ʻಇನಾಮ್ದಾರ್ʼ ಚಿತ್ರದ ಐಟಂ ಹಾಡಿಗೆ ಕುಣಿದ ಎಸ್ತರ್ ನರೋನಾ..
ಬಹು ನಿರೀಕ್ಷೆಯ ಇನಾಮ್ದಾರ್ ಸಿನಿಮಾ, ಟೀಸರ್ ಮೂಲಕ ರಾಜ್ಯದಾದ್ಯಂತ ಸದ್ದು ಮಾಡಿದ್ದು, ಇದೀಗ ಕೊಪ್ಪದಲ್ಲಿ ತನ್ನ ಮೊದಲ ಹಾಡು ಬಿಡುಗಡೆ ಮಾಡುವ ಮೂಲಕ ಜನರಲ್ಲಿ ಮತ್ತಷ್ಟು ಕುತೂಹಲವನ್ನು ಕೆರಳಿಸಿದೆ. ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದ ಸಿನಿಮಾ ಇದಾಗಿದ್ದು, ಕುಂತಿ ಅಮ್ಮ ಪ್ರೊಡಕ್ಷನ್ ಮೂಲಕ ನಿರಂಜನ್ ಶೆಟ್ಟಿ ತಲ್ಲೂರು ಬಂಡವಾಳ ಹೂಡಿದ್ದಾರೆ.
ನಟಿ ಎಸ್ತರ್ ನರೋನಾ ಇದೀಗ ʻಇನಾಮ್ದಾರ್ʼ ಚಿತ್ರದ ಐಟಂ ಹಾಡಿನಲ್ಲಿ ಬೋಲ್ಡ್ ಆಗಿಯೇ ಮಿಂಚಿದ್ದಾರೆ. ಸಿಲ್ಕು ಮಿಲ್ಕು ಎಂಬ ಹಾಡಿನಲ್ಲಿ ಮೈ ಚಳಿ ಬಿಟ್ಟು ಹೆಜ್ಜೆ ಹಾಕಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಹಾಡು ಬಿಡುಗಡೆ ಆಗಿದೆ.
ಕೊಪ್ಪದಲ್ಲಿ ಸಿಲ್ಕು ಮಿಲ್ಕು ಹಾಡನ್ನು ಬಿಡುಗಡೆ ಮಾಡುವ ಮೂಲಕ ಕೊಪ್ಪ ಜನತೆಯನ್ನ ಹುಚ್ಚೆಬ್ಬಿಸಿದ ಇನಾಮ್ದಾರ ಚಿತ್ರ ತಂಡ ಮತ್ತಷ್ಟು ಭರವಸೆಯನ್ನು ಮೂಡಿಸುವ ನಿಟ್ಟಿನಲ್ಲಿ ಜನರನ್ನು ಆಕರ್ಷಿಸುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಲಾವಿದರ ದಂಡೆ ಇರುವ ಈ ಸಿನಿಮಾ ಎರಡು ಬಣ್ಣಗಳ ನಡುವಿನ ಘರ್ಷಣೆಯ ಸುತ್ತ ಹೆಣೆದಿರುವ ಕಥೆ ಎಂದು ನಿರ್ದೇಶಕರು ಹೇಳುತ್ತಾರೆ. ಕೊಪ್ಪದಲ್ಲಿ ಸಾವಿರಾರು ಜನರ ಮುಂದೆ ಕೊಪ್ಪದ ಮಕ್ಕಳ ಕೈಯಲ್ಲಿ ಸಿಲ್ಕು ಮಿಲ್ಕು ಸಾಂಗ್ ಅನ್ನು ಬಿಡುಗಡೆ ಮಾಡಿರುವ ಚಿತ್ರತಂಡ ಕೊಪ್ಪದ ಜನತೆಯನ್ನು ಸ್ಮರಿಸಿಕೊಂಡಿದ್ದಾರೆ.
ಖಡಕ್ ಧ್ವನಿಯಲ್ಲಿ ಪ್ರಮೋದ್ ಶೆಟ್ಟಿಯ ಡೈಲಾಗ್ ಕೇಳಿ ಹುಚ್ಚೆದ್ದು ಕುಣಿದ ಕೊಪ್ಪದ ಜನತೆಗೆ ನಿರ್ದೇಶಕ ಸಂದೇಶ ಶೆಟ್ಟಿ ಪ್ರಮೋದ್ ಶೆಟ್ಟಿ ಅವರಿಗೆ ಸ್ಯಾಂಡಲ್ ವುಡ್ ಘಟೋದ್ಗಜ ಎಂದು ಬಿರುದನ್ನು ನೀಡಿದ್ದಾರೆ, ಇದು ಕೊಪ್ಪದ ಜನತೆಯಲ್ಲಿ ಮತ್ತಿಷ್ಟು ಜೋಶ್ ತಂದು ಕೊಟ್ಟಿದೆ. ಇಡೀ ಸಿನಿಮಾ ಟೆಕ್ನಿಕಲ್ ಆಗಲಿ, ಕಥೆಯಾಗಲಿ ಎಲ್ಲವೂ ಕೂಡ ಅದ್ಭುತವಾಗಿ ಮೂಡಿ ಬಂದಿದೆ ಹಾಗೂ ಒಬ್ಬ ಹೊಸ ನಿರ್ಮಾಪಕ, ನಿರ್ದೇಶಕ ಉಳಿಯಬೇಕಾದರೆ ನಿಮ್ಮ ಸಹಕಾರ ಅಗತ್ಯ ಎಂದು ಪ್ರಮೋದ್ ಶೆಟ್ಟಿ ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ನಿರಂಜನ್ ಶೆಟ್ಟಿ ಸಿನಿಮಾ ಉತ್ತಮವಾಗಿ ಮೂಡಿ ಬಂದಿದೆ, ಎರಡು ಜನಾಂಗ ಘರ್ಷಣೆಯನ್ನ ತೆರೆ ಮೇಲೆ ತರಲು ನಿರ್ದೇಶಕರು ಹೊಸತನದ ಪ್ರಯತ್ನವನ್ನ ಮಾಡಿದ್ದಾರೆ, ನಿಮಗೆಲ್ಲರಿಗೂ ಈ ಸಿನಿಮಾ ಇಷ್ಟ ಆಗುತ್ತೆ ನಮ್ಮ ತಂಡವನ್ನ ಬೆಂಬಲಿಸಿ, ನೀವು ನಮಗೆ ಶಕ್ತಿಯಾಗಿ ಎಂದು ತಿಳಿಸಿದರು.
ಸಂಗೀತ ನಿರ್ದೇಶಕ ರಾಕೇಶ್ ಆಚಾರ್ಯ ಮಾತನಾಡಿ ಇದೊಂದು ಸೂಕ್ಷ್ಮವಾದ ಕಥಾಹಂದರ ಬಲು ಅಚ್ಚುಕಟ್ಟಾಗಿ ಈ ಸಿನಿಮಾವನ್ನ ತೆರೆಯ ಮೇಲೆ ತರಲು ನಿರ್ದೇಶಕರು ಪ್ರಯತ್ನಪಟ್ಟಿದ್ದಾರೆ ಈ ಸಿನಿಮಾದಲ್ಲಿ ನಾನು ಮೂರು ಹಾಡುಗಳನ್ನ ಮಾಡಿದ್ದೇನೆ ನಿಮ್ಮೆಲ್ಲರ ಬೆಂಬಲ ಈ ಸಿನಿಮಾದ ಮೇಲೆ ಇರಲಿ ಎಂದು ಕೇಳಿಕೊಂಡರು.
ನಾಯಕ ನಟ ರಂಜನ್ ಛತ್ರಪತಿ, ನಟಿ ಚಿರಶ್ರೀ ಅಂಚನ್ ಹಾಗೂ ಏಸ್ತಾರ್ ನೆರೋನಾ, ರಘು ಪಾಂಡೇಶ್ವರ್, ಕರಣ್ ಕುಂದರ್, ಯಶ್ ಆಚಾರ್ಯ, ಮಹಾಬಲೇಶ್ವರ ಕ್ಯಾದಗಿ, ರಕ್ಷಿತ್ ಶೆಟ್ಟಿ, ಇತರರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಕೊಪ್ಪದ ವೇದಿಕೆಯಲ್ಲಿ ಸಂತೋಷವನ್ನು ಹಂಚಿಕೊಂಡರು.