ದ.ಕ , ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಮಹಿಳೆಯರಿಗೆ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ – ಸುನಿಲ್ ಕುಮಾರ್
ದ.ಕ , ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಮಹಿಳೆಯರಿಗೆ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ – ಸುನಿಲ್ ಕುಮಾರ್
ಬೆಂಗಳೂರು: ಯುವಕನೊಬ್ಬ ರೈಲಿನಲ್ಲಿ ಪ್ರಯಾಣಿಸುವಾಗ ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ಹೋಗಿ ರೈಲಿನಿಂದ ಕೆಳಗೆ ಬಿದ್ದು, ಅಸುನೀಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಮಂಡ್ಯ ಮೂಲದ ಅಭಿಷೇಕ್ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಮೃತಪಟ್ಟ ನತದೃಷ್ಟ ಯುವಕ. ಬೆಂಗಳೂರಿನ ಗಾಂಧಿನಗರದ ಬಾರ್ & ರೆಸ್ಟೋರೆಂಟ್ ನಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಅಭಿಷೇಕ್ ರೈಲಿನಲ್ಲಿ ಪ್ರಯಾಣಿಸುವಾಗ ಸೆಲ್ಫೀ ಕ್ಲಿಕ್ಕಿಸಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ. ಆತನ ಮೃತದೇಹ 5 ದಿನಗಳ ಬಳಿಕ ಶ್ರೀರಂಗಪಟ್ಟಣದ ಬಳಿ ಪತ್ತೆಯಾಗಿದೆ.
ಊರಿಗೆ ಹೋಗಿ ಬರುವುದಾಗಿ ಸ್ನೇಹಿತರ ಜೊತೆ ನವೆಂಬರ್ 6ರಂದು ಮಂಡ್ಯಕ್ಕೆ ಬೆಂಗಳೂರಿನಿಂದ ಹೊರಟಿದ್ದ. ರಾತ್ರಿ 2 ಗಂಟೆಯ ಸಮಯದಲ್ಲಿ ರೈಲಿನ ಬಾಗಿಲಿನಲ್ಲಿ ನಿಂತು ಸೆಲ್ಫೀ ಕ್ಲಿಕ್ಕಿಸಿಕೊಳ್ಳುವಾಗ ಅಭಿಷೇಕ್ ರೈಲಿನಿಂದ ಕೆಳಗೆ ಬಿದ್ದು, ಲೋಕಪಾವನಿ ನದಿಗೆ ಬಿದ್ದಿದ್ದಾನೆ. ಸತತ ಮಳೆಯಿಂದಾಗಿ ನದಿಯ ರಭಸ ಹೆಚ್ಚಾಗಿರುವುದರಿಂದ ಅಭಿಷೇಕ್ ಮೃತದೇಹ ಸುಮಾರು 6 ರಿಂದ 7 ಕಿ.ಮೀ ವರೆಗೂ ಕೊಚ್ಚಿ ಹೋಗಿದೆ. ಅಭಿಷೇಕ್ ಮೃತದೇಹಕ್ಕಾಗಿ ಉಪ್ಪಾರಪೇಟೆ, ರೈಲ್ವೆ, ಮಂಡ್ಯ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು. ಆ ಬಳಿಕ ನ.14 ರಂದು ಶ್ರೀರಂಗಪಟ್ಟಣ ಬಳಿ ಅಭಿಷೇಕ್ ಶವ ಪತ್ತೆ ಪತ್ತೆಯಾಗಿದೆ.
ನ.10 ರಂದು ಉಪ್ಪಾರಪೇಟೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ದ.ಕ , ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಮಹಿಳೆಯರಿಗೆ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ – ಸುನಿಲ್ ಕುಮಾರ್
ವಾಟ್ಸ್ಆ್ಯಪ್ನಿಂದ ಹೊಸ ಅಪ್ಡೇಟ್: ಇನ್ಮುಂದೆ ಸ್ಕ್ರೀನ್ ಶೇರ್ ಮಾಡಬಹುದು