Friday, December 2, 2022
ಖ್ಯಾತ ನಿರ್ಮಾಪಕ ಮುರಳೀಧರನ್ ಹೃದಯಾಘಾತದಿಂದ ನಿಧನ; ಕಂಬನಿ ಮಿಡಿದ ಕಮಲ್ ಹಾಸನ್-ನಟ ವಸಿಷ್ಠ ಸಿಂಹ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ನಟಿ ಹರಿಪ್ರಿಯಾ-ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ: ಸುರ್ಜೇವಾಲಾ-6ನೇ ತರಗತಿಯ ಬಾಲಕ ಹೃದಯಾಘಾತದಿಂದ ಸಾವು-ಭಾರತವಿಂದು ಜಗತ್ತಿನ ನಂ.1 ಹಾಲು ಉತ್ಪಾದಕ: ಕೇಂದ್ರ ಸಚಿವ ಪರುಷೋತ್ತಮ ರೂಪಲಾ-ಪ್ರಜಾಪ್ರಭುತ್ವದ ಬಗ್ಗೆ ವಿಶ್ವ ನಮಗೆ ಪಾಠ ಮಾಡಬೇಕಿಲ್ಲ, ವಿಶ್ವಸಂಸ್ಥೆಗೆ ಭಾರತದ ದಿಟ್ಟ ಉತ್ತರ!-ಮಾಜಿ ಸಿಎಂ ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲು-ಸ್ಮಿತ್ ಬ್ಯಾಟ್‍ನಿಂದ ಹೊಡೆತ ತಿಂದ ಅಂಪೈರ್-ಸೇಡು ತೀರಿಸಿಕೊಳ್ಳಲು ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ 15ರ ಬಾಲಕ-ಹೊಸ ಆಲೋಚನೆಯ ಅಭಿವೃದ್ಧಿ ಚಿಂತನೆಯ 'ಸಮೃದ್ಧ ಕೊಡಗು' ಪರಿಕಲ್ಪನೆಯ ಮೂಲಕ ಕೊಡಗಿನಲ್ಲಿ ಗಮನ ಸೆಳೆಯುತ್ತಿರುವ ಡಾ. ಮಂತರ್ ಗೌಡ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಸೋನಾಲಿಗೆ ಆಪ್ತರೇ ಬಲವಂತವಾಗಿ ಡ್ರಗ್ಸ್ ನೀಡಿದ್ದರು : ಸಿಬಿಐ ಚಾರ್ಜ್‌ಶೀಟ್

Twitter
Facebook
LinkedIn
WhatsApp

ಮುಂಬೈ: ಕೆಲ ತಿಂಗಳ ಹಿಂದೆ ಗೋವಾದಲ್ಲಿ ನಿಗೂಢವಾಗಿ ಮೃತಪಟ್ಟನಟಿ ಹಾಗೂ ಬಿಜೆಪಿಯ ನಾಯಕಿ ಸೋನಾಲಿ ಫೋಗಟ್‌ರಿಗೆ ಅವರ ಆಪ್ತ ಸಹಾಯಕರಾಗಿದ್ದ ಸುಧೀರ್‌ ಸಾಂಗ್ವಾನ್‌ ಹಾಗು ಸುಖ್ವಿಂದರ್‌ ಸಿಂಗ್‌ ರವರೇ ಬಲವಂತವಾಗಿ ಡ್ರಗ್ಸ್ ಸೇವನೆ ಮಾಡಿಸಿದ್ದರು ಎಂದು ಗೋವಾ ಕೋರ್ಟ್‌ಗೆ ಸಿಬಿಐ ಆರೋಪ ಪಟ್ಟಿ ಸಲ್ಲಿಸಿದೆ. ಗೋವಾದ ಅಂಜುಮಾ ಬೀಚ್‌ನಲ್ಲಿರುವ ಕರ್ಲಿಸ್‌ ರೆಸ್ಟೊರೆಂಟ್‌ ಮತ್ತು ನೈಟ್‌ ಕ್ಲಬ್‌ನಲ್ಲಿ ಫೋಗಟ್‌ರಿಗೆ ಬಲವಂತವಾಗಿ ಮೆಥಾಂಫೆಟಮೈನ್‌ ಎಂಬ ಮಾದಕ ದ್ರವ್ಯವನ್ನು ಕುಡಿಸಲಾಗಿದೆ. ನಂತರ ಪೋಗಟ್‌ರವರು ತೀರ ನಿಶ್ಶಕ್ತರಾದರು. ಬಹಳ ಕಷ್ಟದಿಂದ ಅವರ ಸಹಚರರೊಂದಿಗೆ ಗ್ರಾಂಡ್‌ ಲಿಯೋನಿ ಹೋಟೆಲ್‌ಗೆ ಹೋದರು. ಮಾರನೆ ದಿನ ಅವರನ್ನು ಸೆಂಟ್‌ ಆಂಥೊನಿ ಆಸ್ಪತ್ರೆಗೆ ದಾಖಲಿಸಿದ ನಂತರ ಅವರು ಮೃತರಾಗಿದ್ದರು ಎಂದು ತಿಳಿದು ಬಂದಿತ್ತು. ಈಗ ತನಿಖೆ ನಡೆಸಿದ ಸಿಬಿಐ, ಆಪ್ತರಾದ ಸುಧೀರ್‌ ಸಾಂಗ್ವಾನ್‌ ಹಾಗು ಸುಖ್ವಿಂದರ್‌ ಸಿಂಗ್‌ ಅವರೇ ಸೋನಾಲಿಗೆ ಡ್ರಗ್ಸ್ ನೀಡಿದ್ದರು ಎಂದು ಆರೋಪಪಟ್ಟಿ ಸಲ್ಲಿಸಿದ್ದಾರೆ.

ಕಳೆದ ಆಗಸ್ಟ್ 23 ರಂದು ಟಿಕ್‌ ಟಾಕ್‌ ಸ್ಟಾರ್‌ (Tik Tok star) ಹಾಗೂ ಭಾರತೀಯ ಜನತಾ ಪಾರ್ಟಿ(BJP) ನಾಯಕಿ ಸೋನಾಲಿ ಪೋಗಟ್‌ (Sonali Pogat) ಹೃದಯಾಘಾತದಿಂದ ಸಾವು ಕಂಡಿದ್ದಾರೆ ಎಂದು ಮೊದಲಿಗೆ ವರದಿ ಬಂದಿತ್ತು. ಆದರೆ ನಂತರದಲ್ಲಿ ಸೋನಾಲಿ ಪೋಷಕರು ಸಂಬಂಧಿಗಳು ಇದು ಸಹಜ ಸಾವಲ್ಲ ಕೊಲೆ ಎಂದು ಆರೋಪಿಸಿದ್ದರು. ನಂತರ ಸೋನಾಲಿಯನ್ನು ಪಬ್‌ನಿಂದ ಬಲವಂತವಾಗಿ ಎಳೆದೊಯ್ಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ತನ್ನ ಸಹೋದರಿಯನ್ನು ಅತ್ಯಾಚಾರವೆಸಗಿ ಸಾಯಿಸಲಾಗಿದೆ ಎಂದು ಸೋನಾಲಿ ಕಿರಿಯ ಸಹೋದರ ರಿಂಕು ಢಾಕಾ (Rinku Dhaka) ಆರೋಪಿಸಿದ್ದರು.

ಫತೇಹಾಬಾದ್‌ನ (Fatehabad) ಭೂತಂಕಲನ್ (Bhuthankalan) ಗ್ರಾಮದ ನಿವಾಸಿಯಾಗಿದ್ದ ರಿಂಕು, ಸೋನಾಲಿ ಪೋಗಟ್‌ ಅವರ ಆಪ್ತ ಸಹಾಯಕ ಸುಧೀರ್‌ ಸಂಗ್ವಾನ್‌ ಹಾಗೂ ಆತನ ಸ್ನೇಹಿತ ಸುಖ್ವಿಂದರ್‌, ಸೋನಾಲಿ ಅವರು ಸೇವನೆ ಮಾಡಿದ ಆಹಾರದಲ್ಲಿ ಅಮಲು ಪದಾರ್ಥ ಬೆರೆಸಿ ನೀಡಿದ್ದಾರೆ. ಬಳಿಕ ಆಕೆಯನ್ನು ರೇಪ್‌ ಮಾಡಿದ್ದಲ್ಲದೆ, ಅದನ್ನು ವಿಡಿಯೋ ಮಾಡಿ, ಬ್ಲ್ಯಾಕ್‌ಮೇಲ್‌ ಕೂಡ ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು. ಇದರೊಂದಿಗೆ ರಾಜಕೀಯ ಷಡ್ಯಂತ್ರ (political conspiracy) ರೂಪಿಸುವ ಭರದಲ್ಲಿ ಸೋನಾಲಿಯ ಆಸ್ತಿ ಕಬಳಿಸಿ ಹತ್ಯೆ ಮಾಡುವ ಬಗ್ಗೆಯೂ ಚರ್ಚೆ ನಡೆದಿದೆ. ಈ ಬಗ್ಗೆ ರಿಂಕು ಗೋವಾ ಪೊಲೀಸರಿಗೆ ಲಿಖಿತ ದೂರು ನೀಡಿದ್ದು, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.

ಸೋನಾಲಿ ಫೋಗಟ್, ಹಿಸಾರ್‌ನಲ್ಲಿ ಮದುವೆಯಾಗಿದ್ದರು. ಆದರೆ, ಕೆಲವು ವರ್ಷಗಳ ಹಿಂದೆ ಸೋದರ ಮಾವ ಸಂಜಯ್‌ ಪೋಗಟ್‌ ನಿಧನರಾದರು. ಇದಾದ ನಂತರ ಸೋನಾಲಿ ಬಿಜೆಪಿ ಸೇರಿದ್ದಲ್ಲದೆ, ರಾಜಕೀಯದಲ್ಲಿ ತಮ್ಮ ವೃತ್ತಿಜೀವನವನ್ನು ಕಂಡುಕೊಂಡಿದ್ದರು. 2019 ರ ಚುನಾವಣೆಯ ಸಮಯದಲ್ಲಿ, ರೋಹ್ಟಕ್ ನಿವಾಸಿ ಸುಧೀರ್ ಸಾಂಗ್ವಾನ್ ಮತ್ತು ಭಿವಾನಿ ನಿವಾಸಿ ಸುಖ್ವಿಂದರ್(Sukhwinder), ಸೋನಾಲಿ ಅವರ ಬಳಿ ಕೆಲಸಗಾರರಾಗಿ ಸೇರಿಕೊಂಡಿದ್ದರು. ಸುಧೀರ್‌ (Sudhir) ಹಾಗೂ ಸುಖ್ವಿಂದರ್‌ ಇಬ್ಬರೂ ಕೂಡ ಸೋನಾಲಿಯ ವಿಶ್ವಾಸವನ್ನು ಗಳಿಸಿಕೊಂಡಿದ್ದರು.

ಇದರಲ್ಲಿ ಸುಧೀರ್‌, ಸೋನಾಲಿ ಅವರ ಪಿಎ ಆಗಿ ಕೆಲಸ ಮಾಡುತ್ತಿದ್ದರು. 2021ರಲ್ಲಿ ಕೂಡ ಸೋನಾಲಿ ಅವರ ಮನೆಯಲ್ಲಿ ಕಳ್ಳತನವಾಗಿತ್ತು. ಸುಧೀರ್‌ ಅವರ ಮುಂದಾಳತ್ವದಲ್ಲಿಯೇ ಈ ಕಳ್ಳತನ ನಡೆದಿತ್ತು. ಆದರೆ, ಅದಾದ ಬಳಿಕ, ಮನೆ ಕೆಲಸದವರು ಹಾಗೂ ಇತರ ಸಿಬ್ಬಂದಿಯನ್ನ ತೆಗೆದು ಹಾಕಲಾಗಿತ್ತು. ಅಂದಿನಿಂದ ಸೋನಾಲಿ ಅವರ ಆಹಾರದ ಬಗ್ಗೆ ಸುಧೀರ್‌ ಗಮನ ನೀಡುತ್ತಿದ್ದ. ಕೆಲವೊಮ್ಮೆ ಸೋನಾಲಿ ಅವರೇ, ಸುಧೀರ್‌ ಅವರು ನನಗೆ ಖೀರ್‌ ತಿನಿಸಿದ ಬಳಿಕ ನನ್ನ ಕೈ ಕಾಲುಗಳು ಮರಗಟ್ಟಿ ಹೋದಂತಾಗುತ್ತಿದೆ ಎಂದು ಅವರು ಹಿಂದೊಮ್ಮೆ ಹೇಳಿದ್ದರು ಎಂದು ರಿಂಕು ದೂರಿದ್ದರು.

ಸುಧೀರ್, ಸೋನಾಲಿ ಅವರ ಎಲ್ಲಾ ವಹಿವಾಟು ಮತ್ತು ಕಾಗದ ಪತ್ರಗಳ ಕೆಲಸ ಮಾಡುತ್ತಿದ್ದ ಎಂದು ರಿಂಕು ಹೇಳಿದ್ದಾರೆ. ಆಗಸ್ಟ್ 22 ರಂದು, ಸೋನಾಲಿ ತನ್ನ ಕಿರಿಯ ಅಳಿಯ ಅಮನ್‌ಗೆ ಕರೆ ಮಾಡಿ, ಸುಧೀರ್ ತನಗೆ ಆಹಾರದಲ್ಲಿ ಏನೋ ಹಾಕಿದ್ದಾನೆ. ಇದರಿಂದ ನಾನು ವಿಚಲಿತಳಾಗಿದ್ದೇನೆ ಎಂದು ಹೇಳಿದ್ದಳು. ಮೂರು ವರ್ಷಗಳ ಹಿಂದೆ ಹಿಸಾರ್‌ನಲ್ಲಿನ ಮನೆಯಲ್ಲಿ ಅಮಲು ಪದಾರ್ಥ ಬೆರೆಸಿದ ಆಹಾರವನ್ನು ಸೋನಾಲಿಗೆ ನೀಡಿದ್ದ. ಆಕೆಗೆ ಪ್ರಜ್ಞೆ ತಪ್ಪಿದಾಗ ಅವಳ ಮೇಲೆ ಅತ್ಯಾಚಾರ ಎಸಗಿ ವಿಡಿಯೋ ಕೂಡ ಮಾಡಿದ್ದ. ಈ ವಿಡಿಯೋವನ್ನು ತೋರಿಸಿ ಆಕೆಗೆ ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದ ಆ ಬಳಿಕವೂ ಹಲವು ಬಾರಿ ಅತ್ಯಾಚಾರ ಮಾಡಿದ್ದ ಎಂದು ಸಹೋದರ ರಿಂಕು ಆರೋಪಿಸಿದ್ದರು. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ