ನವದೆಹಲಿ (ಮೇ 15): ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೋ ದರ (Repo Rate) ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಕೂಡ ಇಂದಿನಿಂದ (ಜೂ.15) ಜಾರಿಗೆ ಬರುವಂತೆ ಸಾಲಗಳ (Loans) ಮೇಲಿನ ಬಡ್ಡಿದರವನ್ನು (Interest rate) 20 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಳ ಮಾಡಿದೆ. ಒಂದು ದಿನ, ಒಂದು ತಿಂಗಳು ಹಾಗೂ 3 ತಿಂಗಳ ಅವಧಿಯ ಸಾಲಗಳ ಮೇಲಿನ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ (MCLR) ಅನ್ನು ಪ್ರಸ್ತುತವಿರುವ ಶೇ.6.85ರಿಂದ ಶೇ.7.05ಕ್ಕೆ ಹೆಚ್ಚಿಸಲಾಗಿದೆ. ಇನ್ನು ಆರು ತಿಂಗಳ ಅವಧಿಯ ಸಾಲಗಳ ಮೇಲಿನ ಬಡ್ಡಿದರವನ್ನು ಪ್ರಸ್ತುತವಿರುವ ಶೇ.7.15ರಿಂದ ಶೇ.7.35ಕ್ಕೆ ಏರಿಕೆ ಮಾಡಲಾಗಿದೆ. ಇನ್ನು ಒಂದು ವರ್ಷದ ಸಾಲದ ಮೇಲಿನ ಬಡ್ಡಿದರ ಪ್ರಸ್ತುತವಿರುವ ಶೇ.7.20ರಿಂದ ಶೇ.7.40ಕ್ಕೆ ಹೆಚ್ಚಳವಾಗಲಿದೆ. ಇನ್ನು ಮೂರು ವರ್ಷಗಳ ಅವಧಿಯ ಸಾಲಗಳ ಮೇಲಿನ ಬಡ್ಡಿದರ ಪ್ರಸ್ತುತವಿರುವ ಶೇ.7.50ರಿಂದ ಶೇ.7.70ಕ್ಕೆ ಹೆಚ್ಚಳವಾಗಲಿದೆ.
ಗೃಹ ಸಾಲಎಸ್ ಬಿಐ ಗೃಹ ಸಾಲದ ಮೇಲಿನ ಬಡ್ಡಿದರ ಸಿಬಿಲ್ ಸ್ಕೋರ್ (CIBIL score) ಆಧರಿಸಿ ಶೇ.7.05ರಿಂದ ಶೇ. 7.55ರ ನಡುವೆ ಇದೆ. ಈ ತಿಂಗಳ ಮೊದಲ ದಿನದಿಂದಲೇ ಜಾರಿಗೆ ಬರುವಂತೆ ಎಸ್ ಬಿಐ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಈಗಾಗಲೇ ಹೆಚ್ಚಿಸಿದೆ. ಪ್ರಸ್ತುತ 800 ಅಥವಾ ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಿರೋರಿಗೆ ಎಸ್ ಬಿಐ ಗೃಹ ಸಾಲಕ್ಕೆ ಶೇ. 7.05 ಬಡ್ಡಿ ವಿಧಿಸುತ್ತಿದೆ. ಇನ್ನು 750-799 ಸಿಬಿಲ್ ಸ್ಕೋರ್ ಹೊಂದಿರೋರಿಗೆ ಶೇ.7.15 ಬಡ್ಡಿದರ ವಿಧಿಸಲಾಗುತ್ತಿದೆ. 700-749 ಸಿಬಿಲ್ ಸ್ಕೋರ್ ಹೊಂದಿದ್ರೆ ಶೇ.7.25 ಹಾಗೂ 650-699 ಇದ್ರೆ ಶೇ.7.35 ಬಡ್ಡಿ ವಿಧಿಸಲಾಗುತ್ತಿದೆ. 550-649 ಸಿಬಿಲ್ ಸ್ಕೋರ್ ಹೊಂದಿರೋರಿಗೆ ಅತ್ಯಧಿಕ ಅಂದ್ರೆ ಶೇ.7.55 ಬಡ್ಡಿದರವಿದೆ.
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist