ಸಿಎಂ ಉಪ ಕಾರ್ಯದರ್ಶಿಯಾಗಿ ಅರುಣ್ ಫುರ್ಟಾಡೊ ನೇಮಕ
Twitter
Facebook
LinkedIn
WhatsApp
ಮಡಂತ್ಯಾರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಪ ಕಾರ್ಯದರ್ಶಿ (ಆಡಳಿತ) ಆಗಿ ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಮೂಲದ ಅರುಣ್ ಫುರ್ಟಾಡೊ ಅವರನ್ನು ನಿಯೋಜನೆ ಮಾಡಲಾಗಿದೆ.
ಈ ಕುರಿತು ಸರ್ಕಾರದ (ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ) ಅಧೀನ ಕಾರ್ಯದರ್ಶಿ ಕೆ.ವಿ ಅಶೋಕ ಅವರು ಆದೇಶ ಹೊರಡಿಸಿದ್ದಾರೆ. ಅರುಣ್ ಫುರ್ಟಾಡೊ, ಹೆಚ್ಚುವರಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ (ಪ್ರಸ್ತುತ ನಿರ್ದೇಶಕರು, ಡಾ ಬಾಬು ಜಗಜೀವನರಾಮ್ ಸಂಶೋಧನಾ ಕೇಂದ್ರ, ಬೆಂಗಳೂರು) ಅವರನ್ನು ಮುಖ್ಯಮಂತ್ರಿಯವರ ಅಧಿಕಾರಾವಧಿ ಅಥವಾ ಮುಂದಿನ ಆದೇಶದವರೆಗೆ ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿಯಾಗಿ ಹುದ್ದೆಗೆ ನಿಯೋಜನೆ ಮಾಡಿ ತಕ್ಷಣವೇ ಜಾರಿಗೆ ಬರುವಂತೆ ನೇಮಿಸಿ ಆದೇಶ ಹೊರಡಿಸಲಾಗಿದೆ.