ವೀಕೆಂಡ್ ಗೋಲ್ಡ್ ಶಾಪಿಂಗ್ ; ರಾಜ್ಯದಲ್ಲಿನ ಇಂದಿನ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟು..?
ಭಾರತದಲ್ಲಿ ಚಿನ್ನದ ಬೆಲೆ ನಿನ್ನೆ 200 ರೂಪಾಯಿಗಳಷ್ಟು ಇಳಿಕೆಯಾಗಿತ್ತು. ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ.ಗಳಷ್ಟು ಏರಿಕೆ ಕಂಡಿದೆ.ಭಾರತದಲ್ಲಿ 22 ಕ್ಯಾರಟ್ 1 ಗ್ರಾಂ, 8 ಗ್ರಾಂ ಮತ್ತು 10 ಗ್ರಾಂ ಚಿನ್ನದ ಬೆಲೆ ಕ್ರಮವಾಗಿ 5,585 ರೂ., 44,680 ರೂ., 55,850 ರೂಪಾಯಿ ಇದೆ. 24 ಕ್ಯಾರಟ್ 1 ಗ್ರಾಂ, 8 ಗ್ರಾಂ ಮತ್ತು 10 ಗ್ರಾಂ ಚಿನ್ನದ ಬೆಲೆ ಕ್ರಮವಾಗಿ 6,093 ರೂ., 48,744 ರೂ., 60,930 ರೂಪಾಯಿ ಆಗಿದೆ.
ರಾಜಧಾನಿ ಬೆಂಗಳೂರಿನಲ್ಲಿಯೂ ಚಿನ್ನದ ಬೆಲೆ ಕೊಂಚ ಏರಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂಪಾಯಿ ಏರಿಕೆಯಾಗಿದೆ. 22 ಕ್ಯಾರಟ್ 1 ಗ್ರಾಂ, 8 ಗ್ರಾಂ ಮತ್ತು 10 ಗ್ರಾಂ ಚಿನ್ನದ ಬೆಲೆ 5,590 ರೂ., 44,720 ರೂ., 55,900 ರೂಪಾಯಿ ಇದೆ. 24 ಕ್ಯಾರಟ್ 1 ಗ್ರಾಂ, 8 ಗ್ರಾಂ ಮತ್ತು 10 ಗ್ರಾಂ ಚಿನ್ನದ ಬೆಲೆ 6,098 ರೂಪಾಯಿ, 48,784 ರೂಪಾಯಿ ಮತ್ತು 60,980 ರೂಪಾಯಿ ಆಗಿದೆ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ: ಚೆನ್ನೈ: 56,330 ರೂ., ಮುಂಬೈ: 55,850 ರೂ., ದೆಹಲಿ: 56,000 ರೂ., ಕೋಲ್ಕತ್ತಾ: 55,850 ರೂ., ಹೈದರಾಬಾದ್: 55,850 ರೂ., ಪುಣೆ: 55,850 ರೂಪಾಯಿ ಆಗಿದೆ.
ಚಿನ್ನದ ಬೆಲೆ ಏರಿಕೆ ಕಂಡಿದ್ರೆ ಬೆಳ್ಳಿ ದರ ಸ್ಥಿರವಾಗಿದೆ. 10 ಗ್ರಾಂ ಬೆಳ್ಳಿ ಬೆಲೆ 762 ರೂಪಾಯಿ ಆಗಿದೆ. 1 ಕೆಜಿ ಬೆಳ್ಳಿ ಬೆಲೆ 76,200 ರೂಪಾಯಿ ಆಗಿದೆ. (ಸಾಂದರ್ಭಿಕ ಚಿತ್ರ)