ಭಾನುವಾರ, ಮೇ 26, 2024
ಹೈದರಾಬಾದನ್ನು 8 ವಿಕೆಟ್ ಗಳಿಂದ ಸೋಲಿಸಿ ಚಾಂಪಿಯನ್ಶಿಪ್ ಪಟ್ಟಕ್ಕೆ ಮುತ್ತಿಕ್ಕಿದ ಕೆಕೆಆರ್..!-ಜೂನ್ 1 ರಿಂದ ಐದು ದಿನ ಮದ್ಯ ಮಾರಾಟ ಬಂದ್..!-ನಾನು ಕೈಹಿಡಿದು ಬೆಳೆಸಿದವರೇ ನನ್ನನ್ನು ವಜಾ ಮಾಡಲು ಶಿಫಾರಸ್ಸು ಮಾಡಿದ್ದಾರೆ; ರಘುಪತಿ ಭಟ್-ಚುನಾವಣೆ ಗೆದ್ದು ಬಿಜೆಪಿಯ ಶಾಸಕನಾಗುತ್ತೇನೆ; ಜಗದೀಶ್ ಶೆಟ್ಟರ್ ನನಗೆ ಮಾದರಿ - ರಘುಪತಿ ಭಟ್-ಎಸ್ಆರ್ ಹೆಚ್ ತಂಡದ ಮಾಲಕಿ ನ್ಯಾಷನಲ್ ಕ್ರಶ್ ಕಾವ್ಯ ಮಾರನ್ ಹಿನ್ನೆಲೆ ಏನು..!-ಉಡುಪಿ: ನಡು ರಸ್ತೆಯಲ್ಲೇ ಎರಡು ತಂಡದ ಯುವಕರ ನಡುವೆ ಗ್ಯಾಂಗ್ ವಾರ್; ಇಲ್ಲಿದೆ ವಿಡಿಯೋ-ಬಸ್ಸನ್ನು ಚಲಾಯಿಸುವಾಗಲೇ ಛತ್ರಿ ಹಿಡಿದು ವಿಡಿಯೋ ಮಾಡಿದ ಡ್ರೈವರ್; ನಿರ್ವಾಹಕಿ ಮತ್ತು ಚಾಲಕ ಸಸ್ಸೆಂಡ್..!-ಬಸ್ಸನ್ನು ಚಲಾಯಿಸುವಾಗಲೇ ಛತ್ರಿ ಹಿಡಿದು ವಿಡಿಯೋ ಮಾಡಿದ ಡ್ರೈವರ್; ನಿರ್ವಾಹಕಿ ಮತ್ತು ಚಾಲಕ ಸಸ್ಸೆಂಡ್..!-ಪೋರ್ಷೆ ಕಾರು ಅಪಘಾತ ಪ್ರಕರಣ: ಅಪ್ರಾಪ್ತನ ತಂದೆಗೆ ನ್ಯಾಯಾಂಗ ಬಂಧನ ; ಇಬ್ಬರು ಪೊಲೀಸರು ಅಮಾನತು..!-miyazaki mango: ಜಗತ್ತಿನಲ್ಲಿ ದುಬಾರಿ ಮಾವಿನ ಹಣ್ಣಿನ ಪಟ್ಟಿಯಲ್ಲಿ ಮಿಯಾಜಕಿ ಹಣ್ಣಿನ ವಿಶೇಷತೆ ಏನು..?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಸುಬ್ರಹ್ಮಣ್ಯ: ಪತಿಗೆ ಪತ್ನಿಯ ನಗ್ನ ಫೋಟೊ, ವಿಡಿಯೋ ಕಳುಹಿಸಿದ ಮಾಜಿ ಪ್ರಿಯಕರ.

Twitter
Facebook
LinkedIn
WhatsApp
ಸುಬ್ರಹ್ಮಣ್ಯ: ಪತಿಗೆ ಪತ್ನಿಯ ನಗ್ನ ಫೋಟೊ, ವಿಡಿಯೋ ಕಳುಹಿಸಿದ ಮಾಜಿ ಪ್ರಿಯಕರ.

ಸುಬ್ರಹ್ಮಣ್ಯ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎರಡು ತಿಂಗಳ ಬಳಿಕ ಪತಿಯ ಮೊಬೈಲಿಗೆ ಪತ್ನಿಯ ನಗ್ನ ಫೋಟೋ ಬಂದು ಮದುವೆ ಮುರಿದುಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ನಡೆದಿದೆ.
ಹೌದು, ಮೇ ತಿಂಗಳಿನಲ್ಲಿ ವಿವಾಹವಾಗಿದ್ದ ಯುವತಿಯ ಪತಿಗೆ, ಮಾಜಿ ಪ್ರಿಯಕರ ನಗ್ನ ಹಾಗೂ ಅಶ್ಲೀಲ ಫೋಟೊಗಳನ್ನು ಕಳುಹಿಸಿದ್ದು, ವಿಚ್ಚೇದನದ ಹಂತಕ್ಕೆ ತಲುಪಿದೆ. ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್​ ಠಾಣಾ ವ್ಯಾಪ್ತಿಯ ವಿಜೇಶ್ ಎಂಬಾತ ತನ್ನ ಮಾಜಿ ಪ್ರಿಯತಮೆಯ ಪೋಟೊಗಳನ್ನು ಆಕೆಯ ಪತಿಗೆ ಕಳುಹಿಸಿದ್ದು, ಸಂಸಾರಕ್ಕೆ ಕೊಲ್ಲಿ ಇಟ್ಟಾಂತಾಗಿದೆ. ಸುಮಾರು 5 ವರ್ಷಗಳ ಹಿಂದಿನ ಪೋಟೊವನ್ನು ಬಳಸಿ ವಿಜೇಶ್ ಈ ಕೃತ್ಯವನ್ನು ಎಸಗಿರುವುದಾಗಿ ನೊಂದ ಯುವತಿ ಆರೋಪಿಸಿದ್ದಾರೆ.

ನೊಂದ ಯುವತಿ ಹಾಗೂ ವಿಜೇಶ್ ಈ ಹಿಂದೆ ಪರಸ್ಪರ ಪ್ರೀತಿಸುತ್ತಿದ್ದರು. 2016 ನವೆಂಬರ್ ತಿಂಗಳಲ್ಲಿ ಯುವತಿ ಪುತ್ತೂರಿಗೆ ಕೆಲಸಕ್ಕೆ ತೆರಳಿದ್ದಾಗ ಆಕೆಯನ್ನು ಚಹಾ ಕುಡಿಯಲು ಹೋಟೆಲ್‌ಗೆ ಹೋಗೋಣ ಎಂದು ವಿಜೇಶ್ ಒತ್ತಾಯ ಮಾಡಿದ್ದಾನೆ. ಬಳಿಕ ವಿಜೇಶ್ ತನ್ನ ಆಲ್ಟೋ ಕಾರಿನಲ್ಲಿ ಯುವತಿಯನ್ನು ಪುತ್ತೂರಿನ ಹೋಟೆಲ್‌ಗೆ ಕರೆದುಕೊಂಡು ಹೋಗದೆ ಬಲವಂತವಾಗಿ ಮಂಗಳೂರಿನ ಸುರತ್ಕಲ್ ಬಳಿಯ ಖಾಸಗಿ ಹೋಟೆಲ್​ಗೆ ಕರೆದೊಯ್ದಿದ್ದಾನೆ. ನಂತರ ಆಕೆಯ ಇಚ್ಛೆಗೆ ವಿರುದ್ಧವಾಗಿ ದೈಹಿಕ ಸಂಪರ್ಕ ಮಾಡಿ, ಆಕೆಯ ನಗ್ನ ಸ್ಥಿತಿಯಲ್ಲಿನ ವಿಡಿಯೋ ಮತ್ತು ಫೋಟೋವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಮೇ 3, 2021 ರಂದು ಈ ಯುವತಿ ಬೇರೆ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ಇದಾಗಿ ಕೆಲ ದಿನಗಳ ಬಳಿಕ ಆಕೆಯ ಮಾಜಿ ಪ್ರಿಯಕರ ವಿಜೇಶನು ಯುವತಿಯ ಪತಿಗೆ ಈ ಹಿಂದೆ ತೆಗೆದಿದ್ದ ಆಕೆಯ ನಗ್ನ ಫೋಟೋಗಳನ್ನು ಕಳುಹಿಸಿದ್ದಾನೆ. ಇದರಿಂದ ನವ ವಿವಾಹಿತರ ಸಂಸಾರದಲ್ಲಿ ಬಿರುಕು ಉಂಟಾಗಿದೆ. ಮಾತ್ರವಲ್ಲ, ಆಕೆಯ ಪತಿಯೂ ವಿಚ್ಛೇದನಕ್ಕೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಚುನಾವಣೆ ಗೆದ್ದು ಬಿಜೆಪಿಯ ಶಾಸಕನಾಗುತ್ತೇನೆ; ಜಗದೀಶ್ ಶೆಟ್ಟರ್ ನನಗೆ ಮಾದರಿ - ರಘುಪತಿ ಭಟ್

ಚುನಾವಣೆ ಗೆದ್ದು ಬಿಜೆಪಿಯ ಶಾಸಕನಾಗುತ್ತೇನೆ; ಜಗದೀಶ್ ಶೆಟ್ಟರ್ ನನಗೆ ಮಾದರಿ – ರಘುಪತಿ ಭಟ್

ಚುನಾವಣೆ ಗೆದ್ದು ಬಿಜೆಪಿಯ ಶಾಸಕನಾಗುತ್ತೇನೆ; ಜಗದೀಶ್ ಶೆಟ್ಟರ್ ನನಗೆ ಮಾದರಿ – ರಘುಪತಿ ಭಟ್. ಪದವೀಧರ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಮಾಜಿ ಶಾಸಕ ರಘುಪತಿ ಭಟ್‌ ಅವರನ್ನು ಪಕ್ಷದಿಂದ ಆರು ವರ್ಷ ಉಚ್ಚಾಟಿಸಲಾಗಿದೆ.

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು