ಭಾನುವಾರ, ಸೆಪ್ಟೆಂಬರ್ 8, 2024
ಪ್ರಜ್ವಲ್‌ ರೇವಣ್ಣಗೆ ಶಾಕ್; ಜಾಮೀನು ಅರ್ಜಿ ವಜಾ!-ಸೋನಿಯಾ, ರಾಹುಲ್ ಗಾಂಧಿ ವಿರುದ್ಧ ಸುಳ್ಳು ಸುದ್ದಿ; ಇಬ್ಬರ ವಿರುದ್ಧ ಕೇಸ್ ದಾಖಲು-ಕೋವಿಡ್ ಹಗರಣ: ಸಿಎಂ ಕೈ ಸೇರಿದ ವರದಿ; ಮಾಜಿ ಆರೋಗ್ಯ ಸಚಿವರಿಗೆ ತಟ್ಟುತ್ತಾ ಬಿಸಿ?-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರೇಪ್ ಹೇಗಾಗುತ್ತೆ ಎಂದು ಕಂಗನಾಗೆ (Kangana Ranaut) ಕೇಳಿ; ಮಾಜಿ ಸಂಸದನ ವಿವಾದಿತ ಹೇಳಿಕೆ!-Chikkaballapur: ಟಿಟಿ - ಕಾರಿನ ಮಧ್ಯೆ ಭೀಕರ ಅಪಘಾತ; ಮೂವರ ದುರ್ಮರಣ-ಐವನ್ ಡಿಸೋಜಾ ಮನೆ ಮೇಲೆ ಕಲ್ಲುತೂರಾಟ: ಬಂಟ್ವಾಳ ಮೂಲದ ಇಬ್ಬರ ಬಂಧನ-Sarah Rahanuma: ಟಿವಿ ಪತ್ರಕರ್ತೆಯ ಶವ ಢಾಕಾ ಸರೋವರದಲ್ಲಿ ಪತ್ತೆ-ನಟ ದರ್ಶನ್ ಗೆ ಜೈಲೇ ಗತಿ; ನ್ಯಾಯಾಂಗ ಬಂಧನ ವಿಸ್ತರಣೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಸ್ವಾತಿ ಮಾಲಿವಾಲ್ ಗೆ ಲೈಂಗಿಕ ಕಿರುಕುಳ ನೀಡಿದ್ದ ವ್ಯಕ್ತಿಗೆ ಜಾಮೀನು!

Twitter
Facebook
LinkedIn
WhatsApp
2023 1largeimg 1762189367

ದೆಹಲಿ: ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಾಲಿವಾಲ್ ಗೆ ಲೈಂಗಿಕ ಕಿರುಕುಳ ನೀಡಿದ್ದ ವ್ಯಕ್ತಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಈ ಹಂತದಲ್ಲಿ ಆರೋಪಿಯನ್ನು ಅಕಾಲಿಕ ವಿಚಾರಣೆಗೆ ಗುರಿ ಮಾಡುವುದು ಸೂಕ್ತವಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
 
ಗುರುವಾರದಂದು ಏಮ್ಸ್ ನ ಹೊರ ಭಾಗದಲ್ಲಿ ರಾತ್ರಿ 3 ಗಂಟೆಯಲ್ಲಿ ಕುಡಿತ ಅಮಲಿನಲ್ಲಿದ್ದ ಚಾಲಕನೋರ್ವ ತಮ್ಮನ್ನು 10-15 ಮೀಟರ್ ನಷ್ಟು ದೂರಕ್ಕೆ ಎಳೆದೊಯ್ದಿದ್ದ. ಇದಕ್ಕೂ ಮುನ್ನ ನನ್ನ ಕೈ ಕಾರಿನ ಕಿಟಕಿಗೆ ಸಿಲುಕಿಕೊಂಡಿತ್ತು ಎಂದು ಡಿಸಿಡಬ್ಲ್ಯು ಸ್ವಾತಿ ಮಾಲಿವಾಲ್ ಆರೋಪಿಸಿದ್ದರು. 

ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನು ಹರೀಶ್ ಚಂದ್ರ ಎಂದು ಗುರುತಿಸಲಾಗಿದ್ದು, ಆತನನ್ನು ದೆಹಲಿ ಪೊಲೀಸರು ಬಂಧಿಸಿದ್ದರು ಈ ವರೆಗೂ ಆತ ನ್ಯಾಯಾಂಗ ಬಂಧನದಲ್ಲಿದ್ದ. 

ಬಂಧನಕ್ಕೊಳಗಾಗಿರುವ ಆರೋಪಿಯ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳೂ ಜಾಮೀನು ನೀಡಬಹುದಾದ ಆರೋಪಗಳಾಗಿವೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದ್ದು ಜಾಮೀನು ಮಂಜೂರು ಮಾಡಿದೆ.
 
ಆರೋಪಿಯನ್ನು ಜೈಲಿನಲ್ಲಿಡುವುದರಿಂದ ಯಾವುದೇ ಉದ್ದೇಶವೂ ಈಡೇರುವುದಿಲ್ಲ ಎಂದು ಕೋರ್ಟ್ ಹೇಳಿದ್ದು,  50,000 ರೂಪಾಯಿ ಶೂರಿಟಿ ಬಾಂಡ್ ನ್ನು ಸಲ್ಲಿಸಲು ಹರೀಶ್ ಚಂದ್ರಗೆ ಸೂಚಿಸಿದೆ. 

ಅಗತ್ಯವಿದ್ದಾಗ ವಿಚಾರಣೆಗೆ ಹಾಜರಾಗುವುದು, ಮತ್ತೆ ಇಂಥಹದ್ದೇ ಪ್ರಕರಣದಲ್ಲಿ ಭಾಗಿಯಾಗದೇ ಇರುವುದು, ಸಾಕ್ಷ್ಯ ನಾಶ ಮಾಡದೇ ಇರುವುದು, ಆರೋಪಿಯ ಮೇಲೆ ಒತ್ತಡ ಹೇರದೇ ಇರುವುದು ಮೊದಲಾದ ಷರತ್ತುಗಳನ್ನು ಕೋರ್ಟ್ ವಿಧಿಸಿದೆ. 

ಆರೋಪದ ತೀವ್ರತೆ ಗಂಭೀರವಾದದ್ದು ಎಂಬುದರಲ್ಲಿ ಎರಡು ಮಾತಿಲ್ಲ ಹಾಗೂ ಈ ಹಂತದಲ್ಲಿ ಜಾಮೀನು ಅರ್ಜಿಯನ್ನು ಪರಿಗಣಿಸುವುದೂ ಸೂಕ್ತವಾಗಿದ್ದು, ಆರೋಪದ ತೀವ್ರತೆಯೊಂದೇ ಜಾಮೀನು ನೀಡಲು ಪರಿಗಣಿಸುವುದಲ್ಲ ಎಂದು ಕೋರ್ಟ್ ಹೇಳಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ