ಮಂಗಳವಾರ, ಅಕ್ಟೋಬರ್ 3, 2023
Galaxy S23 FE: ಸ್ಯಾಮ್ಸಂಗ್ ಗ್ಯಾಲಕ್ಸಿ S23 ಎಫ್​ಇ ಸ್ಮಾರ್ಟ್​ಫೋನ್ ಅ.4 ರಂದು ಬಿಡುಗಡೆ!-ಜಿಂಬಾಬ್ವೆಯಲ್ಲಿ ವಿಮಾನ ಪತನ ; ಭಾರತದ ಕೋಟ್ಯದೀಶ್ವರ ಹಾಗೂ ಗಣಿ ಉದ್ಯಮಿ ಮತ್ತು ಅವರ ಪುತ್ರ ದುರ್ಮರಣ!-ಸಂಕ್ರಾಂತಿ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ; ಸಿಪಿ ಯೋಗೇಶ್ವರ್ ಬಾಂಬ್-ದಿಗ್ಗಜ ಮಾಜಿ ಓಟಗಾರ್ತಿ ಪಿ.ಟಿ ಉಷಾರವರ ರಾಷ್ಟ್ರೀಯ ದಾಖಲೆ ಸರಿಗಟ್ಟಿ ಪದಕ ಸುತ್ತಿಗೇರಿದ ವಿತ್ಯಾ!-ನೀವು ಹೆದರಿಸದರೆ ಮಾತ್ರಕ್ಕೆ ನಾನು ಹೆದರಲ್ಲ ದೇವೇಗೌಡರಿಗೆ ಡಿಕೆಶಿ ಟಾಂಗ್!-ಜಿಪಿಎಸ್ ಮ್ಯಾಪ್ ನೋಡಿ ಕಾರನ್ನು ಚಲಿಸುವುತ್ತಿರುವಾಗ ನದಿಗೆ ಬಿದ್ದು ಇಬ್ಬರು ವೈದ್ಯರು ಸಾವು ; ಮೂವರು ಪಾರು!-ಹೃದಯ ವಿದ್ರಾವಕ ಘಟನೆ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸೇರಿ 6 ಮಂದಿ ಹತ್ಯೆ-ಬೆಂಗಳೂರಿನ ಕಂಬಳಕ್ಕೆ ಹೇಗಿದೆ ತಯಾರಿ; ದಕ್ಷಿಣ ಕನ್ನಡ ಭಾಗದ 150 ಫುಡ್ ಸ್ಟಾಲ್ ಏರ್ಪಾಡು..!-ಪಿಯುಸಿಯಲ್ಲಿ ಅಂಕ ಕಡಿಮೆ ಬಂತೆಂದು ಮನನೊಂದು ಅಪಾರ್ಟ್‌ಮೆಂಟ್‌ನಿಂದ ಜಿಗಿದ ಬಾಲಕಿ ; ರಕ್ಷಣೆಗೆ ಧಾವಿಸಿದ ಯುವಕ - ಇಲ್ಲಿದೆ ವಿಡಿಯೋ-ಬರ್ತ್‌ಡೇ ಪಾರ್ಟಿಯಲ್ಲಿ ಡೆಕೋರೇಷನ್‌ಗೆ ಹಾಕಿದ್ದ ಹೀಲಿಯಂ ಬಲೂನ್‌ ಬ್ಲಾಸ್ಟ್‌ ; ಐವರು ಗಂಭೀರ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಹೆಣದ ಜೊತೆ ತ್ರಿಬಲ್ ರೈಡ್ ಹೋಗಿ ಹೆಣ ಎಸೆದು ಬಂದ ಆರೋಪಿಗಳ ಬಂಧನ

Twitter
Facebook
LinkedIn
WhatsApp
New Project 2023 01 08T083348.470

ಬೆಂಗಳೂರು: ಕೊಲೆ ಮಾಡಿ ದ್ವಿಚಕ್ರ ವಾಹನದಲ್ಲಿ ತ್ರಿಬಲ್ ರೈಡ್ ಹೋಗಿ ಮೃತದೇಹವನ್ನು ಎಸೆದು ಬಂದ ಪ್ರಕರಣ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಠಾಣಾ ಪೊಲೀಸರು ದಂಪತಿ ಸೇರಿದಂತೆ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರೀನಾ, ಗಂಗೇಶ್ ಹಾಗೂ ಬಿಜೋಯ್ ಬಂಧಿತ ಆರೋಪಿಗಳಾಗಿದ್ದಾರೆ. ರೀನಾ ಹಾಗೂ ಗಂಗೇಶ್ ಸೇರಿ ನಿಬಾಶೀಶ್ ಪಾಲ್ ಎಂಬಾತನನ್ನ ಕೊಲೆ (Murder) ಮಾಡಿದ ನಂತರ ಹೆಣ ಸಾಗಿಸಲು ಬಿಜೋಯ್ ಎಂಬಾತನ ಸಹಾಯ ಪಡೆದಿದ್ದಾರೆ ಎಂದು ತನಿಖೆ ವೇಳೆ ತಿಳಿದುಬಂದಿದೆ.

ರೀನಾ ಮತ್ತು ಗಂಗೇಶ್ ಗಂಡ ಹೆಂಡತಿಯಾಗಿದ್ದಾರೆ. ಆದರೆ ರೀನಾ ಮತ್ತು ನಿಬಾಶೀಶ್ ಪಾಲ್ ಅಕ್ರಮ ಸಂಬಂಧ ಹೊಂದಿದ್ದರು. ಒಂದು ದಿನ ರೀನಾ ಗಂಡ ಗಂಗೇಶ್ ಸ್ವಂತ ರಾಜ್ಯ ಉತ್ತರ ಪ್ರದೇಶಕ್ಕೆ ಹೋಗಿದ್ದ. ಈ ನಡುವೆ ರೀನಾಗೆ ನಿಬಾಶೀಶ್ ಕಿರುಕುಳ ಕೊಡಲು ಶುರು ಮಾಡಿದ್ದಾನೆ. ಹಣಕ್ಕಾಗಿ ಬೇರೆಯವರ ಜೊತೆ ಮಲಗಲು ರೀನಾಗೆ ಒತ್ತಾಯ ಮಾಡುತ್ತಿದ್ದ. ಹೀಗಾಗಿ ತನ್ನ ಪತಿ ಗಂಗೇಶ್​ಗೆ ಕರೆ ಮಾಡಿದ ರೀನಾ, ವಾಪಸ್ ಬರುವಂತೆ ಸೂಚಿಸಿದ್ದಾಳೆ. ನಂತರ ನಡೆದಿದ್ದೇ ಮರ್ಡರ್.

ಗಂಡನನ್ನು ಕರೆಸಿಕೊಂಡ ರೀನಾ, ನಿಬಾಶೀಶ್ ಕಿರುಕುಳವನ್ನು ಹೇಳಿಕೊಂಡಿದ್ದಾಳೆ. ಹೀಗಾಗಿ ದಂಪತಿ ಒಟ್ಟು ಸೇರಿಕೊಂಡು ನಿಬಾಶೀಶ್ ಕೊಲೆ ಮಾಡಲು ಪ್ಲಾನ್ ಹಾಕುತ್ತಾರೆ. ಅದರಂತೆ ನಿಬಾಶೀಶ್​ಗೆ ಕಂಠಪೂರ್ತಿ ಕುಡಿಸಿ ಸೀರೆಯಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ಇದಕ್ಕೂ ಮುನ್ನ ಪಾಲ್​ಗೆ ಊಟದಲ್ಲಿ ಗಾಂಜಾದ ಬೀಜವನ್ನು ಹಾಕಿ ಅಮಲು ಬರುವಂತೆ ಮಾಡಿದ್ದರು. ಅಮಲು ಬಂದ ಬಳಿಕೆ ಸೀರೆಯಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾರೆ.

ನಿಬಾಶೀಶ್ ಕೊಲೆ ನಂತರ ಹೆಣ ಸಾಗಿಸಲು ಗಂಗೇಶ್ ತನ್ನ ಸ್ನೇಹಿತ ಬಿಜೋಯ್ ಸಹಾಯ ಪಡೆದಿದ್ದಾನೆ. ಗಂಗೇಶ್ ಹಾಗೂ ಬಿಜೋಯ್ ನಿಬಾಶೀಶ್ ಮೃತದೇಹವನ್ನು ಬೈಲ್​ನ ಮಧ್ಯ ಕೂರಿಸಿಕೊಂಡು ಒಂದು ಕಿಲೋ ಮೀಟರ್ ದೂರದವರೆಗೆ ತ್ರಿಬಲ್ ರೈಡ್ ಹೋಗಿ ರಸ್ತೆ ಬದಿ ಹೆಣ ಎಸೆದು ಬಂದಿದ್ದರು. ಬಳಿಕ ಆರೋಪಿಗಳು ಮನೆಯನ್ನೇ ಖಾಲಿ ಮಾಡಿ ಟಾಟಾ ಎಸಿ ಅಟೋದಲ್ಲಿ ಪರಾರಿಯಾಗಿದ್ದರು.

ಪ್ರಕರಣ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ನಿಬಾಶೀಶ್ ಮನೆಯ ಹತ್ತಿರದ ಸಿಸಿಟಿವಿಯನ್ನು ಪರಿಶೀಲನೆ ಮಾಡುತ್ತಾರೆ. ಈ ವೇಳೆ ದಂಪತಿ ವಾಹನದಲ್ಲಿ ಹೋಗುತ್ತಿರುವುದು ಕಂಡುಬಂದಿದೆ. ಹೀಗಾಗಿ ಟಾಟಾ ಎಸಿ ಡ್ರೈವರ್​​ನನ್ನು ಪೊಲೀಸರು ವಿಚಾರಣೆ ಮಾಡಿದಾಗ ದಂಪತಿಯನ್ನು ಶಿಕಾರಿಪುರಕ್ಕೆ ಬಿಟ್ಟು ಬಂದಿರುದಾಗಿ ಹೇಳಿದ್ದಾನೆ. ಮಾಹಿತಿ ಆಧರಿಸಿ ಕಾರ್ಯಾಚರಣೆಗೆ ಇಳಿದ ಪೊಲೀಸರು ಶಿಕಾರಿಪುರದಲ್ಲಿ ರೀನಾ ಹಾಗೂ ಗಂಗೇಶ್​​ನನ್ನು ಬಂಧಿಸಿ ಕರೆತಂದಿದ್ದಾರೆ. ಹೆಣ ಸಾಗಿಸಲು ನೆರವಾಗಿದ್ದ ಬಿಜೋಯ್​ ಕೂಡ ಅರೆಸ್ಟ್ ಆಗಿದ್ದಾನೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ