ಸೋಮವಾರ, ಅಕ್ಟೋಬರ್ 2, 2023
Galaxy S23 FE: ಸ್ಯಾಮ್ಸಂಗ್ ಗ್ಯಾಲಕ್ಸಿ S23 ಎಫ್​ಇ ಸ್ಮಾರ್ಟ್​ಫೋನ್ ಅ.4 ರಂದು ಬಿಡುಗಡೆ!-ಜಿಂಬಾಬ್ವೆಯಲ್ಲಿ ವಿಮಾನ ಪತನ ; ಭಾರತದ ಕೋಟ್ಯದೀಶ್ವರ ಹಾಗೂ ಗಣಿ ಉದ್ಯಮಿ ಮತ್ತು ಅವರ ಪುತ್ರ ದುರ್ಮರಣ!-ಸಂಕ್ರಾಂತಿ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ; ಸಿಪಿ ಯೋಗೇಶ್ವರ್ ಬಾಂಬ್-ದಿಗ್ಗಜ ಮಾಜಿ ಓಟಗಾರ್ತಿ ಪಿ.ಟಿ ಉಷಾರವರ ರಾಷ್ಟ್ರೀಯ ದಾಖಲೆ ಸರಿಗಟ್ಟಿ ಪದಕ ಸುತ್ತಿಗೇರಿದ ವಿತ್ಯಾ!-ನೀವು ಹೆದರಿಸದರೆ ಮಾತ್ರಕ್ಕೆ ನಾನು ಹೆದರಲ್ಲ ದೇವೇಗೌಡರಿಗೆ ಡಿಕೆಶಿ ಟಾಂಗ್!-ಜಿಪಿಎಸ್ ಮ್ಯಾಪ್ ನೋಡಿ ಕಾರನ್ನು ಚಲಿಸುವುತ್ತಿರುವಾಗ ನದಿಗೆ ಬಿದ್ದು ಇಬ್ಬರು ವೈದ್ಯರು ಸಾವು ; ಮೂವರು ಪಾರು!-ಹೃದಯ ವಿದ್ರಾವಕ ಘಟನೆ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸೇರಿ 6 ಮಂದಿ ಹತ್ಯೆ-ಬೆಂಗಳೂರಿನ ಕಂಬಳಕ್ಕೆ ಹೇಗಿದೆ ತಯಾರಿ; ದಕ್ಷಿಣ ಕನ್ನಡ ಭಾಗದ 150 ಫುಡ್ ಸ್ಟಾಲ್ ಏರ್ಪಾಡು..!-ಪಿಯುಸಿಯಲ್ಲಿ ಅಂಕ ಕಡಿಮೆ ಬಂತೆಂದು ಮನನೊಂದು ಅಪಾರ್ಟ್‌ಮೆಂಟ್‌ನಿಂದ ಜಿಗಿದ ಬಾಲಕಿ ; ರಕ್ಷಣೆಗೆ ಧಾವಿಸಿದ ಯುವಕ - ಇಲ್ಲಿದೆ ವಿಡಿಯೋ-ಬರ್ತ್‌ಡೇ ಪಾರ್ಟಿಯಲ್ಲಿ ಡೆಕೋರೇಷನ್‌ಗೆ ಹಾಕಿದ್ದ ಹೀಲಿಯಂ ಬಲೂನ್‌ ಬ್ಲಾಸ್ಟ್‌ ; ಐವರು ಗಂಭೀರ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ವ್ಯಕ್ತಿಯೊಂದಿಗೆ ನಾಲ್ಕು ಮಕ್ಕಳ ತಾಯಿ ಪರಾರಿ; ಲವ್‌ ಜಿಹಾದ್‌ ಆರೋಪ

Twitter
Facebook
LinkedIn
WhatsApp
Gadag Woman

ಗದಗ: ಅವರದ್ದು ದಶಕಗಳ ಸಂಸಾರ. ಆ ದಂಪತಿಗೆ ನಾಲ್ವರು ಮಕ್ಕಳಿದ್ದಾರೆ. ಹಿರಿಮಗಳ ಮದುವೆ ಬಗ್ಗೆ ಯೋಚನೆ ಮಾಡಬೇಕಿದ್ದ ತಾಯಿ ಮತ್ತೊಬ್ಬನ ಜತೆ ಜೂಟ್‌ ಆಗಿದ್ದಾಳೆ. ಅದರಲ್ಲೂ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದು ಲವ್‌ ಜಿಹಾದ್‌ನ ಆರೋಪ ಕೇಳಿ ಬಂದಿದೆ. ನಾಲ್ಕು ಜನ ಮಕ್ಕಳಿದ್ರೂ ತಂದೆ, ತಾಯಿ ಯಾವುದಕ್ಕೂ ಕೊರತೆ ಮಾಡಿರಲಿಲ್ಲ. ಹೆಂಡ್ತಿಯನ್ನೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಆದ್ರೆ ಆಕೆಯ ಚಿತ್ತವೇ ಬೇರೆ ಕಡೆ ಹರಿದಿತ್ತು. ನಾಲ್ಕು ಮಕ್ಕಳ ತಾಯಿಯಾಗಿದ್ದ ಈಕೆ ಮುಸ್ಲಿಂ ಯುವಕನ ಹಿಂದೆ ಹೋಗಿದ್ದಾಳೆ . ಆತನನ್ನೇ ಮದುವೆಯಾಗಿ ಇಸ್ಲಾಂಗೆ ಮತಾಂತರ ಆಗಿದ್ದಾಳೆ. ಇದೇ ಪ್ರಕರಣದ ಹಿಂದೆ ಲವ್‌ ಜಿಹಾದ್‌ನ ಆರೋಪ ಕೇಳಿ ಬಂದಿದೆ. ನನ್ನ ಪತ್ನಿ ನನಗೆ ಬೇಕು ಎಂದು ಗಂಡ ಕಣ್ಣೀರು ಹಾಕುತ್ತಿದ್ದಾನೆ.

ಹೃದಯದ ಶಸ್ತ್ರಚಿಕಿತ್ಸೆ ಆಗಿ ಅನಾರೋಗ್ಯಕ್ಕೆ ಜಾರಿದ್ರೂ ಪತ್ನಿ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಅಷ್ಟಕ್ಕೂ ಗದಗ ನಗರದ ನಿವಾಸಿಯಾಗಿರುವ ಪ್ರಕಾಶ್‌ ಎನ್ನುವರು ಹೇಮಾವತಿ ಎಂಬಾಕೆಯನ್ನ ಮದುವೆಯಾಗಿದ್ದರು. ಇವರ ಸುಖ ಸಂಸಾರಕ್ಕೆ ನಾಲ್ಕು ಮಂದಿ ಮಕ್ಕಳಿದ್ದರು. ದಶಕಗಳಿಂದಲೂ ಚೆನ್ನಾಗಿದ್ದ ಇವರ ಸಂಸಾರದಲ್ಲಿ ಅದೊಬ್ಬ ಹುಳಿ ಹಿಂಡಿದ್ದಾನೆ. 6 ತಿಂಗಳ ಹಿಂದೆ ಹೇಮಾವತಿ ಇದ್ದಕ್ಕಿದ್ದಂತೆ ತನ್ನ ಚಿಕ್ಕ ಮಗಳ ಜತೆ ನಾಪತ್ತೆಯಾಗಿದ್ದಳು. ಈ ಬಗ್ಗೆ ಪ್ರಕಾಶ್‌ ನಾಪತ್ತೆ ಕೇಸ್‌ ದಾಖಲಿಸಿದ್ದ. ಆಗ ಗೊತ್ತಾಗಿದ್ದೇ ಆಕೆಯ ಸೆಕೆಂಡ್‌ ಇನ್ನಿಂಗ್ಸ್‌. ಮಕ್ಬುಲ್ ಅನ್ನೋ ಮುಸ್ಲಿಂ ಯುವಕ ಹೇಮಾವತಿಯನ್ನ ಮದುವೆಯಾಗಿರುವುದು ಗೊತ್ತಾಗಿದೆ.

ಇನ್ನು ಹಾವೇರಿ ಜಿಲ್ಲೆ ಸವಣೂರ ಗ್ರಾಮದ ಮಕ್ಬುಲ್‌ ಕೂಡಾ ಗೋವಾಕ್ಕೆ ದುಡಿಯಲು ಹೋಗಿದ್ದ. ಅಲ್ಲೇ ಪ್ರಕಾಶ್‌ ಫ್ಯಾಮಿಲಿಯ ಪರಿಚಯ ಆಗಿತ್ತು. ಗೋವಾದಲ್ಲಿ ಬಾಡಿಗೆ ಮನೆ ಕೊಡಿಸಲು ನೆರವಾಗಿದ್ದವನು ಪ್ರಕಾಶ್‌ ಹೆಂಡ್ತಿಯನ್ನೇ ಪಟಾಯಿಸಿದ್ದ. ಆಕೆಯ ತಲೆಗೆ ಇಲ್ಲಸಲ್ಲದ್ದನ್ನ ತುಂಬಿದ್ದಾನೆ. ಕೊನೆಗೆ ಮೂವರು ಮಕ್ಕಳು ಹಾಗೂ ಗಂಡನನ್ನೇ ಬಿಟ್ಟುಬರುವಷ್ಟು ಬ್ರೇನ್‌ವಾಷ್‌ ಮಾಡಿದ್ದಾನೆ ಎನ್ನುವುದು ಆಕೆಯ ಪತಿ ಪ್ರಕಾಶ್ ಆರೋಪವಾಗಿದೆ.

ಗದಗ ನಗರದ ನಿವಾಸಿ ಪ್ರಕಾಶ್ ಗುಜರಾತಿ ಎನ್ನುವ ಕುಟುಂಬ ಸದ್ಯ ಅಕ್ಷರಶಃ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ಸುಮಾರು ಆರೇಳು ತಿಂಗಳಿಂದ ಹೆಂಡತಿ ಕಾಣ್ತಿಲ್ಲ, ನಾಲ್ಕು ಜನ ಮಕ್ಕಳಲ್ಲಿ ಒಬ್ಬ ಮಗಳೂ ನಾಪತ್ತೆಯಾಗಿದ್ದಳು. ಪೊಲೀಸರಿಗೆ ದೂರು ಕೊಟ್ಟಾಗಲೇ ಗೊತ್ತಾಗಿದ್ದು ಮನೆ ಬಾಡಿಗೆ ಕೊಡಿಸಿದ್ದ ಮುಸ್ಲಿಂ ಯುವಕನ ಜೊತೆ ಹೆಂಡತಿ ಪರಾರಿಯಾಗಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಾಳೆ ಎಂಬ ಕಟುಸತ್ಯ. ಕಳೆದ ಲಾಕ್ ಡೌನ್ ನಲ್ಲಿ ಗೋವಾಕ್ಕೆ ತೆರಳಿದ್ದಾಗ ಬಾಡಿಗೆ ಮನೆ ಕೊಡಿಸುವುದಾಗಿ ಹೇಳಿ ಪರಿಚಯವಾದ ಮುಸ್ಲಿಂ ಯುವಕ ಮುಕ್ಬೂಲ್ ಬಾಯಬಡಕಿ, ಪ್ರಕಾಶ್ ಗುಜರಾತಿ ಅವರ ಹೆಂಡತಿಯನ್ನ ಪುಸಲಾಯಿಸಿ ಆಕೆಯನ್ನ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿಸಿ ಆಕೆಯನ್ನೇ ಮದುವೆಯಾಗಿದ್ದಾನೆ ಎಂದು ಪ್ರಕಾಶ್ ಗುಜರಾತಿ ಆರೋಪಿಸಿದ್ದಾನೆ. ಇದಷ್ಟೇ ಅಲ್ಲದೆ ಸದ್ಯ ನಾಲ್ಕು ಜನ ಮಕ್ಕಳಲ್ಲಿ ಒಬ್ಬ ಅಪ್ರಾಪ್ತೆ ಬಾಲಕಿಯನ್ನೂ ಸಹ ಆ ಮುಸ್ಲೀಂ ಯುವಕನೇ ಕರೆದುಕೊಂಡು ಹೋಗಿ ಮತಾಂತರ ಮಾಡಿದ್ದಾನೆ ಎಂದು ಪ್ರಕಾಶ ಅನುಮಾನ ಹೊರಹಾಕಿದ್ದಾನೆ.

ಒಟ್ಟಿನಲ್ಲಿ ಮನೆ ಬಾಡಿಗೆ ಎಂದು ಬಂದವನು ಮನೆ ಯಜಮಾನಿಯನ್ನೇ ಪಟಾಯಿಸಿದ್ದಾನೆ. ಇದರ ಹಿಂದೆ ಲವ್‌ ಜಿಹಾದ್ ಆರೋಪ ಕೇಳಿ ಬಂದಿದ್ದು, ಪೊಲೀಸರು ತನಿಖೆ ನಡೆಸಬೇಕಿದೆ. ಶ್ರೀರಾಮ ಸೇನೆ ಕೂಡಾ ಎಂಟ್ರಿಯಾಗಿದೆ. ಲವ್‌ ಜಿಹಾದ್‌ ವಿರುದ್ಧ, ಮತಾಂತರದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ