ಸಿಹಿ ತಿನಿಸಿನ ಗಾಜಿನ ಬಾಟಲಿ ಮಗುವಿನ ಗಂಟಲಲ್ಲಿ ಸಿಲುಕಿ 3 ವರ್ಷದ ಬಾಲಕ ಸಾವು!
ಕುಷ್ಟಗಿ (ಏ.29): ಸಿಹಿ ತಿನಿಸಿನ ಗಾಜಿನ ಬಾಟಲಿ ಮಗುವಿನ ಗಂಟಲಲ್ಲಿ ಸಿಲುಕಿ ಹಾಕಿಕೊಂಡು ಮಗು ಮೃತಪಟ್ಟ ಘಟನೆ ಜರುಗಿದೆ. ಪಟ್ಟಣದ ಮದೀನಾ ಗಲ್ಲಿಯ ನಿವಾಸಿ ರಬ್ಬಾನಿ ಬಾಗೇವಾಡಿ ಅವರ ಮಗ ಮಹ್ಮದಹ್ಮದ್ ರಬ್ಬಾನಿ ಬಾಗೇವಾಡಿ (2) ಮೃತಪಟ್ಟ ಬಾಲಕನೆಂದು ಗುರುತಿಸಲಾಗಿದೆ. ಸಿಹಿ ತಿನಿಸಿನ ಬಾಟಲಿ ಖರೀದಿ ಮಾಡಿಕೊಂಡು ಸಿಹಿ ತಿನಿಸನ್ನು ಬಾಯಲ್ಲಿ ಹಾಕಿಕೊಳ್ಳುವ ಸಂದರ್ಭದಲ್ಲಿ ಕೈ ಜಾರಿ ಬಾಟಲಿ ಗಂಟಲಿನಲ್ಲಿ ಹೋಗಿರುವ ಪರಿಣಾಮವಾಗಿ ಮೃತಪಟ್ಟಿದ್ದು ಮನಕಲಕುವ ಘಟನೆಗೆ ಕುಷ್ಟಗಿ ಪಟ್ಟಣ ಸಾಕ್ಷಿಯಾಗಿದೆ.
ಸಿಹಿ ತಿಂಡಿಯ ಬಾಟಲಿಯ ಮುಚ್ಚಳವನ್ನು ಬಾಲಕ ತನ್ನ ಬಾಯಿಂದ ತೆಗೆಯಲು ಪ್ರಯತ್ನ ಮಾಡುತ್ತಿರುವಾಗ ಗಂಟಲಿನ ಅನ್ನನಾಳದಲ್ಲಿ ಅಡ್ಡ ಸಿಲುಕಿಕೊಂಡ ಪರಿಣಾಮವಾಗಿ ತೀವ್ರ ಅಸ್ವಸ್ಥಗೊಂಡಿದ್ದಾನೆ. ರಬ್ಬಾನಿ ಬಾಗೇವಾಡಿ ಗಮನಕ್ಕೆ ಬರುತ್ತಿದ್ದಂತೆ ತಕ್ಷಣವೇ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲು ತೆರಳುವ ದಾರಿ ಮಧ್ಯದಲ್ಲಿ ಬಾಲಕ ಮೃತಪಟ್ಟಿದ್ದಾನೆ.
ತಾಯಿಯ ಆಕ್ರಂದನ ಮುಗಿಲು ಮುಟ್ಟಿದ್ದು ಕಂಡು ಬಂತು: ತಾಯಿ ಮೃತಪಟ್ಟ ಬಾಲಕನನ್ನು 9 ತಿಂಗಳು ತನ್ನ ಉದರದಲ್ಲಿ ಇಟ್ಟುಕೊಂಡು ಮಗು ಹುಟ್ಟಿದ ನಂತರ ಎರಡು ವರ್ಷಗಳ ಕಾಲ ಚೆನ್ನಾಗಿ ತಿನಿಸಿ ಉಳಿಸಿ ಬೆಳೆಸಿದ್ದಳು. ಆದರೆ ಮಗುವಿನ ದುರ್ಮರಣ ಸಿಹಿ ತಿಂಡಿಯ ಸಾವುನಪ್ಪಿದ ವಿಷಯಕ್ಕೆ ಜನತೆ ದಿಗ್ಭ್ರಮೆಯನ್ನು ವ್ಯಕ್ತಪಡಿಸಿದರು.