- ರಾಜ್ಯ
- 12:14 ಅಪರಾಹ್ನ
- ಮೇ 26, 2023
ಹಾವು ಕಚ್ಚಿ ಹೆಡ್ ಕಾನ್ಸಟೇಬಲ್ ಸಾವು!

ವಿಜಯವಾಡ: ಹಾವಿಗೆ ಪೊಲೀಸ್ ಪೇದೆ ಆದರೇನು, ಶ್ರೀಸಾಮಾನ್ಯ ಮನುಷ್ಯ ಆದರೇನು. ಕಚ್ಚುವುದು ಅದರ ಬುದ್ಧಿಯಾಗಿರುವಾಗ ಯಾರಿಗೆ ಬೇಕಾದರೂ ಕಚ್ಚೀತು ಅದು. ಇನ್ನು ಸಾವು ಎಂಬ ಮಾಯೆ ಯಾವಾಗ, ಹೇಗೆ, ಯಾರಿಗೆ ಬೇಕಾದರೂ ಬರಬಹುದು! ಇಲ್ಲೂ ಅದೇ ಆಗಿರುವುದು ಭುಸುಗುಟ್ಟಿತ್ತಿರುವ ಹಾವೊಂದು ಹೆಡ್ ಕಾನ್ಸಟೇಬಲ್ (Head constable) ಗೆ ಕಚ್ಚಿಯೇ ಬಿಟ್ಟಿದೆ (Snakebite). ದುರ್ದೃರ್ದೈವವೆಂದರೆ ಆ ಪೇದೆ ಸಾವಿಗೀಡಾಗಿದ್ದಾರೆ. ಇಷ್ಟಕ್ಕೂ ಅಷ್ಟೊಂದು ಬಲಾಢ್ಯ ಪೊಲೀಸ್ ಪೇದೆಯನ್ನು ಅದು ಹೇಗೆ ಹಾವು ಕಚ್ಚಿತು ಎಂಬುದೇ ಎಲ್ರನ್ನೂ ಕಾಡುವ ಪ್ರಶ್ನೆ. ಗುಂಟೂರು ಜಿಲ್ಲೆಯ ತಲ್ಲೂರು ಜಗನಣ್ಣ ಲೇಔಟ್‌ನಲ್ಲಿ ಕಳೆದ ವಾರ ಹಾವು ಕಡಿತಕ್ಕೊಳಗಾದ ಪೊಲೀಸ್ ಪೇದೆಯೊಬ್ಬರು ಗುಂಟೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕೊನೆಗೂ ಕೊನೆಯುಸಿರೆಳೆದಿದ್ದಾರೆ.
ಪೊಲೀಸರ ಪ್ರಕಾರ, ಪ್ರಕಾಶಂ ಜಿಲ್ಲೆಯ ತಲ್ಲೂರು ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಪವನ್ ಕುಮಾರ್ (34) ತಲ್ಲೂರು ಮಂಡಲದ ಜಗನಣ್ಣ ಲೇಔಟ್‌ನಲ್ಲಿ ಸೇವೆಗೆ ನಿಯೋಜಿಸಲ್ಪಟ್ಟಿದ್ದರು. ವಾರದ ಹಿಂದೆ ಸೋಮವಾರ ಮತ್ತು ಮಂಗಳವಾರ ಮಧ್ಯರಾತ್ರಿ ಅವರಿಗೆ ಹಾವು ಕಚ್ಚಿದೆ. ತಕ್ಷಣವೇ ಹಾವನ್ನು ಕೊಂದು, ಕಾನ್‌ಸ್ಟೆಬಲ್‌ನನ್ನು ಗುಂಟೂರಿನ ಜಿಜಿಎಚ್‌ಗೆ ದಾಖಲಿಸಲಾಯಿತು.
ನಂತರ ಉತ್ತಮ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ. ಕಾನ್ಸ್‌ಟೇಬಲ್ ಪವನ್ ಕುಮಾರ್ ಅವರ ಮೃತದೇಹವನ್ನು ಚಿಮಕುರ್ತಿಯಲ್ಲಿ ಪೊಲೀಸ್ ಗೌರವದೊಂದಿಗೆ ಅಂತ್ಯಸಂಸ್ಕಾರ ಮಾಡಲಾಯಿತು.