जमुई सदर अस्पताल में महिला स्वास्थ्य कर्मी को दिनदहाड़े युवक ने ज़बरदस्ती किस किया, CCTV में क़ैद हुई घटना. महिला की शिकायत पर FIR दर्ज, महिला सुरक्षा पर उठाये गम्भीर सवाल. pic.twitter.com/uDC2wZ3cMR
— Utkarsh Singh (@UtkarshSingh_) March 13, 2023
- ರಾಷ್ಟ್ರೀಯ
- 8:45 ಅಪರಾಹ್ನ
- ಮಾರ್ಚ್ 14, 2023
ಸೀರಿಯಲ್ ಕಿಸ್ಸರ್: ಜಮುಯಿಯಲ್ಲಿ ಫೋನ್‌ನಲ್ಲಿ ಮಾತಾಡ್ತಾ ನಿಂತಿದ್ದ ಮಹಿಳೆಗೆ ಮುತ್ತಿಕ್ಕಿ ಪರಾರಿ; ವೀಡಿಯೊ ವೈರಲ್

ಪಾಟ್ನಾ: ರಸ್ತೆ ಬದಿ ಫೋನ್‌ನಲ್ಲಿ ಮಾತನಾಡುತ್ತಾ ನಿಂತಿದ್ದ ಮಹಿಳೆಯೊಬ್ಬರಿಗೆ ಕಾಮುಕನೋರ್ವ ಓಡಿಬಂದು ಮಹಿಳೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಮುತ್ತಿಕ್ಕಿದ ಆಘಾತಕಾರಿ ಘಟನೆ ಬಿಹಾರದ ಜಮುಯಿಯಲ್ಲಿ (Jamui) ನಡೆದಿದೆ. ಈ ಕಾಮುಕನ ಅವಾಂತರ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಜನ ಆಕ್ರೋಶ ವ್ಯಕ್ತಪಡಿಸಿದ್ದು ಈ ಸೀರಿಯಲ್ ಕಿಸ್ಸರ್ ಬಂಧನಕ್ಕೆ ಆಗ್ರಹಿಸಿದ್ದಾರೆ.
ಹೀಗೆ ರೋಡ್ ರೋಮಿಯೋನಿಂದ ಕಿರುಕುಳಕ್ಕೊಳಗಾದ ಮಹಿಳೆ ಸ್ಥಳೀಯ ಆರೋಗ್ಯ ಕಾರ್ಯಕರ್ತೆಯಾಗಿದ್ದು(health worker), ಅವರು ಜಮುಯಿಯ ಸದರ್ ಆಸ್ಪತ್ರೆಯ ಹೊರಗೆ ರಸ್ತೆಯಲ್ಲಿ ನಿಂತುಕೊಂಡು ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದೆ. ಮಹಿಳೆ ಆತನಿಂದ ಬಿಡಿಸಿಕೊಳ್ಳಲು ಯತ್ನಿಸಿದರಾದರೂ ಸಾಧ್ಯವಾಗಿಲ್ಲ ಕಾಮುಕ ಆಕೆಯನ್ನು ಒತ್ತಾಯಪೂರ್ವಕವಾಗಿ ಸುಧೀರ್ಘವಾಗಿ ಚುಂಬಿಸಿ ಅಲ್ಲಿಂದ ಓಡಿ ಹೋಗಿದ್ದಾನೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ (Social Media)ವೈರಲ್ ಆಗುತ್ತಿದ್ದಂತೆ ಈ ರೋಡ್ ರೋಮಿಯೋನನ್ನು ಕೂಡಲೇ ಬಂಧಿಸುವಂತೆ ಜನ ಆಗ್ರಹಿಸಿದ್ದಾರೆ.
ಈ ಅನಾಹುತದ ಸಣ್ಣ ನಿರೀಕ್ಷೆಯನ್ನು ಮಾಡಿರದ ಮಹಿಳೆ ಆತನಿಂದ ಬಿಡಿಸಿಕೊಳ್ಳಲು ಒದ್ದಾಡುವುದನ್ನು ಕಾಣಬಹುದು. ಘಟನೆ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಈ ರೋಡ್ ರೋಮಿಯೋಗಾಗಿ ಬಲೆ ಬೀಸಿದ್ದಾರೆ. ಈ ಬಗ್ಗೆ ಸುದ್ದಿಸಂಸ್ಥೆ ಆಜ್‌ತಕ್‌ನೊಂದಿಗೆ ಮಾತನಾಡಿದ ಮಹಿಳೆ ‘ಅವನು ಆಸ್ಪತ್ರೆಯ ಆವರಣಕ್ಕೆ ಏಕೆ ಬಂದನೆಂದು ನನಗೆ ತಿಳಿದಿಲ್ಲ. ನನಗೆ ಆ ಮನುಷ್ಯನ ಪರಿಚಯವೂ ಇಲ್ಲ. ನಾನು ಅವನಿಗೆ ಏನು ಮಾಡಿದೆ? ಅವನು ನನ್ನ ಮೇಲೆ ಹೀಗೆ ದೌರ್ಜನ್ಯವೆಸಗಿದಾಗ ನಾನು ವಿರೋಧಿಸಿ ಆಸ್ಪತ್ರೆಯ ಸಿಬ್ಬಂದಿಯನ್ನು ಕರೆದಿದ್ದೇನೆ. ಆದರೆ ಅಷ್ಟರಲ್ಲಾಗಲೇ ಆ ಖದೀಮ ತಪ್ಪಿಸಿಕೊಂಡಿದ್ದಾನೆ ಎಂದು ಹೇಳಿದರು.