ಮಂಗಳವಾರ, ಅಕ್ಟೋಬರ್ 3, 2023
ರೊಚಿಗೆದ್ದ ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ ;ನಿಮ್ಮ ತೆವಲಿಗೋಸ್ಕರ ಫಾಲೋವರ್ಸ್ ಬೇಕು ಅಂತ ನ್ಯೂಸ್ ಹಾಕಬೇಡಿ!-ಹ್ಯುಂಡೈನ ಎಲ್ಲ ಮಾದರಿಯ ಕಾರುಗಳಲ್ಲಿ ಇನ್ನು ಮುಂದೆ ಆರು ಏರ್​ಬ್ಯಾಗ್​ಗಳು ನೀಡುವುದಾಗಿ ಘೋಷಿಸಿದ ಹ್ಯುಂಡ್ಯೆ!-ಉಳ್ಳಾಲ: ಅಬ್ಬಕ್ಕ ಪ್ರತಿಮೆ ಎದುರು ಪುಂಡಾಟ; ಯುವಕರಿಗೆ ನೋಟಿಸ್-ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಚಿನ್ನ ಸೀಝ್ ; ಚಿನ್ನವನ್ನು ಎಲ್ಲೆಲ್ಲಿ ಬಚ್ಚಿಟ್ಟು ತಂದಿದ್ದಾರೆ ಗೊತ್ತೆ..!-ನನ್ನ ಮೇಲೆ ಹೈಕಮಾಂಡ್ ಗೆ ಪ್ರೀತಿ ಜಾಸ್ತಿ; ಅದಕ್ಕೆ ನಾನೇನು ಮಾತನಾಡಿದರೆ ನೋಟಿಸ್ ಕೊಡುತ್ತಾರೆ !-ಕೇರಳ : ಚರ್ಚ್ ಪಾದ್ರಿ ಬಿಜೆಪಿ ಸೇರ್ಪಡೆ ; ಕರ್ತವ್ಯದಿಂದ ಅಮಾನತು!-ಮಹಾರಾಷ್ಟ್ರ : ಸರ್ಕಾರಿ ಆಸ್ಪತ್ರೆಯಲ್ಲಿ ಒಂದೇ ದಿನ 12 ನವಜಾತ ಶಿಶುಗಳು ಸೇರಿ 24 ಮಂದಿ ಸಾವು!-ಒಂದೇ ಧರ್ಮವಿದೆ; ಅದು ಸನಾತನ ಧರ್ಮ - ಯೋಗಿ ಆದಿತ್ಯನಾಥ್-ಕಾಪು : ಆಲದ ಮರ ಉರುಳಿ ಬಿದ್ದು ಓರ್ವ ಸಾವು ; ಇಬ್ಬರಿಗೆ ಗಾಯ!-Gold Rate : ಇಳಿಕೆ ಕಂಡ ಚಿನ್ನದ ಬೆಲೆ ; 10 ಗ್ರಾಂ ಚಿನ್ನ - ಬೆಳ್ಳಿಯ ದರ ಇವತ್ತೆಷ್ಟಿದೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಹಾಕಿ ವಿಶ್ವಕಪ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಹೊರಬಿದ್ದ ಭಾರತ

Twitter
Facebook
LinkedIn
WhatsApp
97227745

ಒರಿಸ್ಸಾದ ರೊರ್ಕೆಲಾದಲ್ಲಿ ನಡೆದ ಹಾಕಿ ವಿಶ್ವಕಪ್​ನ ಕ್ರಾಸ್​ಓವರ್ ಪಂದ್ಯದಲ್ಲಿ ಭಾರತದ ವಿರುದ್ಧ ನ್ಯೂಜಿಲೆಂಡ್ ತಂಡವು ಪೆನಾಲ್ಟಿ ಶೂಟೌಟ್​ನಲ್ಲಿ 5-4 ಅಂತರದಿಂದ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಕಿವೀಸ್ ಪಡೆಯು ಕ್ವಾರ್ಟರ್​ ಫೈನಲ್​ಗೆ ಪ್ರವೇಶಿಸಿದರೆ, ಟೀಮ್ ಇಂಡಿಯಾ ಹಾಕಿ ವಿಶ್ವಕಪ್​ನಿಂದ ಹೊರಬಿದ್ದಿದೆ. ಇದಕ್ಕೂ ಮುನ್ನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಕಣಕ್ಕಿಳಿದ ಟೀಮ್ ಇಂಡಿಯಾ ಆಟಗಾರರು ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು. ಪರಿಣಾಮ ಮೊದಲ ಸುತ್ತಿನಲ್ಲೇ ಸತತವಾಗಿ ಗೋಲ್ ಬಲೆಯತ್ತ ಭಾರತೀಯ ಮುನ್ಪಡೆ ಆಟಗಾರರು ಮುನ್ನುಗ್ಗಿದರು. ಇದರಿಂದ ಒತ್ತಡಕ್ಕೆ ಒಳಗಾದ ನ್ಯೂಜಿಲೆಂಡ್ ಆಟಗಾರರು ಚೆಂಡಿನ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಎಡವಿದರು. ಇದಾಗ್ಯೂ ಭಾರತಕ್ಕೆ ಕಿವೀಸ್ ರಕ್ಷಣಾ ಕೋಟೆಯನ್ನು ಬೇಧಿಸಲು ಸಾಧ್ಯವಾಗಲಿಲ್ಲ.

ಟೀಮ್ ಇಂಡಿಯಾ ಪರ ಮೊದಲ ಶೂಟೌಟ್​ ಅನ್ನು ಗೋಲಾಗಿ ಪರಿವರ್ತಿಸುವಲ್ಲಿ ಹರ್ಮನ್​ಪ್ರೀತ್ ಯಶಸ್ವಿಯಾದರು. ಇದರ ಬೆನ್ನಲ್ಲೇ ರಸೆಲ್ ನ್ಯೂಜಿಲೆಂಡ್ ಪರ ಗೋಲುಗಳಿಸಿದರು. ಇನ್ನು 2ನೇ ಅವಕಾಶದಲ್ಲಿ ಭಾರತದ ಪರ ರಾಜ್​ಕುಮಾರ್ ಪಾಲ್ ಗೋಲುಗಳಿಸಿದರೆ, ಕಿವೀಸ್​ ಪರ ಫೈಂಡ್ಲೆ ಗೋಲು ಬಾರಿಸಿದರು. ಆದರೆ ಟೀಮ್ ಇಂಡಿಯಾ ಪರ ಅಭಿಷೇಕ್ 3ನೇ ಅವಕಾಶವನ್ನು ಕೈಚೆಲ್ಲಿದರು. ಅತ್ತ ನ್ಯೂಜಿಲೆಂಡ್ ಆಟಗಾರ ಗೋಲು ದಾಖಲಿಸಿ 2-3 ಮುನ್ನಡೆ ಪಡೆದರು. 4ನೇ ಅವಕಾಶದಲ್ಲಿ ಶಂಶೇರ್ ಕೂಡ ಚೆಂಡನ್ನು ಗೋಲು ಬಲೆಯೊಳಗೆ ನುಗ್ಗಿಸುವಲ್ಲಿ ವಿಫಲರಾದರು. ಈ ಹಂತದಲ್ಲಿ ಅತ್ಯುತ್ತಮ ಗೋಲ್ ಕೀಪಿಂಗ್ ಮಾಡಿದ ಶ್ರೀಜೇಶ್ ಸ್ಯಾಮ್ ಲೇನ್ ಬಾರಿಸಿದ ಚೆಂಡನ್ನು ತಡೆದರು. 5ನೇ ಅವಕಾಶದಲ್ಲಿ ಸುಖ್​ಜೀತ್ ಗೋಲುಗಳಿಸಿದರು. ಅಂತಿಮ ಅವಕಾಶದಲ್ಲಿ ಗೆಲ್ಲುವ ಅವಕಾಶ ಹೊಂದಿದ್ದ ನ್ಯೂಜಿಲೆಂಡ್​ಗೆ ಮತ್ತೊಮ್ಮೆ ಶ್ರೀಜೇಶ್ ತಡೆಗೋಡೆಯಾದರು. ನಿರ್ಣಾಯಕ ಶೂಟೌಟ್​ ಅನ್ನು ಅತ್ಯಾದ್ಭುತವಾಗಿ ತಡೆದ ಟೀಮ್ ಇಂಡಿಯಾ ಗೋಲಿ ಶೂಟೌಟ್ ಅನ್ನು ಸಹ 3-3 ಅಂತರದಿಂದ ಟೈ ಮಾಡಿದರು. ಪರಿಣಾಮ ಪಂದ್ಯವು ಸಡನ್ ಡೆತ್​ ಶೂಟೌಟ್​ನತ್ತ ಸಾಗಿತು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ