ಶನಿವಾರ, ಮಾರ್ಚ್ 15, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಸ್ಟ್ರಾಬೆರಿ ಹಣ್ಣು ತಿನ್ನೋದ್ರಿಂದ ಆರೋಗ್ಯಕ್ಕೆ ಸಿಗುವ ಲಾಭಗಳೇನು..?

Twitter
Facebook
LinkedIn
WhatsApp
WhatsApp Image 2023 05 06 at 7.27.28 AM

ಟ್ರಾಬೆರಿಗಳು ತಿನ್ನಲು ಎಷ್ಟು ರುಚಿಕರವೋ ಅಷ್ಟೇ ಆಕರ್ಷಕ ಹಣ್ಣು. ರಸಭರಿತವಾದ ಹುಳಿ-ಸಿಹಿ ರುಚಿಯನ್ನು ಹೊಂದಿರುವ ಸ್ಟ್ರಾಬೆರಿಗಳನ್ನು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.ಹುಳಿಮಿಶ್ರಿತ ಸಿಹಿ ಇರುವ ಸ್ಟ್ರಾಬೆರಿ ಹಣ್ಣು ನಮ್ಮೆಲ್ಲರಿಗೂ ಇಷ್ಟ. ಇವು ಆಂಟಿ ಆಕ್ಸಿಡೆಂಟುಗಳು ಮತ್ತು ಇತರ ಪೋಷಕಾಂಶಗಳೊಂದಿಗೆ ಸಮೃದ್ಧವಾಗಿವೆ ಹಾಗೂ ಆರೋಗ್ಯಕ್ಕೆ ಅದ್ಭುತವಾದ ಪ್ರಯೋಜನಗಳನ್ನು ನೀಡುತ್ತದೆ. ಅಲ್ಲದೇ ಇದರಲ್ಲಿ ಆರೋಗ್ಯಕ್ಕೆ ಅವಶ್ಯವದ ಖನಿಜಗಳು ಮತ್ತು ವಿಟಮಿನ್ನುಗಳು ಉತ್ತಮ ಪ್ರಮಾಣದಲ್ಲಿವೆ. 

ರಸಭರಿತವಾಗಿರುವ ಈ ಹಣ್ಣು (Fruit) ರುಚಿಕರ ಮಾತ್ರವಲ್ಲದೆ ಪೌಷ್ಟಿಕವೂ ಹೌದು. ಸ್ಟ್ರಾಬೆರಿಯಲ್ಲಿ ಪ್ರೋಟೀನ್, ಕ್ಯಾಲೋರಿ, ಫೈಬರ್, ಅಯೋಡಿನ್, ಫೋಲೇಟ್, ಒಮೆಗಾ 3, ಪೊಟ್ಯಾಸಿಯಮ್, ಮೆಗ್ನೀಸಿಯಮ್, ರಂಜಕ, ಜೀವಸತ್ವಗಳು ಮುಂತಾದ ಅನೇಕ ಪೌಷ್ಟಿಕಾಂಶ (Nutrition) ಗಳು ಕಂಡುಬರುತ್ತವೆ. ಹಾಗಾಗಿಯೇ ಇದನ್ನು ಸೂಪರ್ ಫುಡ್ (Superfood) ಎಂದು ಕರೆಯಲಾಗುತ್ತದೆ.

ಸ್ಟ್ರಾಬೆರಿ ಹಣ್ಣುಗಳನ್ನು ಜಾಮ್, ಜ್ಯೂಸ್ ಹಾಗೂ ಸ್ಮೂಥಿಗಳನ್ನು ತಯಾರಿಸಲೂ ಬಳಸಲಾಗುತ್ತದೆ ಹಾಗೂ ಫ್ರೂಟ್ ಸಾಲಾಡ್ ನಲ್ಲಿ ಸ್ಟ್ರಾಬೆರಿ ಹಣ್ಣು ಅತಿ ಸೂಕ್ತವಾಗಿ ಹೊಂದಿಕೊಳ್ಳುತ್ತದೆ. ತ್ವಚೆ ಮತ್ತು ಕೂದಲಿಗೂ ಸ್ಟ್ರಾಬೆರಿ ಹಣ್ಣು ಉತ್ತಮ ಪೋಷಣೆ ಒದಗಿಸುವ ಕಾರಣದಿಂದಲೇ ಸ್ಟ್ರಾಬೆರಿ ಹಣ್ಣನ್ನು ಹಲವಾರು ಸೌಂದರ್ಯ ಪ್ರಸಾದನಗಳಲ್ಲಿ ಬಳಸಲಾಗುತ್ತದೆ. ಸ್ಟ್ರಾಬೆರಿಗಳು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಮತ್ತು ಪಾಲಿಫಿನಾಲ್ ಸಂಯುಕ್ತಗಳನ್ನು ಹೊಂದಿರುತ್ತವೆ, ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ವಿಟಮಿನ್-ಸಿ ಚರ್ಮ ಮತ್ತು ಕೂದಲಿನ ಆರೈಕೆಗೂ ಉಪಯುಕ್ತವಾಗಿದೆ.

  • ಸ್ಟ್ರಾಬೆರಿ ಕಡಿಮೆ ಕ್ಯಾಲೋರಿ ಹಣ್ಣು. ತೂಕವನ್ನು ಕಳೆದುಕೊಳ್ಳಲು ನೀವು ಸ್ಟ್ರಾಬೆರಿಗಳನ್ನು ತಿನ್ನಬಹುದು. ಫೈಬರ್ ಭರಿತ ಸ್ಟ್ರಾಬೆರಿಗಳನ್ನು ತಿನ್ನುವುದರಿಂದ ನಿಮ್ಮ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುತ್ತದೆ.
  • ಸ್ಟ್ರಾಬೆರಿ ಹಣ್ಣುಗಳಲ್ಲಿ ಆಂಟಿಆಕ್ಸಿಡೆಂಟ್‌ಗಳು ಮತ್ತು ಪಾಲಿಫಿನಾಲ್‌ಗಳು ಸಮೃದ್ಧವಾಗಿವೆ, ಇವು ನಮ್ಮ ಹೃದಯದ ಆರೋಗ್ಯಕ್ಕೆ ಅವಶ್ಯಕವಾಗಿವೆ ಮತ್ತು ಕೊಲೆಸ್ಟ್ರಾಲ್ ಮಟ್ಟಗಳನ್ನೂ ಕಡಿಮೆ ಮಾಡುತ್ತದೆ ಮತ್ತು ಹೃದ್ರೋಗಗಳು ಎದುರಾಗುವ ಅಪಾಯದ ಸಾಧ್ಯತೆಯನ್ನು ತಗ್ಗಿಸಿ ಆರೋಗ್ಯವನ್ನು ಕಾಪಾಡುತ್ತದೆ.
  • ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳಿಗೆ ಸ್ಟ್ರಾಬೆರಿ ರಾಮಬಾಣವಾಗಿದೆ. ಸಂಶೋಧನೆಯ ಪ್ರಕಾರ, ಸ್ಟ್ರಾಬೆರಿಗಳು ಕ್ಯಾನ್ಸರ್ ವಿರೋಧಿ ಮತ್ತು ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳನ್ನು ಹೊಂದಿದ್ದು, ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯಲ್ಲಿ ಪರಿಣಾಮಕಾರಿ ಫಲಿತಾಂಶಗಳನ್ನು ತೋರಿಸಬಹುದು.
  • ನೀವು ಪಿಷ್ಟಭರಿತ ಆಹಾರವನ್ನು ಸೇವಿಸಿದಾಗ (ವಿಶೇಷವಾಗಿ ಅನ್ನ), ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟ ಧಿಡೀರನೇ ಹೆಚ್ಚಾಗುತ್ತದೆ ಆದರೆ ಅದರೊಂದಿಗೆ ಕೆಲವು ಸ್ಟ್ರಾಬೆರಿಗಳನ್ನು ಸೇವಿಸಿದರೆ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಮಧುಮೇಹ ಇರುವ ವ್ಯಕ್ತಿಗಳಿಗೆ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿರುವ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಸಾಮರ್ಥ್ಯವಿರುವ ಸ್ಟ್ರಾಬೆರಿ ಹಣ್ಣುಗಳು ಅತಿ ಸೂಕ್ತವಾಗಿವೆ.
  • ಈಗಿನ ದಿನಗಳಲ್ಲಿ ಪ್ರಪಂಚದಾದ್ಯಂತ ಲಕ್ಷಾಂತರ ಜನರು ಹೃದಯಕ್ಕೆ ಸಂಬಂಧಿಸಿದ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಮತ್ತು ಧೂಮಪಾನ ಹೃದಯಕ್ಕೆ ಅಪಾಯಕಾರಿಯಾಗಿದೆ. ತೂಕದ ಬಗ್ಗೆ ಕಾಳಜಿ ವಹಿಸಿದ್ರೆ ಮತ್ತು ಸಮತೋಲಿತ ಆಹಾರ ಸೇವನೆ ಮಾಡಿದ್ರೆ ಹೃದಯದ ಆರೋಗ್ಯ ಕಾಪಾಡಬಹದು. ಸ್ಟ್ರಾಬೆರಿ ಸೇವನೆಯು ಹೃದಯದ ಆರೋಗ್ಯಕ್ಕೆ ಒಳ್ಳೆಯದು.
  • ನಮ್ಮ ರೋಗ ನಿರೋಧಕ ಶಕ್ತಿ ಬಲಯುತವಾಗಿರಲು ವಿಟಮಿನ್ ಸಿ ಅಗತ್ಯವಾಗಿದೆ. ಸ್ಟ್ರಾಬೆರಿ ಹಣ್ಣುಗಳಲ್ಲಿ ವಿಟಮಿನ್ ಸಿ ಉತ್ತಮ ಪ್ರಮಾಣದಲ್ಲಿದೆ. ನಿಯಮಿತ ಸೇವನೆಯಿಂದ ರೋಗ ನಿರೋಧಕ ಶಕ್ತಿಯೂ ಬಲಯುತವಾಗಿದ್ದು ಹಲವಾರು ಸೋಂಕು ಮತ್ತು ಬ್ಯಾಕ್ಟೀರಿಯಾಗಳ ಧಾಳಿಯಿಂದ ರಕ್ಷಿಸುತ್ತದೆ.
  • ಸ್ಟ್ರಾಬೆರಿಗಳು ಸಾಕಷ್ಟು ಪ್ರಮಾಣದ ವಿಟಮಿನ್ ಬಿ ಮತ್ತು ಸಿ ಅನ್ನು ಹೊಂದಿರುತ್ತವೆ. ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದ್ರ ಸೇವನೆಯಿಂದ ದೇಹಕ್ಕೆ ಹೆಚ್ಚಿನ ಶಕ್ತಿ ಸಿಗುತ್ತದೆ. 
  • ಸ್ಟ್ರಾಬೆರಿಗಳು ಹಲ್ಲುಗಳನ್ನು ಬಿಳುಪುಗೊಳಿಸುವ ನೈಸರ್ಗಿಕ ಪರ್ಯಾಯವಾಗಿದೆ. ವಿಟಮಿನ್-ಸಿ ಸಮೃದ್ಧವಾಗಿರುವ ಸ್ಟ್ರಾಬೆರಿಗಳು ಹಲ್ಲಿನ ಹಳದಿ ಬಣ್ಣವನ್ನು ತೆಗೆದುಹಾಕುತ್ತದೆ ಮತ್ತು ಹಲ್ಲಿನ ಕೊಳೆತಕ್ಕೆ ಕಾರಣವಾಗುವ ಕಿಣ್ವಗಳ ರಚನೆಯನ್ನು ತಡೆಯುತ್ತದ.
  • ಸ್ಟ್ರಾಬೆರಿ ಹಣ್ಣುಗಳಲ್ಲಿರುವ ಕೆಲವು ಸಂಯುಕ್ತಗಳು ಮೆದುಳಿನ ಕ್ಷಮತೆಯನ್ನು ಹೆಚ್ಚಿಸಿ ಸ್ಮರಣಶಕ್ತಿಯನ್ನು ಉತ್ತಮಗೊಳಿಸಲು ನೆರವಾಗುತ್ತವೆ. ಅಲ್ಲದೇ ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳಿಂದ ಎದುರಾಗುವ ಘಾಸಿಯಿಂದ ದೇಹವನ್ನು ರಕ್ಷಿಸುತ್ತದೆ ಹಾಗೂ ಸ್ಟ್ರಾಬೆರಿ ಹಣ್ಣುಗಳಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮೆದುಳಿನ ಆರೋಗ್ಯವನ್ನು ಉತ್ತಮಗೊಳಿಸುತ್ತವೆ.
  • ಸ್ಟ್ರಾಬೆರಿ ತಿನ್ನುವುದರಿಂದ ಮೆದುಳು ಆರೋಗ್ಯವಾಗಿರುತ್ತದೆ. ಅಧ್ಯಯನದ ಪ್ರಕಾರ, ಸ್ಟ್ರಾಬೆರಿಯಲ್ಲಿರುವ ಫ್ಲೇವನಾಯ್ಡ್ಗಳು ವಯಸ್ಸಾದಂತೆ ಜ್ಞಾಪಕ ಶಕ್ತಿ ಕಳೆದುಕೊಳ್ಳುವುದನ್ನು ತಡೆಯುತ್ತದೆ. ಅಲ್ಲದೆ, ಸ್ಟ್ರಾಬೆರಿಯಲ್ಲಿರುವ ನೈಸರ್ಗಿಕ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳು ಮೆದುಳನ್ನು ಒತ್ತಡದಿಂದ ಮುಕ್ತವಾಗಿರಿಸುತ್ತದೆ
  • ಸ್ಟ್ರಾಬೆರಿಯಲ್ಲಿರುವ ನಾರಿನಂಶ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಮಲಬದ್ಧತೆ, ಅಸಿಡಿಟಿ, ಅಜೀರ್ಣ, ಗ್ಯಾಸ್ ಸಮಸ್ಯೆಗಳಿಂದ ನಮ್ಮ ದೇಹವನ್ನು ದೂರವಿಡುತ್ತದೆ.

 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist