ಭಾನುವಾರ, ಸೆಪ್ಟೆಂಬರ್ 15, 2024
20 ವರ್ಷಗಳ ಬಳಿಕ ಹುಕ್ಕೇರಿ ಪುರಸಭೆ ಕಾಂಗ್ರೆಸ್ ತೆಕ್ಕೆಗೆ-ಪ್ರಜ್ವಲ್‌ ರೇವಣ್ಣಗೆ ಶಾಕ್; ಜಾಮೀನು ಅರ್ಜಿ ವಜಾ!-ಸೋನಿಯಾ, ರಾಹುಲ್ ಗಾಂಧಿ ವಿರುದ್ಧ ಸುಳ್ಳು ಸುದ್ದಿ; ಇಬ್ಬರ ವಿರುದ್ಧ ಕೇಸ್ ದಾಖಲು-ಕೋವಿಡ್ ಹಗರಣ: ಸಿಎಂ ಕೈ ಸೇರಿದ ವರದಿ; ಮಾಜಿ ಆರೋಗ್ಯ ಸಚಿವರಿಗೆ ತಟ್ಟುತ್ತಾ ಬಿಸಿ?-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರೇಪ್ ಹೇಗಾಗುತ್ತೆ ಎಂದು ಕಂಗನಾಗೆ (Kangana Ranaut) ಕೇಳಿ; ಮಾಜಿ ಸಂಸದನ ವಿವಾದಿತ ಹೇಳಿಕೆ!-Chikkaballapur: ಟಿಟಿ - ಕಾರಿನ ಮಧ್ಯೆ ಭೀಕರ ಅಪಘಾತ; ಮೂವರ ದುರ್ಮರಣ-ಐವನ್ ಡಿಸೋಜಾ ಮನೆ ಮೇಲೆ ಕಲ್ಲುತೂರಾಟ: ಬಂಟ್ವಾಳ ಮೂಲದ ಇಬ್ಬರ ಬಂಧನ-Sarah Rahanuma: ಟಿವಿ ಪತ್ರಕರ್ತೆಯ ಶವ ಢಾಕಾ ಸರೋವರದಲ್ಲಿ ಪತ್ತೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಸಿನಿಮಾ ನಟನೆಗೂ ರಾಜಕೀಯಕ್ಕೂ ತುಂಬಾ ವ್ಯತ್ಯಾಸ ಇದೆ: ಪ್ರತಾಪ್ ಸಿಂಹ

Twitter
Facebook
LinkedIn
WhatsApp
ಸಿನಿಮಾ ನಟನೆಗೂ ರಾಜಕೀಯಕ್ಕೂ ತುಂಬಾ ವ್ಯತ್ಯಾಸ ಇದೆ: ಪ್ರತಾಪ್ ಸಿಂಹ

ಮಡಿಕೇರಿ: ಸುಮಲತಾ ಅವರ ನಟನೆ ಬಗ್ಗೆ ಬಹಳ ಗೌರವ ಇದೆ, ನಾನು ಅಂಬರೀಷ್ ಅವರ ದೊಡ್ಡ ಅಭಿಮಾನಿ. ಅವರನ್ನು ನೋಡೋದಕ್ಕೆ ಅವರ ಮನೆಗೆ ಹೋಗ್ತಿದ್ದೆ. ಸಿನಿಮಾ ನಟನೆಗೂ, ರಾಜಕೀಯಕ್ಕೂ ತುಂಬಾ ವ್ಯತ್ಯಾಸವಿದೆ ಎಂದು ಮಡಿಕೇರಿಯಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.
ನಿನ್ನೆ ನಾನು ಯಾರೋ ಒಬ್ಬರ ಪರವಾಗಿ ಮಾತನಾಡಿಲ್ಲ. ಕೆಆರ್‌ಎಸ್ ಯಾರೊಬ್ಬರ ಆಸ್ತಿ ಅಲ್ಲ. ಜಲಾಶಯಕ್ಕೆ ನನ್ನ ಕ್ಷೇತ್ರದ ಕೊಡಗಿನ ಕಾವೇರಿಯಿಂದ ನೀರು ಬರುತ್ತೆ. ಬಿರುಕು ಬಿಟ್ಟಿದೆ ಅಂದವರು ಅದನ್ನ ತೋರಿಸಲಿ. ಈ ವಿಚಾರವನ್ನಷ್ಟೆ ನಾನು ಹೇಳಿದ್ದು, ನಾನು ಮೈಸೂರು-ಕೊಡಗು ಸಂಸದ ಅನ್ನುವ ಬಗ್ಗೆ ಜನರಿಗೆ ಗೊಂದಲ ಇಲ್ಲ. ನಾನು ಮೈಸೂರಿನಲ್ಲೇ ವಾಸವಿದ್ದೇನೆ. ಕೊಡಗಿಗೂ ಬರ್ತಿರ್ತೇನೆ, ಅಭಿವೃದ್ಧಿ ಕಾರ್ಯ ಮಾಡ್ತಿದ್ದೇನೆ. ಗೊಂದಲ ಮಂಡ್ಯದವರಿಗೆ ಇರುತ್ತೆ. ಅವ್ರಿಗೆ ನಾವು ವೋಟ್ ಹಾಕಿದವ್ರು ಎಲ್ಲಿದ್ದಾರೆ ಅಂತ ಗೊಂದಲ ಇದೆ. ಮಂಡ್ಯದವರಿಗೆ ಗೊಂದಲ ಇದೆ ಹೊರತು ಕೊಡಗು-ಮೈಸೂರಿನವರಿಗೆ ಇಲ್ಲ ಎಂದರು.

ಸುಮಲತಾ ಅವರು ಕೆಆರ್‌ಎಸ್ ಬಿರುಕು ಬಿಟ್ಟಿದ್ದರೆ ತೋರಿಸಿಕೊಡಲಿ, ಇಲ್ಲಾ ಅಂದರೆ ಹೇಳಿದ್ದು ತಪ್ಪಾಗಿದೆ ಎಂದು ಸುಮ್ಮನಾಗಲಿ. ಕೆಆರ್‌ಎಸ್‌ಗೆ ನೀರು ಕೊಡಗಿನಿಂದ ಬರುತ್ತೆ. ಬಿರುಕು ಬಿಟ್ಟಿದೆ ಅನ್ನೋದು ಗಂಭೀರ ವಿಚಾರ. ಸರಿಯಾದ ಮಾಹಿತಿ ಇದ್ರೆ ಸರಿಪಡಿಸೋದಕ್ಕೆ ಮುಖ್ಯಮಂತ್ರಿಯನ್ನು ಕೇಳೋಣ. ಸಾಕ್ಷಿಗಳಿದ್ದರೆ ಬಹಿರಂಗಪಡಿಸಿ. ತಪ್ಪು ಮಾಹಿತಿ ಇದ್ರೆ ಅದನ್ನೂ ಒಪ್ಪಿಕೊಳ್ಳಲಿ. ಕೆಆರ್‌ಎಸ್ ಮಂಡ್ಯ ಸಂಸದರ ಆಸ್ತಿ ಅಲ್ಲ. ಇದು ಎಲ್ಲರಿಗೂ ಸೇರಿದ್ದು, ರಾಜ್ಯದ ರಾಷ್ಟ್ರದ ಆಸ್ತಿ ಎಂದು ಪ್ರತಾಪ್ ಸಿಂಹ ಹೇಳಿದರು.

ಕೆಆರ್‌ಎಸ್ ವಿಚಾರದಲ್ಲಿ ಅಂಬರೀಷ್ ಹೆಸರು ಪ್ರಸ್ತಾಪವಾಗ್ತಿರೋದಕ್ಕೆ ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದ್ರು. ಅಂಬರೀಷಣ್ಣ ರಾಜ್ಯ ಕಂಡ ಒಳ್ಳೆಯ ನಟ. ಹೃದಯವಂತಿಕೆ ಇದ್ದ ನಟ, ಕರ್ಣ ಅಂತ ಕರೆಯುತ್ತೇವೆ. ದಾನ ಧರ್ಮದಲ್ಲಿ ಎತ್ತಿದ ಕೈ ಆಗಿದ್ರು. ಅವರ ವಿಚಾರ ಇಲ್ಲಿ ಪ್ರಸ್ತಾಪ ಆಗೋದು ಬೇಡ. ಅವರಿಗೆ ಇಡೀ ರಾಜ್ಯ ಗೌರವ ಕೊಡಬೇಕು. ಅವರನ್ನು ನಾವು ಹೃದಯದಲ್ಲಿಟ್ಟು ಆರಾಧಿಸುತ್ತೇವೆ. ಅವರನ್ನು ಯಾರೂ ಈಗ ಎಳೆತರೋದು ಬೇಡ ಎಂದು ಮನವಿ ಮಾಡಿದರು.

ಹೇಳಿಕೆಗಳ ಮೇಲಾಟ ಬಿಟ್ಟು ಬಿರುಕು ಬಿಟ್ಟಿದೆಯೇ ಅನ್ನೋದನ್ನ ಸಾಬೀತುಮಾಡಬೇಕು. ಇನ್ನು ಡಿಸಿ ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರವಾಗಿ ಪ್ರತಾಪ್ ಸಿಂಹ ವಿರುದ್ಧ ಸುಮಲತಾ ಆರೋಪಿಸಿದ್ದಕ್ಕೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ನಾನೀಗ ಪ್ರಶ್ನೆ ಮಾಡ್ಬೇಕು. ಸುಮಲತಾ ಮಂಡ್ಯ ಸಂಸದರೋ ಅಥವ ಮೈಸೂರು ಸಂಸದರೋ ಎನ್ನುವ ಮೂಲಕ ಕುಟುಕಿದರು.

ಪ್ರತಾಪ್ ಸಿಂಹ ಕೆಆರ್‌ಎಸ್ ಜಲಾಶಯದ ವಿಚಾರವಾಗಿ ನಿನ್ನೆ ಮೈಸೂರಿನಲ್ಲಿ ನೀಡಿದ್ದ ಹೇಳಿಕೆಗೆ ಮಂಡ್ಯ ಸಂಸದೆ ಸುಮಲತಾ, ಪ್ರತಾಪ್ ಸಿಂಹ ಮಂಡ್ಯ ಸಂಸದರೋ ಅಥವ ಮೈಸೂರು ಸಂಸದರೋ ಎಂದು ಪ್ರಶ್ನಿಸಿದ್ರು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ivan dsouza ಐವನ್ ಡಿಸೋಜಾ

ಐವನ್ ಡಿಸೋಜಾ ಮನೆ ಮೇಲೆ ಕಲ್ಲುತೂರಾಟ: ಬಂಟ್ವಾಳ ಮೂಲದ ಇಬ್ಬರ ಬಂಧನ

ಐವನ್ ಡಿಸೋಜಾ ಮನೆ ಮೇಲೆ ಕಲ್ಲುತೂರಾಟ: ಬಂಟ್ವಾಳ ಮೂಲದ ಇಬ್ಬರ ಬಂಧನ Twitter Facebook LinkedIn WhatsApp ಮಂಗಳೂರು, ಆಗಸ್ಟ್​​ 28: ರಾಜ್ಯಪಾಲರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಎಂಎಲ್​ಸಿ ಐವನ್ ಡಿಸೋಜಾ (Ivan D’Souza)  ಮನೆ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು