ಸ್ಪೀಕರ್ ಯುಟಿ ಖಾದರ್ ಗೆ ಮಂತ್ರಿ ಸ್ಥಾನ ಸಿಗುತ್ತಾ? ರಾಜಕೀಯ ಪಡಸಾಲೆಯಲ್ಲಿ ಜೋರಾಗಿದೆ ಸುದ್ದಿ!
Twitter
Facebook
LinkedIn
WhatsApp

ಮಂಗಳೂರು: ರಾಜ್ಯ ವಿಧಾನಸಭೆಯ ಸ್ಪೀಕರ್ ಆಗಿರುವ ಮಂಗಳೂರಿನ ಶಾಸಕ ಯುಟಿ ಖಾದರ್ ಅವರಿಗೆ ಮಂತ್ರಿ ಸ್ಥಾನ ಸಿಗುತ್ತೆ ಎಂಬ ಸುದ್ದಿ ರಾಜಕೀಯ ಪಡಶಾಲೆಯಲ್ಲಿ ಜೋರಾಗಿ ಸದ್ದು ಮಾಡುತ್ತಿದೆ.
ನಿನ್ನೆ ದಿವಸ ರಾಹುಲ್ ಗಾಂಧಿ ಬಂದು ಹಲವಾರು ಸಚಿವರಿಗಳಿಗೆ ಕ್ಲಾಸ್ ತೆಗೆದುಕೊಂಡ ನಂತರ ಈ ಸುದ್ದಿ ಈಗ ಜೋರಾಗಿ ಕೇಳಿ ಬರುತ್ತದೆ.
ಹಲವಾರು ಮಂತ್ರಿಗಳನ್ನು ಬದಲಾಯಿಸುವ ಸಾಧ್ಯತೆ ಇದೆ ಎಂದು ರಾಜಕೀಯ ಅಂಗಳದಲ್ಲಿ ಈಗ ಕೇಳಿ ಬರುತ್ತಿರುವ ಸುದ್ದಿಯಾಗಿದೆ.
ಈ ನೆಲೆಯಲ್ಲಿ ಸ್ಪೀಕರ್ ಅವರಿಗೆ ಮಂತ್ರಿ ಸ್ಥಾನ ಒದಗುತ್ತದೆ ಎಂಬ ಸುದ್ದಿಗೆ ಈಗ ರೆಕ್ಕೆ ಪುಕ್ಕೆಗಳು ಬಂದಿವೆ.