಿ ಸೀ ಫುಡ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ; ಸುಟ್ಟು ಭಸ್ಮವಾದ ಕಾರ್ಖಾನೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ʻಯುವ’ ಚಿತ್ರಕ್ಕೆ ಸಪ್ತಮಿ ಗೌಡ ಸೆಲೆಕ್ಟ್ 

Twitter
Facebook
LinkedIn
WhatsApp
19803fdfa6c53d4bf6b9201c129 3

ಚಂದನವನದ ಚೆಂದದ ನಟಿ ಸಪ್ತಮಿ ಗೌಡ (Saptami Gowda) ಈಗಾಗಲೇ `ಕಾಂತಾರ’ (Kantara Film) ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಮಿಂಚ್ತಿದ್ದಾರೆ. ಈ ಬೆನ್ನಲ್ಲೇ ದೊಡ್ಮನೆ ಕುಡಿ `ಯುವ’ (Yuva Film)  ರಾಜ್‌ಕುಮಾರ್‌ಗೆ ನಾಯಕಿಯಾಗಿ ಸೆಲೆಕ್ಟ್ ಆಗಿದ್ದು ಹೇಗೆ? ಎಂಬುದರ ಬಗ್ಗೆ ನಟಿ ಸಪ್ತಮಿ ಇದೀಗ ಪಬ್ಲಿಕ್ ಟಿವಿ ಡಿಜಿಟಲ್ ಮಾಹಿತಿ ನೀಡಿದ್ದಾರೆ.

May be an image of one or more people, people standing and outdoors

`ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ರು. ಡಾಲಿಗೆ ನಾಯಕಿಯಾಗಿ ಮೊದಲ ಸಿನಿಮಾದಲ್ಲೇ ಸೈ ಎನಿಸಿಕೊಂಡರು. ಬಳಿಕ `ಕಾಂತಾರ’ (Kantara) ಚಿತ್ರದಲ್ಲಿ ರಿಷಬ್ ಶೆಟ್ಟಿಗೆ ಜೋಡಿಯಾಗುವ ಮೂಲಕ ಸಿನಿಪ್ರೇಕ್ಷಕರ ಗಮನ ಸೆಳೆದರು.

No photo description available.

ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ `ದಿ ವಾಕ್ಸಿನ್ ವಾರ್’ ಚಿತ್ರದಲ್ಲಿ ಕೂಡ ಸಪ್ತಮಿ (Saptami Gowda) ಮೇಜರ್ ರೋಲ್ ಪ್ಲೈ ಮಾಡ್ತಿದ್ದಾರೆ. ಈ ಮೂಲಕ ಬಿಟೌನ್ ಅಂಗಳಕ್ಕೂ ನಟಿ ಲಗ್ಗೆ ಇಟ್ಟಿದ್ದಾರೆ. ಈಗ ಹೊಂಬಾಳೆ ಸಂಸ್ಥೆ ನಿರ್ಮಾಣದ `ಯುವ’ ಚಿತ್ರಕ್ಕೆ ಕಾಂತಾರ ನಟಿ ಆಯ್ಕೆಯಾಗಿದ್ದು ಹೇಗೆ? ಎಂಬುದನ್ನ ರಿವೀಲ್ ಮಾಡಿದ್ದಾರೆ.

Glamours and cute stills | Sapthami Gowda beautiful and glamours photos  Photos: HD Images, Pictures, Stills, First Look Posters of Glamours and  cute stills | Sapthami Gowda beautiful and glamours photos Movie -

ಕಳೆದ ಶನಿವಾರ (ಫೆ.4)ರಂದು ಸಂಜೆ ಕೆಸಿಸಿ ಕಾರ್ಯಕ್ರಮಕ್ಕೆ ತನ್ನ ತಾಯಿಯೊಂದಿಗೆ ನಟಿ ಸಪ್ತಮಿ ತೆರಳುತ್ತಿದ್ದರು. ಈ ವೇಳೆ ಹೊಂಬಾಳೆ ಸಂಸ್ಥೆ ಟೀಂ ಕಡೆಯಿಂದ ನಟಿಗೆ ಕಾಲ್ ಬಂದಿದೆ. ಆಫೀಸ್‌ಗೆ ಬನ್ನಿ ಎಂದಷ್ಟೇ ಹೇಳಲಾಗಿದೆ. ಬಳಿದ ಚಿತ್ರತಂಡಕ್ಕೆ ಸಪ್ತಮಿ ಭೇಟಿ ನೀಡಿದ್ದಾರೆ. ಬಳಿಕ ಯುವ ರಾಜ್‌ಕುಮಾರ್ (Yuva Rajkumar) ಅವರ ಪಕ್ಕ ನಿಲ್ಲಿಸಿ ಫೋಟೋ ಕ್ಲಿಕ್ಕಿಸಲಾಗಿದೆ. ನಂತರ `ಯುವ’ ಚಿತ್ರಕ್ಕೆ ನೀವೇ ಹೀರೋಯಿನ್ ಎಂದು ಸರ್ಪ್ರೈಸ್ ನೀಡಿದ್ದಾರೆ. ಈ ಚಿತ್ರಕ್ಕೆ ತಾನೇ ನಾಯಕಿ ಎಂದು‌ ಒಂದು ಸಣ್ಣ ಸುಳಿವು ಇಲ್ಲದೇ ಆಫೀಸ್‌ಗೆ ಬಂದ ಸಪ್ತಮಿಗೆ ಇದು ನಿಜಕ್ಕೂ ಗುಡ್ ನ್ಯೂಸ್ ಆಗಿತ್ತು ಎಂದು ಖುಷಿಯಿಂದ ಮಾತನಾಡಿದ್ದಾರೆ. ಯುವ ರಾಜ್‌ಕುಮಾರ್‌ಗೆ ಜೋಡಿಯಾಗಿರೋದು, ಕಾಂತಾರ ಬಳಿಕ ಮತ್ತೆ `ಹೊಂಬಾಳೆ ಸಂಸ್ಥೆ’ಯ ಜೊತೆ ಕೈಜೋಡಿಸಿರುವುದು ಖುಷಿಯಿದೆ ಎಂದು ಸಪ್ತಮಿ ಪಬ್ಲಿಕ್ ಟಿವಿ ಡಿಜಿಟಲ್‌ಗೆ ಮಾಹಿತಿ ನೀಡಿದ್ದಾರೆ.

Actress Sapthami Gowda in this images of look beautiful and spicy and  impresses viewers | Actress Sapthami Gowda In This Images Of Look Beautiful  And Spicy And Impresses Viewers - Sapthamigowda, Actresssapthami,

ಕಳೆದವಾರವಷ್ಟೇ `ಯುವ’ ಚಿತ್ರದ ಅಫಿಷಿಯಲ್ ಟೀಸರ್ ಮತ್ತು ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ಫ್ಯಾನ್ಸ್‌ಗೆ ಹೊಂಬಾಳೆ ಸಂಸ್ಥೆ (Hombale Films) ಗುಡ್ ನ್ಯೂಸ್ ನೀಡಿದ್ದರು. ಈಗ ನಾಯಕಿ ಬಗ್ಗೆ ಬಿಗ್ ಅಪ್‌ಡೇಟ್ ನೀಡಿದ್ದಾರೆ. ಸದ್ಯದಲ್ಲಿಯೇ `ಯುವ’ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ. ಈ ವರ್ಷ ಡಿಸೆಂಬರ್ 22ರಂದು ಸಿನಿಮಾ ತೆರೆ ಅಪ್ಪಳಿಸಲಿದೆ.

Sapthami Gowda: ಸುರಸುಂದರಿಯಂತೆ ಕಾಣಿಸಿದ ಸಪ್ತಮಿಗೌಡ, ಕಾಂತಾರ ನಟಿ ಸೌಂದರ್ಯ ಲೀಲೆ  ನೋಡಿ ಮೆಚ್ಚಿಕೊಂಡ ಫ್ಯಾನ್ಸ್

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ