`ಶೈಲೂ’ ನಟಿ ಭಾಮಾ ದಾಂಪತ್ಯ ಬದುಕಿನಲ್ಲಿ ಬಿರುಕು?
ಕನ್ನಡದ ಶೈಲೂ, ಆಟೋರಾಜ, ರಾಗಾ, ಮೊದಲ ಸಲ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿ ಭಾಮಾ (Actress Bhama) ನಟಿಸಿದ್ದಾರೆ. ಇದೀಗ ತಮ್ಮ ವೈಯಕ್ತಿಕ ವಿಚಾರವಾಗಿ ನಟಿ ಸುದ್ದಿಯಲ್ಲಿದ್ದಾರೆ. ಭಾಮಾ ಅವರ ಸೋಷಿಯಲ್ ಮೀಡಿಯಾ ಫೋಟೋಗಳು ಡಿಲೀಟ್ ಆಗಿರೋದ್ರಿಂದ ಅನೇಕ ಅನುಮಾನ ಶುರುವಾಗಿದೆ. ಪತಿಯಿಂದ ನಟಿ ದೂರ ಸರಿದಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
2018ರಿಂದ ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡಿದ್ದ ನಟಿ ಭಾಮಾ ಅವರ ವೈಯಕ್ತಿಕ ಬದುಕಲ್ಲಿ ಬಿರುಗಾಳಿ ಎದ್ದಿದೆ ಎನ್ನಲಾಗುತ್ತಿದೆ. 2020ರಲ್ಲಿ ಉದ್ಯಮಿ ಅರುಣ್ (Arun) ಅವರನ್ನು ಭಾಮಾ ಮದುವೆಯಾಗಿದ್ದರು. ಎರಡು ವರ್ಷದ ಮಗಳು ಕೂಡ ಇದ್ದಾರೆ. ಪತಿ, ಮಗಳು, ಸಂಸಾರ ಎಂದು ಬ್ಯುಸಿಯಿದ್ದ ನಟಿ ಬದುಕಲ್ಲಿ ಬಿರುಕು ಮೂಡಿದೆ ಎನ್ನಲಾಗುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಭಾಮಾ ಅವರು ಮದುವೆ ಜೀವನಕ್ಕೆ ಕಾಲಿಟ್ಟಾಗಿನಿಂದಲೂ ಪತಿಯ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇದ್ದರು. ಆದರೆ ಈಗ ಪತಿಯ ಜೊತೆಗಿನ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಡಿಲೀಟ್ ಮಾಡಿದ್ದಾರೆ. ಇದರಿಂದ ಭಾಮಾ ಅವರು ಪತಿಯಿಂದ ಬೇರೆ ಆಗಿದ್ದಾರಾ ಎಂಬ ಚರ್ಚೆ ನಡೆಯುತ್ತಿದೆ.
ಇನ್ನೂ ಮಗಳ ಮೊದಲ ವರ್ಷದ ಹುಟ್ಟುಹಬ್ಬವನ್ನು ಭಾಮಾ ದಂಪತಿ ಅದ್ದೂರಿಯಾಗಿ ಆಚರಿಸಿದ್ದರು. ಈ ಕುರಿತ ವೀಡಿಯೋ ಕೂಡ ಶೇರ್ ಮಾಡಿದ್ದರು. ಬಳಿಕ ಎರಡನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ ಫೋಟೋ ಹಂಚಿಕೊಂಡಿಲ್ಲ. ಹಾಗಾಗಿ ಅನುಮಾನ ಶುರುವಾಗಿದೆ.