ಪರ್ತ್: ಆಸ್ಟ್ರೇಲಿಯಾ (Australia) ಹಾಗೂ ವೆಸ್ಟ್ ಇಂಡೀಸ್ (West Indies) ನಡುವಿನ ಮೊದಲ ಟೆಸ್ಟ್ (Test) ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಮಿಂಚಿದ ಆಸ್ಟ್ರೇಲಿಯಾ ಬ್ಯಾಟ್ಸ್‌ಮ್ಯಾನ್ ಸ್ಟೀವ್ ಸ್ಮಿತ್ (Steve Smith) ಬ್ಯಾಟ್‍ನಿಂದ ಅಂಪೈರ್ ಕಾಲಿಗೆ ಪೆಟ್ಟು ಬಿದ್ದಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟ್‌ಬೀಸುತ್ತಿದ್ದ ಸ್ಮಿತ್ ನಾನ್‍ಸ್ಟ್ರೈಕ್‍ನಲ್ಲಿದ್ದಾಗ ಅಂಪೈರ್ ರಾಡ್ ಟಕರ್, ಸ್ಮಿತ್ ಹಿಂದೆ ನಿಂತಿದ್ದರು. ಈ ವೇಳೆ ಅಂಪೈರ್ ಇರುವುದನ್ನು ಗಮನಿಸದ ಸ್ಮಿತ್ ಬ್ಯಾಟ್‍ನ್ನು ಬೀಸಿದ್ದಾರೆ. ಆಗ ಅಂಪೈರ್ ಕಾಲಿಗೆ ಬ್ಯಾಟ್‍ನಿಂದ ಹೊಡೆತಬಿದ್ದಿದೆ. ಅಂಪೈರ್ ಗಾಯದಿಂದ ಒಮ್ಮೆ ಕುಂಟುತ್ತಾ ಸಾಗಿದರು. ಬಳಿಕ ಚೇತರಿಕೆ ಕಂಡು ಕರ್ತವ್ಯ ಮುಂದುವರಿಸಿದರು.
ಪಂದ್ಯದಲ್ಲಿ ಸ್ಮಿತ್ ಮನಮೋಹಕ ಆಟದ ಮೂಲಕ ವೆಸ್ಟ್ ಇಂಡೀಸ್ ತಂಡಕ್ಕೆ ಕಾಡಿದರು. ಅಲ್ಲದೇ ಅಜೇಯ 200 ರನ್ (311 ಎಸೆತ, 17 ಬೌಂಡರಿ) ಚಚ್ಚಿ ಆಸ್ಟ್ರೇಲಿಯಾದ ಬೃಹತ್ ಮೊತ್ತಕ್ಕೆ ಕಾರಣರಾದರು. ಆಸ್ಟ್ರೇಲಿಯಾ 152 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 598 ರನ್‍ಗಳಿಸಿದ್ದಾಗ ಡಿಕ್ಲೇರ್ ಘೋಷಿಸಿತು.
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist