ಮಂಗಳವಾರ, ಜೂನ್ 25, 2024
Sports for change Kho Kho ಪಂದ್ಯಾಟ: ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ನಯನಾಡು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು-T20 ವಿಶ್ವಕಪ್‌: ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ ಅಫ್ಘಾನಿಸ್ತಾನ-ವಿಧಾನ ಪರಿಷತ್ ಸದಸ್ಯ ಡಾ.ಸೂರಜ್‌ ರೇವಣ್ಣ ಬಂಧನ-ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಗುಡ್ ನ್ಯೂಸ್; ಜಾಮೀನು ಮಂಜೂರು..!-ದರ್ಶನ್ ಸೇರಿದಂತೆ 17 ಆರೋಪಿಗಳ ಕಸ್ಟಡಿ ಅಂತ್ಯ; ಇಂದು ನ್ಯಾಯಾಲಯಕ್ಕೆ ಹಾಜರು.!-ರಾಜ್ಯದಲ್ಲಿ ಮುಂಗಾರು ಚುರುಕು; ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ.!-ಅಶ್ಲೀಲ ವಿಡಿಯೋ ಪ್ರಕರಣ; ಪ್ರಜ್ವಲ್ ರೇವಣ್ಣಗೆ ಮತ್ತೆ ನ್ಯಾಯಾಂಗ ಬಂಧನ.!-4 ಓವರ್ ಗಳಲ್ಲಿ ಒಂದೇ ಒಂದು ರನ್ ನೀಡದೆ 3 ವಿಕೆಟ್ ಕಬಳಿಸಿ ದಾಖಲೆ ಬರೆದ ಲಾಕಿ ಫರ್ಗುಸನ್..!-ದರ್ಶನ್ ಫಾರಂ ಹೌಸ್ ಮ್ಯಾನೇಜರ್ ನಿಗೂಢ ಸಾವು; ಅನುಮಾನಾಸ್ಪದ ಸಾವು ಪ್ರಕರಣ ದಾಖಲು.!-ಶತಕದತ್ತ ಟೊಮೆಟೊ ದರ; ಮತ್ತಷ್ಟು ಏರಿಕೆಯಾಗಲಿದೆಯೇ ಟೊಮೆಟೊ ಬೆಲೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಹೊಸ ಪಕ್ಷ ಸ್ಥಾಪಿಸಿದ ಐಪಿಎಸ್‌ ಅಧಿಕಾರಿ; ಯೋಗಿ ವಿರುದ್ದವೇ ಸ್ಪರ್ಧೆ!

Twitter
Facebook
LinkedIn
WhatsApp
ಹೊಸ ಪಕ್ಷ ಸ್ಥಾಪಿಸಿದ ಐಪಿಎಸ್‌ ಅಧಿಕಾರಿ; ಯೋಗಿ ವಿರುದ್ದವೇ ಸ್ಪರ್ಧೆ!

ಸರ್ಕಾರಿ ಕೆಲಸ ಮಾಡಲು ನೀವು ಯೋಗ್ಯರಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಲವಂತದಿಂದಾಗಿ ನಿವೃತ್ತಿ ಪಡೆದಿದ್ದ ಮಾಜಿ ಐಪಿಎಸ್ ಅಧಿಕಾರಿ ಮಿತಾಬ್ ಠಾಕೂರ್ ಅವರು ಹೊಸ ಪಕ್ಷವನ್ನು ಸ್ಥಾಪಿಸಿದ್ದಾರೆ.
ಅಲ್ಲದೆ, ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಯೋಗಿ ವಿರುದ್ದ ಠಾಕೂರ್‌ ಸ್ಪರ್ಧಿಸಲಿದ್ದಾರೆ ಎಂದು ಠಾಕೂರ್‌ ಅವರ ಪತ್ನಿ ಈ ಹಿಂದೆಯೇ ಘೋಷಿಸಿದ್ದರು.
ಈಗಾಗಲೇ ನಾನು ಅಧಿಕಾರ್ ಸೇನಾ ಎಂಬ ಸಂಘಟನೆ ಸ್ಥಾಪಿಸಿಕೊಂಡಿದ್ದೇನೆ. ಶೀಘ್ರದಲ್ಲೇ ಬೆಂಬಲಿಗರು ಮತ್ತು ಹಿತೈಷಿಗಳ ಸಭೆ ಕರೆದು ಹೊಸ ಪಕ್ಷ ಘೋಷಣೆ ಮಾಡುವುದಾಗಿ ಠಾಕೂರ್‌ ಘೋಷಣೆ ಮಾಡಿದ್ದಾರೆ. ಇದು ತತ್ವಗಳಿಗಾಗಿ ಹೋರಾಟ.

ಆದಿತ್ಯನಾಥ್ ಅವರು ತಮ್ಮ ಅವಧಿಯಲ್ಲಿ ಅನೇಕ ಅನುಚಿತ, ದಮನಕಾರಿ, ಕಿರುಕುಳ ಮತ್ತು ತಾರತಮ್ಯದ ಕ್ರಮಗಳನ್ನು ಕೈಗೊಂಡಿದ್ದಾರೆ. ಅವರನ್ನು ಚುನಾವಣೆಯಲ್ಲಿ ಮಣಿಸಬೇಕು. ಹೀಗಾಗಿ ಅಮಿತಾಬ್ ಅವರು ಆದಿತ್ಯನಾಥ್ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ” ಎಂದು ನೂತನ್ ಠಾಕೂರ್ ಹೇಳಿದ್ದಾರೆ.

ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಅವರಿಗೆ ಬೆದರಿಕೆ ಹಾಕಿದ ಆರೋಪ ಹೊತ್ತಿದ್ದ ಅಮಿತಾಬ್‌ ಠಾಕೂರ್‌ ಅವರಿಗೆ ಕೇಂದ್ರ ಗೃಹ ಸಚಿವಾಲಯವು ಮಾರ್ಚ್‌ 23 ರಂದು ಕಡ್ಡಾಯ ನಿವೃತ್ತಿ ನೀಡಿತ್ತು. ಅಲ್ಲದೆ, ಠಾಕೂರ್‌ ಅವರು ಸೇವೆಯಲ್ಲಿ ಮುಂದುವರೆಯಲು ಯೋಗ್ಯವಾಗಿಲ್ಲ. ಅವರಿಗೆ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಅಕಾಲಿಕ ನಿವೃತ್ತಿ ನೀಡಲಾಗಿದೆ ಎಂದು ತನ್ನ ಪ್ರಕಟಣೆಯಲ್ಲಿ ಹೇಳಿತ್ತು.
ಅಮಿತಾಬ್‌ ಠಾಕೂರ್‌ ಅವರ ಸೇವಾವಧಿ 2028 ರಲ್ಲಿ ಅಂತ್ಯಗೊಳ್ಳಿತ್ತು. ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಅವರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಅಧಿಕಾರಿಯನ್ನು ಜುಲೈ 13, 2015 ರಂದು ಅಮಾನತುಗೊಳಿಸಲಾಗಿತ್ತು. ಆದಾಗ್ಯೂ, ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಯ ಲಕ್ನೋ ಪೀಠವು 2016 ರ ಏಪ್ರಿಲ್‌ನಲ್ಲಿ ಅವರ ಅಮಾನತಿಗೆ ತಡೆ ನೀಡಿತು. ಅಲ್ಲದೆ, ಅಕ್ಟೋಬರ್ 11, 2015 ರಿಂದ ಜಾರಿಗೆ ಬರುವಂತೆ ಪೂರ್ಣ ವೇತನದೊಂದಿಗೆ ಅವರನ್ನು ಮತ್ತೆ ಸೇವೆಯಲ್ಲಿ ಮುಂದುವರೆಸುವಂತೆ ಆದೇಶಿಸಿತ್ತು. ಇದೆಲ್ಲದರ ನಡುವೆ ಇದೂಗ ಅವರಿಗೆ ಕಡ್ಡಾಯ ನಿವೃತ್ತಿ ನೀಡಲಾಗಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ!

ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ!

ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ! Twitter Facebook LinkedIn WhatsApp ಮಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ದಿನೇ ದಿನೇ ಏರಿಕೆ ಆಗುತ್ತಿವೆ. ಇಂದು ಸಾಗರದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು