
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ಶ್ರೀಕಾಕುಳಂ: ಹುಟ್ಟುಹಬ್ಬ ಆಚರಣೆ ಬಳಿಕ ಸಮುದ್ರದ ಬಳಿ ಸೆಲ್ಫಿ ತೆಗೆಯಲು ತೆರಳಿದ ನಾಲ್ವರು ಸಮುದ್ರದಲ್ಲಿ ಅಲೆಗಳ ರಭಸಕ್ಕೆ ಸಿಕ್ಕಿ ಮೃತಪಟ್ಟಿರುವ ಘಟನೆ ಪುಕ್ಕಳ್ಲಪಾಲೆಂ ನಲ್ಲಿ ನಡೆದಿದೆ.
ಸಾಯಿ ಲೋಕೇಶ್ (20), ತಿರುಮಲ (17), ಮನೋಜ್ (21) ಮತ್ತು ಗೋಪಿಚಂದ ಸಮುದ್ರಪಾಲಾಗಿರುವ ಯುವಕರು. ಬೊರ್ರಪುಟ್ಟಗ ನಿವಾಸಿ ಸಾಯಿ ಲೋಕೇಶ್ ತನ್ನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ 18 ಮಂದಿ ಸ್ನೇಹಿತರೊಡನೆ ಪುಕ್ಕಳ್ಲಪಾಲೆಂ ಸಮುದ್ರ ತೀರದಲ್ಲಿ ಹುಟ್ಟುಹಬ್ಬ ಆಚರಿಸಿದ್ದಾನೆ. ಬಳಿಕ ಇವರಲ್ಲಿ ಐವರು ಸೆಲ್ಫಿ ತೆಗೆದುಕೊಳ್ಳಲು ಸಮುದ್ರದ ಒಳಭಾಗಕ್ಕೆ ಹೋಗಿದ್ದಾರೆ. ಈ ವೇಳೆ ಸಮುದ್ರದ ಅಲೆಗಳ ರಭಸಕ್ಕೆ ಐವರು ನೀರಿನಲ್ಲಿ ಸಿಲುಕಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ರಕ್ಷಣಾ ಪಡೆ ಸಿಬ್ಬಂದಿಗಳು ತೆರಳಿದ್ದು, ಮೂವರ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಇನ್ನೋರ್ವನ ಮೃತದೇಹಕ್ಕೆ ಶೋಧ ಕಾರ್ಯ ಮುಂದುವರಿದಿದೆ. ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಯುವಕರು ಸಮುದ್ರದೊಳಗೆ ದುಸ್ಸಾಹಸಕ್ಕೆ ಕೈ ಹಾಕಿ ಜೀವ ಕಳೆದುಕೊಂಡಿದ್ದಾರೆ.
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
108MP ಕ್ಯಾಮೆರಾದ ಗ್ಯಾಲಕ್ಸಿ F54 5G ಅನಾವರಣ ಮಾಡಿದ ಸ್ಯಾಮ್ಸಂಗ್