#HinduSherni.
— Deepak Prabhu (@ragiing_bull) February 5, 2023
Never imagined that she could lift the tyre with such consummate ease. 😍😍👍👍👍💪💪💪 pic.twitter.com/thLPtQIRTE
- ಕೌತಕದ ಜಗತ್ತು
- 11:16 ಫೂರ್ವಾಹ್ನ
- ಫೆಬ್ರವರಿ 7, 2023
ಸೀರೆಯುಟ್ಟು ಜಿಮ್ ವರ್ಕೌಟ್ ಮಾಡುತ್ತಿರುವ ಮಹಿಳೆಯ ವಿಡಿಯೋ ವೈರಲ್; ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ

Viral Video : ಜಿಮ್ಗೆ ನೀವು ಸೇರಿದರೆ ಮೊದಲು ಖರೀದಿಸುವುದೇ ವರ್ಕೌಟ್ಗೆ ಅನುಕೂಲವಾಗುವಂಥ ಟೀ ಶರ್ಟ್, ಪ್ಯಾಂಟ್ ಇತ್ಯಾದಿ. ಏಕೆಂದರೆ ಜಿಮ್ ಸಾಧನಗಳಲ್ಲಿ ವರ್ಕೌಟ್ ಮಾಡುವಾಗ ನೀವು ಧರಿಸಿದ ಬಟ್ಟೆಗಳು ಆದಷ್ಟು ಅನುಕೂಲಕಾರಿಯಾಗಿ ಆರಾಮದಾಯಕವಾಗಿರಬೇಕು. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಇಲ್ಲಿರುವ ಮಹಿಳೆಯು ಸೀರೆಯುಟ್ಟು ಎಷ್ಟೊಂದು ನಿರಾಯಾಸವಾಗಿ ಉತ್ಸಾಹದಿಂದ ವರ್ಕೌಟ್ ಮಾಡುತ್ತಿದ್ದಾಳೆ.
ಫಿಟ್ನೆಸ್ ಪ್ರಿಯರನ್ನು ಈ ವಿಡಿಯೋ ಬಹಳ ಆಕರ್ಷಿಸುತ್ತಿದೆ. ಇಂಥ ಹಾರ್ಡ್ಕೋರ್ ವರ್ಕೌಟ್ ಅನ್ನು ಈಕೆ ಸೀರೆಯುಟ್ಟು ಮಾಡುತ್ತಿರುವುದನ್ನು ನೋಡಿ ಅಚ್ಚರಿಯಾಗುತ್ತಿದೆ ಎಂದು ಕೆಲವರು. ಈ ವಿಡಿಯೋ ರೀಲ್ಗಾಗಿ ಮಾಡಿರುವುದು ಎಂದು ಇನ್ನೂ ಕೆಲವರು. ಏನೇ ಮಾಡಿದರೂ ಶ್ರಮ ಅಭ್ಯಾಸವಿಲ್ಲದೆ ಆಗುವುದೆ? ಸೀರೆಯೊಂದನ್ನೇ ಯಾಕೆ ನೋಡುತ್ತಿದ್ದೀರಿ ಎಂದು ಹಲವರು.
ಈಗಾಗಲೇ ಈ ವಿಡಿಯೋ ಅನ್ನು 21,000ಕ್ಕೂ ಹೆಚ್ಚು ಜನರು ನೋಡಿದ್ದಾರೆ. ನೂರಾರು ಜನರು ರೀಟ್ವೀಟ್ ಮಾಡಿದ್ದಾರೆ. ಸೀರೆಯಲ್ಲಿ ಕೂಡ ಇವರ ಉತ್ಸಾಹ ಅದ್ಭುತ ಎಂದಿದ್ದಾರೆ ಒಬ್ಬರು. ಫ್ಯಾಷನ್ ವಿಷಯವಾಗಿ ಹೆಣ್ಣುಮಕ್ಕಳನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಇನ್ನೊಬ್ಬರು ಹೇಳಿದ್ದಾರೆ.
ನೀವು ಬೆಣ್ಣೆ, ಚಿಕನ್, ಐಸ್ಕ್ರೀನ್, ಜಾಮೂನ್ ತಿಂದಮೇಲೆ ಈಕೆ ಹೀಗೆ ವರ್ಕೌಟ್ ಮಾಡಲು ಬಂದಿರಬೇಕು ಎಂದಿದ್ದಾರೆ ಮತ್ತೊಬ್ಬರು. ಹೆಣ್ಣುಮಕ್ಕಳ ಸಾಮರ್ಥ್ಯವನ್ನು ಎಂದೂ ಕಡೆಗಣಿಸಬೇಡಿ. ಅವರು ನಿಜಕ್ಕೂ ಶಕ್ತಿವಂತರು ಎಂದಿದ್ಧಾರೆ ಮಗದೊಬ್ಬರು. ಈ ಹೆಣ್ಣುಸಿಂಹವು ತನ್ನ ಶಕ್ತಿತೋರಿಸಲು ಸೀರೆಯನ್ನೇ ಉಡಬೇಕಿರಲಿಲ್ಲ ಎಂದಿದ್ದಾರೆ ಇನ್ನೂ ಒಬ್ಬರು.
ಟ್ರ್ಯಾಕ್ಟರ್ ಚಕ್ರಗಳು ಅಷ್ಟು ಭಾರವಾಗಿರುವುದಿಲ್ಲ. ಇರಲಿ ಈಕೆ ಹೀಗೆ ಸೀರೆಯುಟ್ಟಾದರೂ ವರ್ಕೌಟ್ ಮಾಡುತ್ತಿದ್ದಾಳೆ ಅದಕ್ಕೆ ಪೂರ್ಣ ಅಂಕಗಳನ್ನು ಕೊಡೋಣ ಎಂದು ಒಬ್ಬರು ಹೇಳಿದ್ದಾರೆ. ಅವಳ ಉತ್ಸಾಹಕ್ಕೆ ಸಲಾಮ್ ಎಂದು ಮತ್ತೊಬ್ಬರು.