- ಬೆಂಗಳೂರು
- 9:08 ಫೂರ್ವಾಹ್ನ
- ಜನವರಿ 6, 2023
ಸ್ನಾನ ಮಾಡಿ ದೇವಸ್ಥಾನಕ್ಕೆ ಬಂದಿಲ್ಲವೆಂದು ಮಹಿಳೆ ಮೇಲೆ ಹಲ್ಲೆ, ಜೀವ ಬೆದರಿಕೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದೇವಸ್ಥಾನಕ್ಕೆ ಬಂದ ಮಹಿಳೆಯ ಮೇಲೆ ದೌರ್ಜನ್ಯ ನಡೆಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಘಟನೆ 2022ರ ಡಿಸೆಂಬರ್ 22 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮಹಿಳೆಯ ಜುಟ್ಟು ಹಿಡಿದು ಧರಧರನೆ ಎಳೆದೊಯ್ದು, ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿರುವ ಈ ಘಟನೆ ಬೆಂಗಳೂರಿನ ಅಮೃತಹಳ್ಳಿಯ ಲಕ್ಷ್ಮೀನಾರಾಯಣ ದೇವಸ್ಥಾನ (Sri Lakshminarayana Swamy Temple in Amruthahalli) ದಲ್ಲಿ ನಡೆದಿದೆ. ಹೇಮಾವತಿ ಎಂಬಾಕೆ ಮೇಲೆ ದೇವಸ್ಥಾನದ ಧರ್ಮದರ್ಶಿ ಮುನಿಕೃಷ್ಣ ಎಂಬಾತ ಇಂತಹ ಹೀನ ಕೃತ್ಯ ಎಸಗಿದ್ದಾನೆ.
ದೇವರ ದರ್ಶನಕ್ಕೆ ತೆರಳಿದ್ದ ಹೇಮಾವತಿಗೆ ಸ್ನಾನ ಮಾಡದೇ, ಶುದ್ಧಿ ಇಲ್ಲದೆ ದೇವಸ್ಥಾನಕ್ಕೆ ಬಂದಿದ್ದೀಯಾ ಎಂದು ಕೂದಲು ಹಿಡಿದು ಹೊರಗೆ ಎಳೆದೊಯ್ದಿದ್ದಾನೆ. ನಂತರ ಕಬ್ಬಿಣದ ರಾಡ್ ನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಯಾರಿಗಾದರೂ ಹೇಳಿದ್ರೆ ಸರಿಯಿರಲ್ಲ ಅಂತಾ ಅಂತಾ ಜೀವ ಬೆದರಿಕೆ ಕೂಡ ಹಾಕಿದ್ದಾನೆ.
ಮುನಿಕೃಷ್ಣ (Munikrishna) ಹಲ್ಲೆ ನಡೆಸುವಾಗ ದೇವಸ್ಥಾನದ ಅರ್ಚಕರು ತಡೆಯುವ ಪ್ರಯತ್ನ ಮಾಡಿದರೂ, ಮತ್ತೆ ಮುಂದೆ ನುಗ್ಗಿ ಹಲ್ಲೆ ನಡೆಸಿದ್ದಾನೆ. ಈತನ ಎಲ್ಲಾ ಕೃತ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಗುರುವಾರ ಮಹಿಳೆ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಐಪಿಸಿ 354 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಸದ್ಯ ಮಹಿಳೆ ಮೇಲೆ ಹಲ್ಲೆ ನಡೆಸಿದ ಆರೋಪಿ ಮುನಿಕೃಷ್ಣ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.