ಮಂಗಳವಾರ, ಅಕ್ಟೋಬರ್ 3, 2023
Galaxy S23 FE: ಸ್ಯಾಮ್ಸಂಗ್ ಗ್ಯಾಲಕ್ಸಿ S23 ಎಫ್​ಇ ಸ್ಮಾರ್ಟ್​ಫೋನ್ ಅ.4 ರಂದು ಬಿಡುಗಡೆ!-ಜಿಂಬಾಬ್ವೆಯಲ್ಲಿ ವಿಮಾನ ಪತನ ; ಭಾರತದ ಕೋಟ್ಯದೀಶ್ವರ ಹಾಗೂ ಗಣಿ ಉದ್ಯಮಿ ಮತ್ತು ಅವರ ಪುತ್ರ ದುರ್ಮರಣ!-ಸಂಕ್ರಾಂತಿ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ; ಸಿಪಿ ಯೋಗೇಶ್ವರ್ ಬಾಂಬ್-ದಿಗ್ಗಜ ಮಾಜಿ ಓಟಗಾರ್ತಿ ಪಿ.ಟಿ ಉಷಾರವರ ರಾಷ್ಟ್ರೀಯ ದಾಖಲೆ ಸರಿಗಟ್ಟಿ ಪದಕ ಸುತ್ತಿಗೇರಿದ ವಿತ್ಯಾ!-ನೀವು ಹೆದರಿಸದರೆ ಮಾತ್ರಕ್ಕೆ ನಾನು ಹೆದರಲ್ಲ ದೇವೇಗೌಡರಿಗೆ ಡಿಕೆಶಿ ಟಾಂಗ್!-ಜಿಪಿಎಸ್ ಮ್ಯಾಪ್ ನೋಡಿ ಕಾರನ್ನು ಚಲಿಸುವುತ್ತಿರುವಾಗ ನದಿಗೆ ಬಿದ್ದು ಇಬ್ಬರು ವೈದ್ಯರು ಸಾವು ; ಮೂವರು ಪಾರು!-ಹೃದಯ ವಿದ್ರಾವಕ ಘಟನೆ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸೇರಿ 6 ಮಂದಿ ಹತ್ಯೆ-ಬೆಂಗಳೂರಿನ ಕಂಬಳಕ್ಕೆ ಹೇಗಿದೆ ತಯಾರಿ; ದಕ್ಷಿಣ ಕನ್ನಡ ಭಾಗದ 150 ಫುಡ್ ಸ್ಟಾಲ್ ಏರ್ಪಾಡು..!-ಪಿಯುಸಿಯಲ್ಲಿ ಅಂಕ ಕಡಿಮೆ ಬಂತೆಂದು ಮನನೊಂದು ಅಪಾರ್ಟ್‌ಮೆಂಟ್‌ನಿಂದ ಜಿಗಿದ ಬಾಲಕಿ ; ರಕ್ಷಣೆಗೆ ಧಾವಿಸಿದ ಯುವಕ - ಇಲ್ಲಿದೆ ವಿಡಿಯೋ-ಬರ್ತ್‌ಡೇ ಪಾರ್ಟಿಯಲ್ಲಿ ಡೆಕೋರೇಷನ್‌ಗೆ ಹಾಕಿದ್ದ ಹೀಲಿಯಂ ಬಲೂನ್‌ ಬ್ಲಾಸ್ಟ್‌ ; ಐವರು ಗಂಭೀರ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಸೈರಸ್ ಮಿಸ್ತ್ರಿ ಕಾರು ಅಪಘಾತದ ಸ್ಥಳದಲ್ಲೇ ಮತ್ತೊಂದು ಭೀಕರ ಆಕ್ಸಿಡೆಂಟ್: ನಾಲ್ವರು ಸಾವು

Twitter
Facebook
LinkedIn
WhatsApp
pic 5

ಮುಂಬೈ: ಟಾಟಾ ಸನ್ಸ್ ಸಂಸ್ಥೆಯ ಚೇರ್‌ಮ್ಯಾನ್‌, ಉದ್ಯಮಿ ಸೈರಸ್ ಮಿಸ್ತ್ರಿ ಅವರ ಕಾರು ಅಪಘಾತಕ್ಕೀಡಾಗಿ ಮಿಸ್ತ್ರಿ ಸಾವಿಗೀಡಾದ ಸ್ಥಳದಲ್ಲಿಯೇ ಈಗ ಮತ್ತೊಂದು ಭೀಕರ ಅಪಘಾತವಾಗಿದ್ದು, ಈ ದುರಂತದಲ್ಲಿ ನಾಲ್ವರು ಬಲಿಯಾಗಿದ್ದಾರೆ. ಕಾರೊಂದು ಐಷಾರಾಮಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸೇರಿ ಕಾರಿನಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದಾರೆ.  ಪಾಲ್‌ಗಾರ್ ಜಿಲ್ಲೆಯ ದಹನು  ಪ್ರದೇಶದ ಛರೋಟಿ ಎಂಬಲ್ಲಿ ಬರುವ ಮುಂಬೈ ಅಹ್ಮದಾಬಾದ್ ಹೈವೇಯಲ್ಲಿ ಈ ಅವಘಡ ಸಂಭವಿಸಿದೆ. 

ಮುಂಜಾನೆ 3.30ರ ಸುಮಾರಿಗೆ ಈ ಅಪಘಾತ ನಡೆದಿದ್ದು, ಕಾರು ಗುಜರಾತ್‌ನತ್ತ ಹೊರಟಿತ್ತು.  ಕಾರು ಹೆದ್ದಾರಿಗೆ ತಲುಪಿ ಛರೋಟಿ ಬಳಿಯ ಮಹಾಲಕ್ಷ್ಮಿ ದೇಗುಲದ ಸಮೀಪ ಬಂದಾಗ ಕಾರು ಚಾಲಕ  ಲೇನ್ ಬದಲಾಯಿಸಿದಾಗ ಕಾರು ಐಷಾರಾಮಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಕಾರು ಚಾಲಕ ಸೇರಿದಂತೆ ಕಾರಿನಲ್ಲಿದ್ದ ಎಲ್ಲರೂ  ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.  ಮೃತರ ಗುರುತು ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಈ ವರ್ಷದಲ್ಲಿ ಇಲ್ಲಿ ನಡೆದ ಎರಡನೇ ಅಪಘಾತ ಇದಾಗಿದೆ. ಜನವರಿ 8 ರಂದು ಕೂಡ ಇದೇ ಸ್ಥಳದಲ್ಲಿ ಸಂಭವಿಸಿದ ಅಪಘಾತದಲ್ಲಿ ಮಗು ಸೇರಿದಂತೆ ಮೂವರು ಸಾವನ್ನಪ್ಪಿದ್ದರು.  ಮಹಾಲಕ್ಷ್ಮಿ ದೇಗುಲದ ಬಳಿಯೇ ಕಂಟೈನರ್ ಟ್ರಕ್‌ಗೆ ಇವರ ಕಾರು ಡಿಕ್ಕಿ ಹೊಡೆದ ಪರಿಣಾಮ ನಲಸೊಪರ ಎಂಬ ಕುಟುಂಬ ಮೂವರು ಮೃತಪಟ್ಟಿದ್ದರು.  ಇದಕ್ಕೂ ಮೊದಲು ಕಳೆದ ವರ್ಷ ಸೆಪ್ಟೆಂಬರ್ 4 ರಂದು ಇದೇ ಸ್ಥಳದಲ್ಲಿ ನಡೆದ ಕಾರು ಅಪಘಾತದಲ್ಲಿ ಟಾಟಾ ಸನ್ಸ್ ಸಂಸ್ಥೆಯ ಚೇರ್‌ಮ್ಯಾನ್‌, ಉದ್ಯಮಿ ಸೈರಸ್ ಮಿಸ್ತ್ರಿ ಸಾವನ್ನಪ್ಪಿದ್ದರು. 

ಈ ಸ್ಥಳದಲ್ಲಿ ಒಂದೇ ವರ್ಷದಲ್ಲಿ 26 ಸಾವು

ಟಾಟಾ ಸನ್ಸ್ ಮಾಜಿ ಚೇರ್ಮೆನ್ ಸೈರಸ್ ಮಿಸ್ತ್ರಿ ಅಪಘಾತದಲ್ಲಿ ನಿಧನರಾದ ವಿಚಾರ ದೇಶದಲ್ಲಿನ ರಸ್ತೆ ಸುರಕ್ಷತೆ ಕುರಿತು ಹೊಸ ಚರ್ಚೆ ಹುಟ್ಟು ಹಾಕಿತ್ತು.  ಸೀಟ್ ಬೆಲ್ಟ್, ವೇಗ, ರಸ್ತೆ ನಿಯಮ ಸೇರಿದಂತೆ ಹಲವು ವಿಚಾರಗಳು ಚರ್ಚೆಯಾಗುತ್ತಲೇ ಇದೆ. ಇದೀಗ ಸರ್ಕಾರದ ಅಧಿಕೃತ ದಾಖಲೆಯೊಂದು ಬಿಡುಗಡೆಯಾಗಿದೆ. ಈ ದಾಖಲೆ ಪ್ರಕಾರ ಸೈರಸ್ ಮಿಸ್ತ್ರಿ ಕಾರು ಅಪಘಾತವಾದ ಈ ಸ್ಥಳದಲ್ಲೇ ಹಾಗೂ ಈ  ರಸ್ತೆಯಲ್ಲಿ ಒಂದು ವರ್ಷದಲ್ಲಿ 26 ಮಂದಿ ನಿಧನರಾಗಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಿಸ್ತ್ರಿ ಅಪಘಾತವಾದ ಸ್ಥಳ ಸೇರಿದಂತೆ 100 ಕಿ.ಮಿ ವ್ಯಾಪ್ತಿಯಲ್ಲಿ ಒಂದು ವರ್ಷದಲ್ಲಿ 60 ಮಂದಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇನ್ನು ಮಿಸ್ತ್ರಿ ಅಪಘಾತವಾದ ಸ್ಥಳದಲ್ಲೇ 25 ಗಂಭೀರ ಅಪಘಾತ ಸಂಭವಿಸಿ 26 ಮಂದಿ ಸಾವನ್ನಪ್ಪಿದ್ದಾರೆ.  ಮುಂಬೈ ಅಹಹಮ್ಮದಾಬಾದ್(mumbai ahmedabad highway) ಹೆದ್ದಾರಿಯ  ಥಾಣೆಯ ಘೋದ್‌ಬಂದರ್ ಹಾಗೂ ಪಾಲ್ಗರ್‌ನ ದಪ್ಚಾರಿ ವಲಯದಲ್ಲಿ ಕಳೆದ ಒಂದು ವರ್ಷದಲ್ಲಿ 262 ಅಪಘಾತಗಳು ಸಂಭವಿಸಿದೆ. ಈ ಎಲ್ಲಾ ಅಪಘಾತಗಳು ಸೈರಸ್ ಮಿಸ್ತ್ರಿ ಅಪಘಾತ ನಡೆದ 100 ಕಿ.ಮೀ ವ್ಯಾಪ್ತಿಯಲ್ಲಿ ನಡಿದೆ. ಈ ಅಪಘಾತದಲ್ಲಿ 62 ಮಂದಿ ಮೃತಪಟ್ಟಿದ್ದರೆ, 192 ಮಂದಿ ಗಾಯಗೊಂಡಿದ್ದಾರೆ. 

ಮಿಸ್ತ್ರಿ ಅವಘಾತವಾದ ಸ್ಥಳದಲ್ಲೇ 26 ಮಂದಿ ಮೃತಪಟ್ಟಿದ್ದಾರೆ.  ಅತೀ ಹೆಚ್ಚಿನ ಅಪಘಾತಗಳು ಮುಂಬೈ ಅಹಹಮ್ಮದಾಬಾದ್ ಹೆದ್ದಾರಿಯಲ್ಲಿ ನಡೆಯುತ್ತಿದೆ. ಈ ಹೆದ್ದಾರಿ ಅವೈಜ್ಞಾನಿಕವಾಗಿದೆ ಅಷ್ಟೇ ಅಲ್ಲ ನಿರ್ವಹಣೆ ಕೂಡ ಸೂಕ್ತವಾಗಿಲ್ಲ. ಸೂಚನಾ ಫಲಕಗಳಿಲ್ಲ. ಸ್ಪೀಡ್ ಕಂಟ್ರೋಲ್‌ಗಳಿಲ್ಲ. ಅಲರ್ಟ್ ಹಂಪ್ಸ್‌ಗಳಿಲ್ಲ. ಹೆದ್ದಾರಿಯಲ್ಲಿ ಇರಬೇಕಾದ ಯಾವದೇ ಸಿಗ್ನಲ್, ಸೂಚನಾ ಫಲಕಗಳು ಸೇರಿದಂತೆ ಕನಿಷ್ಠ ನಿರ್ವಹಣೆ ಈ ಹೆದ್ದಾರಿಯಲ್ಲಿ ಇಲ್ಲ. ಇದರಿಂದ ಅಪಾಘಾತಗಳ ಸಂಖ್ಯೆ ಹೆಚ್ಚಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ