
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ಬೆಂಗಳೂರು: ನಿರಂತರವಾಗಿ ತಂದೆಯಿಂದಲೇ ದೈಹಿಕ ಶೋಷಣೆಗೆ ಒಳಗಾಗುತ್ತಿದ್ದ ಬಿಹಾರದ ಮೂಲದ ಅಪ್ರಾಪ್ತ ಬಾಲಕಿ ಮಾನಸಿಕಿಕವಾಗಿ ನೊಂದು ಆತನಿಂದ ತಪ್ಪಿಸಿಕೊಂಡು ಓಡಿ ಬಂದು ಬೆಂಗಳೂರಿನ ಸೆಕ್ಸ್ ದಂಧೆಕೋರರ ಕೈಗೆ ಸಿಕ್ಕಿ, ಬಾಲಕಿಯನ್ನು ಕಳ್ಲಸಾಗಾಣಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಪೊಲೀಸರು ರಕ್ಷಿಸಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಶುಕ್ರವಾರ (ಜುಲೈ 9) ಬಿಹಾರಕ್ಕೆ ತೆರಳುವ ದಾನಾಪುರ ಎಕ್ಸ್‌ಪ್ರೆಸ್ ರೈಲಿನಲ್ಲಿ ಆಕೆಯನ್ನು ಅಪರಿಚಿತ ಸ್ಥಳಕ್ಕೆ ಸಾಗಿಸುತ್ತಿದ್ದಾಗ ಕೃಷ್ಣರಾಜಪುರಂ ರೈಲ್ವೆ ನಿಲ್ದಾಣದಲ್ಲಿ ಶೋಧ ನಡೆಸಿದ್ದ ವೇಳೆ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ 10.30 ರ ಸುಮಾರಿನಲ್ಲಿ ರೈಲಿನಲ್ಲಿ ಶೋಧ ನಡೆಸುತ್ತಿದ್ದಾಗ 15 ವರ್ಷದ ಬಾಲಕಿಯನ್ನು ಗಮನಿಸಿದ ಅಧಿಕಾರಿಗಳು ಸಂಶಯಗೊಂಡು ಆಕೆಯನ್ನು ಮಾತನಾಡಿಸಿದ್ದಾರೆ. ಈ ವೇಳೆ ಬಾಲಕಿ ತುಂಬಾ ಭಯಭೀತಳಾಗಿದ್ದಳು ಮತ್ತು ಮಾತನಾಡಲು ತಡವರಿಸುತ್ತಿದ್ದಳು. ತದನಂತರ ಆಕೆ ನೀಡಿದ ಮಾಹಿತಿ ಮೇರೆಗೆ ಕೂಡಲೇ ಕಾರ್ಯ ಪ್ರವೃತ್ತರಾದ ಅಧಿಕಾರಿಗಳು ಆಕೆಯನ್ನು ರಕ್ಷಿಸಿದ್ದಾರೆ.
‘ಬಿಹಾರದ ಪೂರ್ವಿ ಚಂಪಾರನ್ (ಮೋತಿಹಾರಿ) ನಿವಾಸಿ ಎಂದು ಹೇಳಿಕೊಂಡ ಬಾಲಕಿ ತನ್ನ ತಂದೆಯಿಂದ ಪದೇ ಪದೇ ನಡೆಯುವ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದಿಂದಾಗಿ ಬೇಸತ್ತು ಮನೆಯಿಂದ ಓಡಿಹೋಗಿದ್ದಳು. ತಂದೆಯಿಂದ ದೈಹಿಕ ಶೋಷಣೆಗೆ ಒಳಗಾಗುವ ವಿಷಯ ಆಕೆಯ ತಾಯಿಗೂ ತಿಳಿದಿತ್ತಾದರೂ ಆಕೆ ಮಧ್ಯಪ್ರವೇಶಿಸುತ್ತಿರಲಿಲ್ಲ. ಅಷ್ಟೇ ಅಲ್ಲದೆ ಅಪ್ರಾಪ್ತೆಯಾದ ಆಕೆಯನ್ನು ಮದುವೆ ಮಾಡಿಸಲು ಆಕೆಯ ಪೋಷಕರು ಸಿದ್ಧತೆ ನಡೆಸಿದ್ದರು. ಇದರಿಂದ ಬೇಸರಗೊಂಡ ಆಕೆ ಮನೆಯಿಂದ ಪರಾರಿಯಾಗಿದ್ದಳು.
ಬೆಂಗಳೂರಿಗೆ ಬಂದಿದ್ದ ಆಕೆಗೆ ಕೆಲ ದುಷ್ಕರ್ಮಿಗಳು ಡ್ರಗ್ಸ್ ನೀಡಿ ಆಕೆಯನ್ನು ಅಪಹರಿಸಿದ್ದರು. ತದನಂತರ ಕಂಟೈನರ್;ನಲ್ಲಿಟ್ಟು ಆಕೆಯನ್ನು ಸುಮಾರು 1 ತಿಂಗಳ ಕಾಲ ಪೀಡಿಸಿದ್ದರು. ಬಳಿಕ ರೈಲಿನಲ್ಲಿ ಬೇರೊಂದು ಸ್ಥಳಕ್ಕೆ ಕಳ್ಳಸಾಗಣೆ ಮಾಡುವಾಗ ಪೋಲೀಸ್ ತಂಡದ ಸಿಬ್ಬಂದಿಗಳು ಆಕೆಯನ್ನು ಗುರುತಿಸಿ ರಕ್ಷಣೆ ಮಾಡಿದ್ದಾರೆ.
ಪ್ರಸ್ತುತ ಬಾಲಕಿಯನ್ನು ಕೆಎಸ್‌ಆರ್ ರೈಲ್ವೆ ನಿಲ್ದಾಣಕ್ಕೆ ಕರೆದೊಯ್ಯಲಾಗಿದ್ದು, ಆಕೆಯ ಸುರಕ್ಷತೆಗಾಗಿ ಡಾನ್ ಬಾಸ್ಕೊ ಹೋಮ್‌ಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕೃತ ಮೂಲಗಳ ತಿಳಿಸಿವೆ.
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
108MP ಕ್ಯಾಮೆರಾದ ಗ್ಯಾಲಕ್ಸಿ F54 5G ಅನಾವರಣ ಮಾಡಿದ ಸ್ಯಾಮ್ಸಂಗ್